Site icon Vistara News

Crime News | ಆನೆ ದಂತ, ಚಿರತೆ ಚರ್ಮ ಮಾರಾಟ ಮಾಡುತ್ತಿದ್ದವರ ಸೆರೆ; ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಕೇಸ್‌

ಬೆಂಗಳೂರು: ಚಿರತೆ ಚರ್ಮ, ಆನೆ ದಂತ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಜಾಲವನ್ನು ಇಲ್ಲಿನ ಹನುಮಂತನಗರ ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು (Crime News) ಬಂಧಿಸಿದ್ದಾರೆ. ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿರತೆ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಹೊಸಕೋಟೆ, ಮುಳಬಾಗಿಲು ಹಾಗೂ ಬಳ್ಳಾರಿ ಮೂಲದ ಮುನೀರ್ ಬಾಷಾ, ಶ್ರೀನಿವಾಸ್‌ ರಾವ್, ಸೈಯದ್ ಅಕ್ಬರ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ದಂತ ಬಳಸಿ ಆನೆ ಐಡಲ್‌ ತಯಾರಿ

ಆನೆ ದಂತಗಳಿಂದ ಆನೆಯ ಐಡಲ್‌ಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲು ಯತ್ನಿಸಿದ್ದ ದಿನೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಜ್ಞಾನೇಶ್ವರಿ ಜ್ಯುವೆಲರಿ ಶಾಪ್‌ನಲ್ಲಿ ಆನೆ ದಂತಗಳಿಂದ ಮಾಡಿದ ಮೂರ್ತಿ ಹಾಗೂ ಬಾಲಕೃಷ್ಣನ ವಿಗ್ರಹ, ಹುಲಿಯ ಉಗುರು ಸಿಕ್ಕಿದೆ.

ಬೈಕ್‌ನಲ್ಲಿ ಅಕ್ರಮ ಆನೆ ದಂತ ಮಾರಾಟ

ಹನುಮಂತನಗರ ಕಲಾಸೌಧ ಬಳಿ ದ್ವಿಚಕ್ರ ವಾಹನದಲ್ಲಿ ಆನೆ ದಂತಗಳನ್ನು ಇಟ್ಟುಕೊಂಡು ಹೋಗುತ್ತಿದ್ದ ಕಾಳಿಯಪ್ಪನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕಾಳಿಯಪ್ಪನ್ ಮೂಲತಃ ತಮಿಳುನಾಡಿನ ಕೃಷ್ಣ ಗಿರಿ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಅಕ್ರಮವಾಗಿ ಆನೆ ದಂತವನ್ನು ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ | ಮತ್ತೊಂದು ಗ್ಯಾಂಗ್‌ಗೆ ಮಾಹಿತಿ ಕೊಟ್ಟ ಯುವಕ ಬರ್ಬರ ಹತ್ಯೆ: 8 ಆರೋಪಿಗಳ ಬಂಧನ

Exit mobile version