Site icon Vistara News

ಬಿಜೆಪಿ vs ಕಾಂಗ್ರೆಸ್‌ ನಾಯಕರ ಕ್ರೆಡಿಟ್‌ ಪಾಲಿಟಿಕ್ಸ್‌‌, ರಾರಾಜಿಸುತ್ತಿದೆ ಪ್ರತ್ಯೇಕ ಬ್ಯಾನರ್‌

ಬಿಜೆಪಿ vs ಕಾಂಗ್ರೆಸ್‌ ನಾಯಕರ ಕ್ರೆಡಿಟ್‌ ಪಾಲಿಟಿಕ್ಸ್‌

ಕೊಪ್ಪಳ: ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಅಟಲ್ ಬಿಹಾರಿ ವಾಜಪೇಯಿ ನಗರ ವಸತಿ ಯೋಜನೆಯ ಅಡಿ 2000 ಫಲಾನುಭವಿಗಳಿಗೆ ಮನೆ/ನಿವೇಶನ ಹಕ್ಕು ಪತ್ರ ವಿತರಣೆಯ ಕಾರ್ಯಕ್ರಮ ನಡೆಯುತ್ತಿದೆ. ಆದರೆ, ಮನೆ/ನಿವೇಶನ ಹಂಚಿಕೆಯಲ್ಲೂ ಅಲ್ಲಿನ ಶಾಸಕರು, ಸಂಸದರ ನಡುವೆ ಕ್ರೆಡಿಟ್‌ ಪಾಲಿಟಿಕ್ಸ್‌ ಶುರುವಾಗಿದೆ.


ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ನಡೆಯಲಿರುವ ಫಲಾನುಭವಿಗಳಿಗೆ 2000 ಮನೆ/ನಿವೇಶನ ಹಕ್ಕು ಪತ್ರ ವಿತರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 2012ರಲ್ಲಿ ಮಂಜೂರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ನಗರ ವಸತಿ ಯೋಜನೆ ನನೆಗುದಿಗೆ ಬಿದ್ದಿತ್ತು. ಮನೆ ನಿರ್ಮಿಸಿಕೊಡುವ ಯೋಜನೆ ಈಗ ನಿವೇಶನ ಹಂಚಿಕೆಗೆ ಸೀಮಿತವಾಗಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಈವಸತಿ ಯೋಜನೆಯು ತಮ್ಮ ಯೋಜನೆ ಎಂದು ಪ್ರತ್ಯೇಕ ಬ್ಯಾನರ್‌ ಹಾಕಿ ತಮ್ಮ ಅಧಿಕಾರ ಅವಧಿಯಲ್ಲಿ ವಸತಿ ಯೋಜನೆ ಸೌಲಭ್ಯ ನೀಡುತ್ತಿರುವುದಾಗಿ ಸಾರ್ವಜನಿಕರಿಗೆ ಪ್ರಚಾರದ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ನಿವೇಶನದ ಹಕ್ಕು ಪತ್ರ ವಿತರಣೆ ಮಾಡಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರದ ಪರ ಕಾಂಗ್ರೆಸ್‌ ಹೋರಾಟ: ಬಿಜೆಪಿ ನಾಯಕರ ಗೇಲಿ

Exit mobile version