Site icon Vistara News

CV Raman Nagar Election Results : ಸಿವಿ ರಾಮನ್​ ನಗರದಲ್ಲಿ ಬಿಜೆಪಿಯ ರಘು ನಾಲ್ಕನೇ ಬಾರಿ ಆಯ್ಕೆ

CV Raman Nagar assemblyElection Results winner S Raghu

#image_title

ಬೆಂಗಳೂರು: ಬಿಜೆಪಿಯ ಭದ್ರಕೋಟೆಯಾಗಿರುವ ಸಿ. ವಿ ರಾಮನ್ ನಗರದಲ್ಲಿ ಮತ್ತೆ ಬಿಜೆಪಿ ಜಯ ಸಾಧಿಸಿದೆ. ಎಸ್​ ರಘು (69228) ಮತ್ತೊಮ್ಮೆ ಇಲ್ಲಿ ವಿಜಯ ನಗೆ ಬೀರಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ (52833 ಮತಗಳು) ಅವರನ್ನು 16395 ಮತಗಳ ಅಂತರದಿಂದ ಸೋಲಿಸಿದ್ದಾರೆ. 2018ರಲ್ಲಿ 2018ರಲ್ಲಿ ಎಸ್‌ ರಘು ಬಿಜೆಪಿಯಿಂದ ಸ್ಪರ್ಧಿಸಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರು. ಕಾಂಗ್ರೆಸ್​​ನ ಸಂಪತ್​ ರಾಜ್ (46,660 ಮತಗಳು) ವಿರುದ್ಧ 12,227 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

2008ರಲ್ಲಿ ಈ ಕ್ಷೇತ್ರ ರಚನೆಯಾಗಿತ್ತು. ಅಲ್ಲಿಂದ ಮೂರು ಬಾರಿ ಬಿಜೆಪಿಯೇ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಎಸ್ ರಘು ಮೂರು ಬಾರಿ ಇಲ್ಲಿ ಗೆಲವು ಸಾಧಿಸಿದ್ದಾರೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಬೆನ್ನಿಗಾನಹಳ್ಳಿ, ಸಿ ವಿ ರಾಮನ್ ನಗರ, ನ್ಯೂ ತಿಪ್ಪಸಂದ್ರ, ಸರ್ವಜ್ಞ ನಗರ, ಹೊಯ್ಸಳ ನಗರ, ಜೀವನ್ ಭೀಮಾ ನಗರ, ಕೋನೇನ ಅಗ್ರಹಾರ ಸೇರಿ ಏಳು ವಾರ್ಡ್‌ಗಳನ್ನು ಹೊಂದಿದೆ.

ಇದನ್ನೂ ಓದಿ : Hebbal Election Results : ಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಭೈರತಿ ಸುರೇಶ್​ಗೆ ಜಯ

ಸಿವಿ ರಾಮನ್ ನಗರದಲ್ಲಿ ಒಟ್ಟು 2.60 ಲಕ್ಷಕ್ಕೂ ಹೆಚ್ಚುಮತದಾರರಿದ್ದಾರೆ. 60,000 ಎಸ್‌ಸಿ ಮತಗಳಿದ್ದರೆ, ಇತರೇ ಸಮುದಾಯದ 66,669 ಮತಗಳಿವೆ. ಇನ್ನುಳಿದಂತೆ ತಮಿಳು 40,000, ಒಕ್ಕಲಿಗ 20,000, ಅಲ್ಪಸಂಖ್ಯಾತ 10,000, ಲಿಂಗಾಯತ 8,000, ಕುರುಬ 18,000 ಹಾಗೂ ಬೋವಿ 8,000 ಮತದಾರರಿದ್ದಾರೆ.

Exit mobile version