Site icon Vistara News

Heart Attack: ಹೃದಯಾಘಾತ ಹೆಚ್ಚಳಕ್ಕೆ ಕೋವಿಡ್‌ ಕಾರಣವಲ್ಲ: ಡಾ.ಸಿ.ಎನ್. ಮಂಜುನಾಥ್

Vistara Editorial, Dr. C.N. Manjunath service is unforgettable

ಬೆಂಗಳೂರು: ಕೋವಿಡ್‌ನಿಂದಲೇ ಹೃದಯಾಘಾತ ಪ್ರಕರಣಗಳ (Heart Attack) ಸಂಖ್ಯೆ ಹೆಚ್ಚಿದೆ ಎಂದು ಹೇಳಲು ಆಗಲ್ಲ. ಕೋವಿಡ್ ಲಸಿಕೆಯಿಂದ ಹೃದಯಾಘಾತ ಹೆಚ್ಚಿಲ್ಲ, ಕೋವಿಡ್ ಬಂದವರು ಕೆಲಸ ಮಾಡಬಾರದು ಎಂಬುವುದಕ್ಕೆ ವೈಜ್ಞಾನಿಕ ಆಧಾರ ಇಲ್ಲ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್‌ ತಿಳಿಸಿದ್ದಾರೆ.

ಕೊರೊನಾ ಬಂದವರು ಹೆಚ್ಚು ಕೆಲಸ ಮಾಡಬಾರದು ಎಂಬ ಕೇಂದ್ರ ಸರ್ಕಾರದ ಸೂಚನೆ ಬಗ್ಗೆ ಜಯದೇವ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10-15 ವರ್ಷಗಳಿಂದ ದೇಶ, ರಾಜ್ಯದಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚಿದೆ. 2015 ರಿಂದ 2020ರವರೆಗೆ ಶೇ.15 ರಷ್ಟು ರೋಗಿಗಳಿಗೆ ಚಿಕಿತ್ಸೆ ಕೊಟ್ಟಿದ್ದೇವೆ. ಇದರಲ್ಲಿ ಶೇ.8 ರಷ್ಟು ರೋಗಿಗಳು ಮಹಿಳೆಯರೇ ಇದ್ದಾರೆ. ಶೇ.25 ರಷ್ಟು ರೋಗಿಗಳಿಗೆ ಹೃದಯಾಘಾತಕ್ಕೆ ಕಾರಣಗಳೇ ಇಲ್ಲ. ಶೇ.15 ರೋಗಿಗಳಿಗೆ ಅನುವಂಶೀಯತೆ ಹಿನ್ನೆಲೆ ಇದ್ದು, ವಾಯುಮಾಲಿನ್ಯವೂ ಕೂಡ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಕೊರೊನಾ ನಂತರದ ಅಪಾಯ, ಸಮಗ್ರ ಅಧ್ಯಯನ ಅಗತ್ಯ

ಕಳೆದ 1 ವರ್ಷದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರಿಗೆ ವಾಯು ಮಾಲಿನ್ಯದ ಎಫೆಕ್ಟ್ ಆಗಿದೆ. ಒತ್ತಡ ಕೂಡ ಹೃದಯದ ಮೇಲೆ ಪರಿಣಾಮ ಬೀರುತ್ತಿದೆ. ಕೆಲ ಯುವಕರಲ್ಲಿ ಡ್ರಗ್ ಸೇವನೆ ಕೂಡ ಕಾರಣವಾಗಿದೆ. ಪ್ರತಿ 250 ಜನರಲ್ಲಿ ಒಬ್ಬರಿಗೆ ಕೊಲೆಸ್ಟ್ರಾಲ್ ಇರುತ್ತದೆ, ಈ ಕೊಲೆಸ್ಟ್ರಾಲ್ ಪ್ರಮಾಣ ಕೂಡ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಬೇರೆ ದೇಶಗಳಿಗಿಂತ ಭಾರತೀಯರಿಗೆ ಹೆಚ್ಚು ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಿದರು.

