Site icon Vistara News

Crime News | ಪುಟ್ಟ ಮಕ್ಕಳನ್ನು ಮಲಗಿಸಿ ಪತ್ನಿಯನ್ನು ಕತ್ತು ಕೊಯ್ದು ಕೊಲೆ ಮಾಡಿದ ಪತಿ: ಕೊನೆಗೆ ತಾನೇ ಕೈ ಕೊಯ್ದುಕೊಂಡ

Crime

ಶಿವಮೊಗ್ಗ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿ, ಕೊನೆಗೆ ತಾನೂ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಬುಧವಾರ ಮುಂಜಾನೆ ಇಲ್ಲಿನ ಪ್ರಿಯಾಂಕಾ ಲೇಔಟ್​ನ ಮೂರನೇ ಕ್ರಾಸ್​ ಬಳಿಯ ಮನೆಯೊಂದರಲ್ಲಿ ಮಂಜುಳಾ (೩೦) ಎಂಬ ಗೃಹಿಣಿಯ ಶವ (Crime News) ಪತ್ತೆಯಾಗಿತ್ತು. ಮಂಜುಳಾ ಪತಿ ದಿನೇಶ್​ ಕೈ ಕೊಯ್ದುಕೊಂಡು ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೊದಮೊದಲು ಮಂಜುಳಾ ತಾವೇ ಚಾಕುವಿನಿಂದ ಕತ್ತು ಕೊಯ್ದುಕೊಂಡರಾ ಎಂಬುದರ ಅನುಮಾನ ಇತ್ತು. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಮಂಜುಳಾ ತನ್ನ ಪತಿಯಿಂದಲೇ ಕೊಲೆಯಾಗಿರುವುದು ಪೊಲೀಸರು ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತಡರಾತ್ರಿ ಗಂಡ-ಹೆಂಡತಿ ನಡುವೆ ಕೌಟುಂಬಿಕ ಕಲಹಕ್ಕೆ ಗಲಾಟೆ ನಡೆದಿದೆ. ಈ ವೇಳೆ ಗಲಾಟೆಯಲ್ಲಿ ಚಾಕುವಿನಿಂದ ದಿನೇಶ್‌ ಪತ್ನಿಯ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ತನ್ನ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ದಿನೇಶ್ (42) ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಕ್ಕಳು ಮಲಗಿದ ಬಳಿಕ ಕೃತ್ಯ

ಮಂಜುಳಾ ದಿನೇಶ್‌ ದಂಪತಿಗೆ ಖುಷಿ (12) ಮತ್ತು ಮನ್ವಿತಾ (9) ಎಂಬ ಇಬ್ಬರು ಮಕ್ಕಳಿದ್ದು, ರಾತ್ರಿ ಮಕ್ಕಳು ನಿದ್ದೆಗೆ ಜಾರಿದಾಗ ಕಲಹ ನಡೆದಿದೆ. ಮಕ್ಕಳು ಬೆಳಗ್ಗೆ ಎದ್ದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಪತಿ ದಿನೇಶ್ ಅವರನ್ನು ಸಂಬಂಧಿಕರು ಹಾಗೂ ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೆಸ್ಕಾಂನಲ್ಲಿ ಹಿರಿಯ ಸಹಾಯಕ ಅಧಿಕಾರಿ ಆಗಿ ದಿನೇಶ್ ಸೇವೆ ಸಲ್ಲಿಸುತ್ತಿದ್ದರು. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ | Murder | ತಾಯಿ ಚಿಕಿತ್ಸೆಗೆ ಹಣ ನೀಡದ ಆಕ್ರೋಶ: ಮಗನಿಂದ ತಂದೆಯ ಕೊಲೆ

Exit mobile version