Site icon Vistara News

ಮಗಳ ನಿಶ್ಚಿತಾರ್ಥಕ್ಕೆಂದು ಮನೆಯಲ್ಲಿ ಸಾಕಿದ್ದ ಹಸುವನ್ನೇ ಕೊಂದರು; ತಲೆಮರೆಸಿಕೊಂಡ ಮನೆ ಮಾಲೀಕ

ckm cow

ಚಿಕ್ಕಮಗಳೂರು: ಎನ್.ಆರ್.ಪುರ ತಾಲೂಕಿನ ಈಚಿಕೆರೆ ಗ್ರಾಮದ ಮನೆಯೊಂದರಲ್ಲಿ ನಿಶ್ಚಿತಾರ್ಥದ ಸಂಭ್ರಮ. ನೆಂಟರಿಷ್ಟರು, ಬಂಧು-ಬಳಗದವರ ಜತೆಗೆ ಗಂಡಿನ ಕಡೆಯವರೆಲ್ಲರೂ ಸೇರಿದ್ದರು. ಇವರಿಗೆ ಭಾರಿ ಭೋಜನವನ್ನು ಉಣಬಡಿಸಬೇಕು ಎಂಬ ನಿಟ್ಟಿನಲ್ಲಿ ಮಧುಮಗಳ ತಂದೆ ಮನೆಯಲ್ಲಿ ಸಾಕಿದ್ದ ಹಸುವನ್ನೇ ಕಡಿದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈಚಿಕೆರೆಯ ರೋಷನ್ ಎಂಬಾತನೇ ಮನೆಯಲ್ಲಿ ಸಾಕಿದ ಗೋವನ್ನು ವಧೆ ಮಾಡಿರುವುದು. ಮಗಳ ನಿಶ್ಚಿತಾರ್ಥಕ್ಕಾ ಮನೆಯಲ್ಲಿ ಸಾಕಿದ್ದ ಹಸುವನ್ನೇ ಕಡಿದಿದ್ದಾರೆ. ಇನ್ನೊಂದೆಡೆ ಅಡುಗೆ ತಯಾರಿಗೆ ಸಿದ್ಧತೆ ನಡೆಯುತ್ತಿತ್ತು. ಆದರೆ, ಇಷ್ಟರಲ್ಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ದೊರೆತಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಎನ್.ಆರ್.ಪುರ ಪೊಲೀಸರು ರೋಷನ್‌ ಮನೆ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರ ದಾಳಿ ತಿಳಿಯುತ್ತಿದ್ದಂತೆ ಹಲವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆದರೆ, ಈ ವೇಳೆ ಮಾಂಸ ಬೇರ್ಪಡಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ಮನೆ ಮಾಲೀಕ ರೋಷನ್‌ ಸೇರಿ ಉಳಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ | ವಿಚಿತ್ರ ಕಾಯಿಲೆ | ಹಾವೇರಿಯಲ್ಲಿ ಚರ್ಮಗಂಟು ರೋಗಕ್ಕೆ ಬಲಿಯಾಗುತ್ತಿವೆ ಜಾನುವಾರುಗಳು!

Exit mobile version