Site icon Vistara News

Crime | ಮಂಗಳೂರಿನಲ್ಲಿ ಆಟೊದಲ್ಲಿ ನಿಗೂಢ ಸ್ಫೋಟ, ಪ್ರಯಾಣಿಕನಿಗೆ ಗಂಭೀರ ಗಾಯ

Wall collapse

ಮಂಗಳೂರು: ನಗರದಲ್ಲಿ ಸಂಚರಿಸುತ್ತಿದ್ದ ಆಟೋ ರಿಕ್ಷಾವೊಂದರಲ್ಲಿ ನಿಗೂಢ ಸ್ಪೋಟ ಸಂಭವಿಸಿದ ಘಟನೆ ನಡೆದಿದೆ.

ಇದರ ಪರಿಣಾಮ ಆಟೊದಲ್ಲಿದ್ದ ಪ್ರಯಾಣಿಕನಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಉತ್ತರ ಪ್ರದೇಶದ ಮೂಲದ ಈತನ ಜತೆಗೆ ಪ್ರೇಮ್ ರಾಜ್ ಕನೋಗಿ ಎಂಬ ಹೆಸರಿ‌ನ ಐಡಿ ದಾಖಲೆ ಪತ್ತೆಯಾಗಿದೆ. ಬಾಕ್ಸ್ ಮತ್ತು ಬ್ಯಾಗ್ ನಿಂದಲೇ ನಿಗೂಢ ಸ್ಪೋಟ ಸಂಭವಿಸಿದೆ.

ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಈತ ಆಟೊ ರಿಕ್ಷಾ ಹತ್ತಿದ್ದ. ದಾರಿ ಮಧ್ಯೆ ಸ್ಫೋಟವಾಗಿದ್ದು, ಅದರ ತೀವ್ರತೆಗೆ ಪ್ರಯಾಣಿಕನ ದೇಹದ ಅರ್ಧ ಭಾಗ ಸುಟ್ಟ ಗಾಯಕ್ಕೀಡಾಗಿದೆ.

Exit mobile version