Site icon Vistara News

Satish Jarkiholi: ಹಿಂದು ʼಅಶ್ಲೀಲʼ ಪದ ಹೇಳಿಕೆ; ಸಚಿವ ಸತೀಶ್ ಜಾರಕಿಹೊಳಿಗೆ ಕೋರ್ಟ್‌ ನೋಟಿಸ್

Satish jarkiholi

ಬೆಂಗಳೂರು: ಹಿಂದು ಧರ್ಮದ‌ ಕುರಿತ ಕಾಂಗ್ರೆಸ್‌ ಸಚಿವ ಸತೀಶ್ ಜಾರಕಿಹೊಳಿ ಅವರ ವಿವಾದಿತ ಹೇಳಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಹಿಂದು ಧರ್ಮದ‌ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದೂರು‌‌ ದಾಖಲಾಗಿದ್ದರಿಂದ ಸತೀಶ್ ಜಾರಕಿಹೊಳಿಗೆ (Satish Jarkiholi) ನ್ಯಾಯಾಲಯ ನೋಟಿಸ್‌ ನೀಡಿದೆ.

ವಕೀಲ‌ ದಿಲೀಪ್ ಕುಮಾರ್ ಎಂಬುವವರು ದೂರು ನೀಡಿದ್ದರಿಂದ ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಿಂದ ವಿಚಾರಣಗೆ ಹಾಜರಾಗುವಂತೆ ಸತೀಶ್‌ ಜಾರಕಿಹೊಳಿಗೆ ನೋಟಿಸ್‌ ನೀಡಲಾಗಿದೆ. 2022ರ ನವೆಂಬರ್‌ 7ರಂದು ಕಾರ್ಯಕ್ರಮವೊಂದರಲ್ಲಿ ಹಿಂದು ಪದಕ್ಕೆ ಆಶ್ಲೀಲ ಅರ್ಥವಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರ್ಟ್‌ಗೆ ವಕೀಲ‌ ದೂರು ನೀಡಿದ್ದಾರೆ.

ಹಿಂದು ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಚಿವ ಜಾರಕಿಹೊಳಿ ವಿರುದ್ಧ ಹಿಂದು ಸಂಘಟನೆಗಳು, ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ಹೊರಹಾಕಿದ್ದರು. ನಂತರ ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು. ಹಲವು ತಿಂಗಳ ಬಳಿಕ ಪ್ರಕರಣದಲ್ಲಿ ಸಚಿವರ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ | Assembly Session : ಜಮೀರ್‌ ಮುಸ್ಲಿಂ ಸ್ಪೀಕರ್‌ ಹೇಳಿಕೆ ಚರ್ಚೆಗೆ ಅವಕಾಶ; ನಾಳೆ ನಡೆಯಲಿದೆ ಬಿಗ್‌ ಫೈಟ್‌

ಹಿಂದುಗಳು ಮುಸ್ಲಿಮರ ಅಡಿಯಾಳುಗಳು ಎಂದೇ ಜಮೀರ್‌ ಹೇಳಿದ್ದು; ಆರ್‌. ಅಶೋಕ್‌

BJP Zameer R Ashok

ಬೆಂಗಳೂರು: ಸಚಿವ ಜಮೀರ್‌ ಅಹ್ಮದ್‌ (Zameer Ahmad Khan) ಅವರು ಹೈದರಾಬಾದ್‌ನ ಮುಸ್ಲಿಮರೇ ಸೇರಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಆಡಿದ ಮಾತಿನ ಅರ್ಥ ʻʻಹಿಂದುಗಳು ಮುಸ್ಲಿಮರ ಅಡಿಯಾಳುಗಳುʼ ಎಂದೇ ಆಗಿದೆ. ಹೀಗೆ ಸ್ಪೀಕರ್‌ ಸ್ಥಾನವನ್ನು (Speaker Post) ಮುಂದಿಟ್ಟುಕೊಂಡು ಅವರು ಹಿಂದು ಮತ್ತು ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಕೆಲಸ ಮಾಡಿದ್ದಾರೆ, ಇದನ್ನು ಕಾಂಗ್ರೆಸ್‌ನವರು ಸಮರ್ಥಿಸುತ್ತಿದ್ದಾರೆ ಎಂದು ರಾಜ್ಯ ವಿಧಾನಸಭೆಯ (Assembly Session) ವಿಪಕ್ಷ ನಾಯಕ ಆರ್.ಅಶೋಕ್ (R Ashok) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದು ದ್ವೇಷ ಪ್ರಕಟಿಸಿದ ಜಮೀರ್‌ ಅಹಮದ್‌ ಖಾನ್‌ ಅವರನ್ನು ವಜಾಗೊಳಿಸಬೇಕು, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಸೋಮವಾರ ಬೆಳಗ್ಗೆ ವಿಧಾನಸಭೆಯಲ್ಲಿ ಗದ್ದಲವೆಬ್ಬಿಸಿದರು. ಜಮೀರ್‌ ಅಹಮದ್‌ ಖಾನ್‌ ಪ್ರಶ್ನೆಗೆ ಉತ್ತರ ನೀಡಲು ನಿಂತಾಗ ಆಕ್ಷೇಪಿಸಿದರು. ಬಿಜೆಪಿ ಗದ್ದಲದಿಂದಾಗಿ ಸ್ಪೀಕರ್‌ ಖಾದರ್‌ ಅವರು ಸಂಧಾನ ಸಭೆ ನಡೆಸಿದರೂ ಫಲ ದೊರೆಯಲಿಲ್ಲ. ಬಳಿಕವೂ ಪ್ರತಿಭಟನೆ, ಗದ್ದಲ ಮುಂದುವರಿದಿತ್ತು. ಅದರ ನಡುವೆಯೇ ಸದನದ ಕಲಾಪ, ವಿಧೇಯಕಗಳ ಮಂಡನೆ ನಡೆದಿದೆ.

ಇದನ್ನೂ ಓದಿ | JDS National President: ದೇವೇಗೌಡರಿಗೆ ಗೇಟ್‌ ಪಾಸ್‌; ಜೆಡಿಎಸ್‌ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು!

ಈ ನಡುವೆ, ವಿಧಾನಸಭೆಯ ವಿಪಕ್ಷ ನಾಯಕ ಆರ್‌. ಅಶೋಕ್‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಅದರಲ್ಲಿ ಹಿಂದೂ- ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಹೇಳಿಕೆಯನ್ನು ಜಮೀರ್ ಅಹ್ಮದ್ ಅವರು ನೀಡಿದ್ದಾರೆ ಎಂದು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version