ಚಿಕ್ಕಬಳ್ಳಾಪುರ: ಪಟಾಕಿ ಸುಡುವಾಗ ಸಂಭವಿಸಿದ ಅಚಾತುರ್ಯದಿಂದಾಗಿ ಮನೆ ಮತ್ತು ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಬಾಗೇಪಲ್ಲಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪಾಳ್ಯಕರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಅಶ್ವತ್ಥಪ್ಪ ಎಂಬವರಿಗೆ ಸೇರಿದ ಮನೆಯಲ್ಲಿ ದುರಂತ ನಡೆದಿದೆ.
ಲಕ್ಷ್ಮೀ ಹಬ್ಬದ ನಿಮಿತ್ತ ಅಂಗಡಿಯ ಮುಂದೆ ಮಕ್ಕಳು ಪಟಾಕಿ ಹಚ್ಚಿದ್ದರು. ಹೀಗೆ ಸಿಡಿಸಿದ ಪಟಾಕಿಯ ಒಂದು ಕಿಡಿ ಪೆಟ್ರೋಲ್ ಕ್ಯಾನ್ ಮೇಲೆ ಬಿದ್ದಿತ್ತು. ಇಲ್ಲಿ ಹೊತ್ತಿಕೊಂಡ ಬೆಂಕಿ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‌ವರೆಗೂ ವ್ಯಾಪಿಸಿತು. ಅಂಗಡಿ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‌ವರೆಗೆ ಸಾಗಿದೆ. ಈ ವೇಳೆ ಒಮ್ಮೆಲೇ ಸಿಲಿಂಡರ್‌ಗೆ ಬೆಂಕಿ ಹತ್ತಿಕೊಂಡಿದ್ದು, ಅದು ಸ್ಫೋಟಗೊಂಡಿದೆ.
ಇದರಿಂದ ಬೆಂಕಿ ಇನ್ನಷ್ಟು ವಿಶಾಲವಾಗಿ ಹರಡಿಕೊಂಡಿತು. ಕೂಡಲೇ ಸ್ಥಳೀಯರು ಸೇರಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಎಷ್ಟೋ ಹೊತ್ತಿನ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂತು. ಬಾಗೇಪಲ್ಲಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ | Cracker danger | ದೀಪಾವಳಿಗೆ ಹಚ್ಚಿದ ಪಟಾಕಿ ಕಿಡಿಯಿಂದ ಹೊತ್ತಿ ಉರಿದ ಕುಶನ್ ಅಂಗಡಿ