ನವರಾತ್ರಿ ಹೃದಯಾಘಾತದಿಂದ ಹೆಚ್ಚು ಜನ ಮೃತಪಟ್ಟ ಬಗ್ಗೆ ಪ್ರತಿಕ್ರಿಯಿಸಿ, ಸತ್ತವರ ದೇಹಗಳನ್ನು ಮರಣೋತ್ತರ ಪರೀಕ್ಷೆ ಮಾಡಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದರೆ ಕಾರಣ ತಿಳಿಯುತ್ತಿತ್ತು. ಎಲ್ಲದಕ್ಕೂ ಹಾರ್ಟ್ ಅಟ್ಯಾಕ್ ಕಾರಣ ಆಗಲ್ಲ, ಕೆಲವರಿಗೆ ಹೃದಯದ ಸ್ನಾಯುಗಳು ಕೂಡ ಗಟ್ಟಿ ಇರುತ್ತವೆ. ಜಿಮ್, ವ್ಯಾಯಾಮ ಎಲ್ಲಾ ಮಿತಿಯಲ್ಲಿರಬೇಕು. ಅವರವರ ದೇಹಕ್ಕೆ ತಕ್ಕಂತೆ ವ್ಯಾಯಾಮ ಮಾಡಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆ, ಎನ್‌ಎಚ್‌ಎಂ, ಜಯದೇವ ಸಹಯೋಗದಲ್ಲಿ ಹಬ್ ಆ್ಯಪ್ ಸ್ಪೋಕ್ ಯೋಜನೆ ಮಾಡಿದ್ದೇವೆ. ಮೈಸೂರು, ಗುಲ್ಬರ್ಗ, ಬೆಂಗಳೂರಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಈ ಬಗ್ಗೆ ನಿಗಾ ಇಡಲಾಗಿದೆ. ಆಂಜಿಜಿಯೋಪ್ಲಾಸ್ಟಿ ಮಾಡಲಾಗದ ಕಡೆ ಇದು ಸಹಾಯವಾಗಲಿದೆ. ತುರ್ತಾಗಿ ರೋಗಿಗೆ ನೆರವು ನೀಡಲು ಇದು ಸಹಾಯಕ. ಪ್ರತಿ ತಾಲೂಕಿನ ವೈದ್ಯರಿಗೆ ಕಿಟ್ ಕೊಡಲಾಗಿದೆ. ಏಜೆನ್ಸಿಗಳ ಮೂಲಕ ಕೂಡ ಇದನ್ನು ನಿರ್ವಹಣೆ ಮಾಡಲಾಗುತ್ತದೆ. ಪ್ರಥಮ ಚಿಕಿತ್ಸೆ ಬಳಿಕ ಹತ್ತಿರದ ಆಸ್ಪತ್ರೆಗೆ ರೋಗಿಯನ್ನು ಸಾಗಿಸಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ | ಹೃದಯಾಘಾತ ಭೀತಿ; ಕೊರೊನಾದಿಂದ ಪಾರಾದವರು ಹೆಚ್ಚು ಕೆಲಸ ಮಾಡದಂತೆ ಕೇಂದ್ರ ಸೂಚನೆ!

ಬಿಎಂಟಿಸಿ ಸಿಬ್ಬಂದಿಗೆ ಹೃದಯಾಘಾತ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿ, 45 ರಿಂದ 55 ವರ್ಷದೊಳಗಿರುವವರಿಗೆ ಪರೀಕ್ಷೆ ಮಾಡಿದ್ದೇವೆ. ಶೇ. 5 ಸಿಬ್ಬಂದಿಗೆ ಹೃದಯ ಸಂಬಂಧಿ ಸಮಸ್ಯೆ, ಶೇ. 45 ರಕ್ತದ ಒತ್ತಡ ಇರುವುದು ಕಂಡುಬಂದಿದೆ. ಶೇ. 30 ಸಿಬ್ಬಂದಿಗೆ ಕೊಲೆಸ್ಟ್ರಾಲ್ ಇದ್ದು, ಶೇ. 25 ಧೂಮಪಾನಿಗಳಿದ್ದಾರೆ. ಸದ್ಯ ಇದನ್ನು ಗಮನಿಸಿದಾಗ ಹೈರಿಸ್ಕ್ ಗ್ರೂಪ್ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

Exit mobile version