ತುಮಕೂರು: ಕಲ್ಲು ಕ್ವಾರಿಯೊಂದರಲ್ಲಿ (Stone Crusher) ಭಾರಿ ಅವಘಡ ಸಂಭವಿಸಿ ಇಬ್ಬರು ಕಾರ್ಮಿಕರು ದಾರುಣವಾಗಿ ಮೃತಪಟ್ಟ (Two Labourers death) ಘಟನೆ ತುಮಕೂರು ತಾಲೂಕಿನ (Tumkur News) ಕೌತಮಾರನಹಳ್ಳಿಯ ಸಮೀಪ ನಡೆದಿದೆ. ಕೌತಮಾರನಹಳ್ಳಿ ಬಳಿಯಿರುವ ಕರ್ನಾಟಕ ಸ್ಟೋನ್ ಕ್ರಷರ್‌ನಲ್ಲಿ ಬಂಡೆ ಸ್ಫೋಟದ ವೇಳೆ (Blast in Stone Crusher) ಇಬ್ಬರು ಕಾರ್ಮಿಕರು ಮೃತಪಟ್ಟರೆ ಇನ್ನೊಬ್ಬನಿಗೆ ಗಂಭೀರವಾಗಿ ಗಾಯಗಳಾಗಿವೆ.
ಬಿಹಾರ ಮೂಲದ ಮೊಹಮ್ಮದ್ ಅಬೂಲ್ (29) ಹಾಗೂ ಛತ್ತೀಸ್‌ಗಢ ಮೂಲದ ಮೋನು (24) ಮೃತ ದುರ್ದೈವಿಗಳು. ತುಮಕೂರು ಮೂಲದ ಕೆ.ಎ.ಎಂ ಹನೀಫ್ ಎಂಬುವವರಿಗೆ ಸೇರಿದ ಕರ್ನಾಟಕ ಸ್ಟೋನ್ ಕ್ರಷರ್‌ನಲ್ಲಿ ಈ ದುರಂತ ನಡೆದಿದೆ. ಮಂಗಳವಾರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಬಂಡೆ ಸ್ಫೋಟ ಮಾಡುವಾಗ ಅದು ಕಾರ್ಮಿಕರ ಬಳಿಯೇ ಸಿಡಿದು ದೇಹಗಳು ಛಿದ್ರ ಛಿದ್ರವಾಗಿವೆ.
ಕ್ರಷರ್ ಮಾಲೀಕನ ಬೇಜವಾಬ್ದಾರಿತನದಿಂದ ನಡೆದಿರುವ ಘಟನೆ ಇದಾಗಿದ್ದು, ಕಾರ್ಮಿಕರಿಗೆ ಯಾವುದೇ ಸುರಕ್ಷಿತ ಕ್ರಮಗಳನ್ನ ಕೊಡದೇ ನಿರ್ಲಕ್ಷ್ಯ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ.
ಗಾಯಾಳುವನ್ನು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: Road Accident : ಓವರ್‌ಟೇಕ್ ಧಾವಂತದಲ್ಲಿ ಟಿಪ್ಪರ್‌ಗೆ ಡಿಕ್ಕಿ; ನಡುರಸ್ತೆಯಲ್ಲಿ ಶವವಾದ ಕಾಲೇಜು ವಿದ್ಯಾರ್ಥಿ
ಪ್ರೀತಿಸಿ ಕೈಕೊಟ್ಟ ಕಾನ್ಸ್‌ಟೇಬಲ್; ಮದ್ವೆ ಆಗುವಂತೆ ಸ್ಟೇಷನ್ ಮುಂದೆ ಪ್ರೊಟೆಸ್ಟ್
ಬೆಂಗಳೂರು: ಪ್ರೀತಿಸಿ, ಮದುವೆ ಆಗುವುದಾಗಿ ನಂಬಿಸಿ ಕಾನ್ಸ್‌ಟೇಬಲ್ ಲೈಂಗಿಕವಾಗಿ ಬಳಸಿಕೊಂಡು (Love Case) ವಂಚಿಸಿರುವ ಆರೋಪ ಕೇಳಿ ಬಂದಿದೆ. ಬಸವನಗುಡಿ ಠಾಣೆಯ (basavanagudi police station) ಮುಂದೆ ಯುವತಿ ಪ್ರತಿಭಟನೆ ನಡೆಸುತ್ತಿದ್ದಾಳೆ. ಬಸವನಗುಡಿ ಠಾಣೆಯ ಪೊಲೀಸ್ ಪೇದೆ ಅನೀಲ್ ಕುಮಾರ್ ಎಂಬಾತ ನಾಗವೇಣಿ ಎಂಬುವವರಿಗೆ ವಂಚಿಸಿದ್ದಾನೆ.
