Site icon Vistara News

Cracker danger | ದೀಪಾವಳಿಗೆ ಹಚ್ಚಿದ ಪಟಾಕಿ ಕಿಡಿಯಿಂದ ಹೊತ್ತಿ ಉರಿದ ಕುಶನ್‌ ಅಂಗಡಿ

Cracker cushion

ಬೆಳಗಾವಿ: ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸುಡುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲವುದಿಲ್ಲ. ಇದಕ್ಕೆ ಉದಾಹರಣೆ ಎಂದರೆ ಸೋಮವಾರ ರಾತ್ರಿ ಬೆಳಗಾವಿಯ ಕಿತ್ತೂರು ಪಟ್ಟಣದಲ್ಲಿ ತಡರಾತ್ರಿ ನಡೆದ ಘಟನೆ.

ತಡರಾತ್ರಿ ಇಲ್ಲಿ ಸಿಡಿಸಲಾದ ಪಟಾಕಿಯೊಂದು ಕುಶನ್‌ ಅಂಗಡಿಯನ್ನು ಸುಟ್ಟು ಭಸ್ಮ ಮಾಡಿದೆ. ಪಟಾಕಿ ಸಿಡಿದು ಕಿಡಿಯೊಂದು ಹಾರಿ ಹೋಗಿ ಕುಶನ್‌ ಅಂಗಡಿಗೆ ಬಿದ್ದಿದ್ದು, ಆಗ ಇಡೀ ಅಂಗಡಿಗೆ ಬೆಂಕಿ ಹತ್ತಿಕೊಡಮಿದೆ. ಅಂದಾಜು 3 ಲಕ್ಷ ಮೌಲ್ಯದ ಸಿದ್ಧಗೊಂಡಿದ್ದ ಕುಶನ್, ಪೀಠೋಪಕರಣ ಬೆಂಕಿಗಾಹುತಿಯಾಗಿದೆ.

ಕಿತ್ತೂರು ಪಟ್ಟಣದ ಶಬೀರ್‌ ಎಂಬವರಿಗೆ ಸೇರಿದ ಕುಶನ್‌ ಅಂಗಡಿ ಇದು. ಶಬೀರ್‌ ಅವರ ಪಕ್ಕದ ಅಂಗಡಿಯ ಮಾಲೀಕರು ಲಕ್ಷ್ಮೀ ಪೂಜೆ ನಡೆಸಿದ್ದರು. ಬಳಿಕ ಪಾಟಕಿ ಸಿಡಿಸಲು ಮುಂದಾದಾಗ ಅದರ ಕಿಡಿ ಪಕ್ಕದ ಕುಶನ್ ಅಂಗಡಿಗೆ ಬಿದ್ದಿದೆ.

ಬೆಂಕಿ ನಂದಿಸಲು ಹೋದ ಶಬೀರ್‌ ಅವರ ಕೈ, ಕಾಲು ಇತರ ದೇಹದ ಭಾಗಗಳಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡು, ಬೆಂಕಿ ನಂದಿಸಲು ಹರಸಾಹಸಪಟ್ಟರು.

ಶಬೀರ್‌ ಕುಟುಂಬ ಕೆಳ ಮಹಡಿಯಲ್ಲಿ ವಾಸವಿದ್ದು, ಮೇಲ್ಮಹಡಿಯಲ್ಲಿ ಕುಶನ್ ಮಳಿಗೆ ಇದೆ. ಅದೃಷ್ಟವಶಾತ್‌ ಬೆಂಕಿ ಕೆಳ ಮಹಡಿಗೆ ಹರಡಿಲ್ಲ ಮತ್ತು ಯಾವುದೇ ಜೀವಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ | ಪಟಾಕಿ ಗಾಯ | ಹಬ್ಬದ ಮೊದಲ ದಿನವೇ 6 ಪ್ರಕರಣ ದಾಖಲು

Exit mobile version