ದೇವನಹಳ್ಳಿ: ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ರಾಮದೇವನಹಳ್ಳಿಯ ಹೊರವಲಯದ ಗುಡ್ಡದ ಬಳಿ ಕತ್ತರಿಸಿದ ಸ್ಥಿತಿಯಲ್ಲಿ ವ್ಯಕ್ತಿಯ ಕೈ (Crime News) ಪತ್ತೆಯಾಗಿದೆ.
ರಾಮದೇವನಹಳ್ಳಿಯ ಹೊರವಲಯದಲ್ಲಿ ರಸ್ತೆ ಕಾಮಗಾರಿಗಾಗಿ ಗುಡ್ಡದಲ್ಲಿ ಮಣ್ಣು ತೆಗೆಯಲಾಗುತ್ತಿದ್ದು, ಈ ವೇಳೆ ಕತ್ತರಿಸಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಕೈ ಪತ್ತೆಯಾಗಿದ್ದು, ಕಾರ್ಮಿಕರು ನೋಡಿ ಗಾಬರಿಗೊಂಡಿದ್ದಾರೆ.
ಯಾರೋ ಕೊಲೆ ಮಾಡಿ ತಂದು ಹಾಕಿರಬಹುದು ಎಂದು ಶಂಕಿಸಲಾಗಿದೆ. ಹಳ್ಳ ಇರುವ ಕಾರಣ ಇಲ್ಲಿಗೆ ತಂದು ಹಾಕಿರುವ ಸಾಧ್ಯತೆ ಇದೆ. ಕತ್ತರಿಸಿದ ಸ್ಥಿತಿಯಲ್ಲಿ ಕೈಯೊಂದು ಪತ್ತೆಯಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಊರಿನವರು ಜಮಾಯಿಸಿದರು. ಕತ್ತರಿಸಿದ ಕೈ ನೋಡಿ ಗ್ರಾಮಸ್ಥರು ಕ್ಷಣ ಕಾಲ ಭಯಭೀತರಾಗಿದ್ದರು.
ಸುಮಾರು 50 ವರ್ಷ ಅಸುಪಾಸಿನ ವ್ಯಕ್ತಿಯ ಕೈ ಇರಬಹುದೆಂದು ಅಂದಾಜಿಸಲಾಗಿದ್ದು, ಆ ಸ್ಥಳದಲ್ಲಿ ಇತರೆ ದೇಹದ ಭಾಗಗಳು ಇರಬಹುದೆಂದು ಗ್ರಾಮಸ್ಥರು ಅನುಮಾನಿಸಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ | 5 ದಿನಗಳ ಅಂತರದಲ್ಲಿ 70 ಕುರಿಗಳ ಸಾವು; ಸರಣಿ ಸಾವಿನಿಂದ ರೈತರಲ್ಲಿ ಹೆಚ್ಚಿದ ಆತಂಕ