ಅನೀಲ್ ಕುಮಾರ್ ಹಾಗೂ ನಾಗವೇಣಿ ಇಬ್ಬರು ಕಳೆದ ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದಾರೆ. ಮದುವೆ ಆಗುವುದಾಗಿ ಹೇಳಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಸಿರ್ಸಿ ಸರ್ಕಲ್ ಬಳಿಯ ಪೊಲೀಸ್ ಕ್ವಾರ್ಟಸ್‌ನಲ್ಲಿ ಇತ್ತೀಚೆಗೆ ಬಲತ್ಕಾರ ಮಾಡಿದ್ದಾನೆ. ಮದುವೆಯಾಗುವಂತೆ ಕೇಳಿದ್ದರೆ ನಿರಾಕರಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.
ಅನೀಲ್ ಕುಮಾರ್ ಹಾಗೂ ನಾಗವೇಣಿ ಚಿತ್ರದುರ್ಗ ಮೂಲದವರು. ನಾಗವೇಣಿ ಬೆಂಗಳೂರಿನ ಉತ್ತರ ಹಳ್ಳಿಯಲ್ಲಿ ವಾಸವಿದ್ದರೆ, ಪೊಲೀಸ್ ಪೇದೆ ಅನೀಲ್ ಕುಮಾರ್ ಸಿರ್ಸಿ ಸರ್ಕಲ್ ಬಳಿಯ ಪೊಲೀಸ್ ಕ್ವಾರ್ಟಸ್‌ನಲ್ಲಿ ವಾಸವಿದ್ದಾನೆ. ಈ ಹಿಂದೆಯೇ ಅನೀಲ್ ವಾಸವಿರುವ ಕ್ವಾರ್ಟಸ್, ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಿನ್ನೆಲೆಯಲ್ಲಿ 2023ರ ಆಗಸ್ಟ್‌ನಲ್ಲಿ ನಾಗವೇಣಿ ದೂರು ನೀಡಿದ್ದಳು. ಆದರೆ ಕೋರ್ಟ್‌ನಿಂದಲೇ ನಿರೀಕ್ಷಿತ ಜಾಮೀನು (Anticipatory ) ಪಡೆದಿದ್ದ.
ನಂತರವೂ ಮದುವೆ ಆಗುವುದಾಗಿ ಭರವಸೆ ಕೊಟ್ಟಿದ್ದಾನೆ. ಆದರೆ ಇದೀಗ ಇನ್ನೊಬ್ಬರ ಜತೆ ಮದುವೆಗೆ ತಯಾರಿ ನಡೆಸಿದ್ದಾನೆ. ಇದನ್ನೂ ಪ್ರಶ್ನಿಸಲು ಹೋದರೆ ಅನಿಲ್‌ಕುಮಾರ್ ಬೆದರಿಕೆ ಹಾಕುತ್ತಿದ್ದನಂತೆ. ಹೀಗಾಗಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಅನಿಲ್ ಕರ್ತವ್ಯದಲ್ಲಿ ಇದ್ದಾಗಲೇ ಬಂದ ನಾಗವೇಣಿ ಪ್ರತಿಭಟಿಸಿದ್ದಾಳೆ. ಸ್ಟೇಷನ್‌ಗೆ ನಾಗವೇಣಿ ಬರುತ್ತಿದ್ದಂತೆ ಅನಿಲ್‌ಕುಮಾರ್ ಎಸ್ಕೇಪ್ ಆಗಿದ್ದಾನೆ.