ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಕೋವಿಡ್-೧೯ ಪ್ರಕರಣಗಳ ಆರ್ಭಟ ತುಸು ಕಡಿಮೆಯಾಗಿದ್ದು, ಇಂದು 634 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ರಾಜ್ಯದಲ್ಲಿ ಈ ವೈರಸ್ ಸೋಂಕಿತರ ಸಂಖ್ಯೆ 39,59,458 ಕ್ಕೆ ಏರಿಕೆಯಾಗಿದೆ. ಇಂದು ಚಿಕಿತ್ಸೆ ಫಲಿಸದೇ ಇಬ್ಬರು ಮೃತಪಟ್ಟಿದ್ದಾರೆ.
ಎಂದಿನಂತೆ ರಾಜಧಾನಿ ಬೆಂಗಳೂರಿನಲ್ಲಿಯೇ ಅತಿಹೆಚ್ಚಿನ ಪ್ರಕರಣಗಳು (೬೧೦) ಪತ್ತೆಯಾಗಿವೆ. ಶುಕ್ರವಾರ ೫೦೩ ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದ ಇದುವರೆಗೆ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಸಂಖ್ಯೆ 39,14,846 ಕ್ಕೆ ಏರಿದೆ.
ಈಗ ಕೋವಿಡ್-೧೯ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 4,500 ಆಗಿದ್ದು, ಇದುವರೆಗೆ ಚಿಕಿತ್ಸೆ ಫಲಿಸದೇ 40,070 ಮಂದಿ ಮೃತಪಟ್ಟಿದ್ದಾರೆ. ಗುರುವಾಋ ಒಬ್ಬರು ಮೃತಪಟ್ಟಿದ್ದರು.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ ಇಂತಿದೆ
ಬಳ್ಳಾರಿ -02, ಬೆಳಗಾವಿ- 01, ಬೆಂಗಳೂರು ಗ್ರಾಮಾಂತರ – 02, ಬೆಂಗಳೂರು ನಗರ- 610, ದಕ್ಷಿಣಕನ್ನಡ -07, ಧಾರವಾಡ -01, ಕಲಬುರಗಿ -01, ಮೈಸೂರು -02, ಶಿವಮೊಗ್ಗ -01, ತುಮಕೂರು -01, ಉಡುಪಿ- 03, ಉತ್ತರಕನ್ನಡ -03
ಇದನ್ನೂ ಓದಿ | ದೇಶದಲ್ಲಿ ಹೆಚ್ಚಿದ ಕೊರೊನಾ ಅಬ್ಬರ: 24 ಗಂಟೆಯಲ್ಲೇ 12,847 ಹೊಸ ಕೇಸು