Site icon Vistara News

D.K. Shivakumar: ಎರಡು ದಿನ ನವದೆಹಲಿ ಪ್ರವಾಸಕ್ಕೆ ಹೊರಟ ಡಿಸಿಎಂ ಡಿ.ಕೆ. ಶಿವಕುಮಾರ್‌

DK Shivakumar 2

ನವದೆಹಲಿ: ಇತ್ತೀಚೆಗಷ್ಟೆ ಸಿಎಂ ಸಿದ್ದರಾಮಯ್ಯ ಹಾಗೂ ಸಂಪುಟ ಸಚಿವರುಗಳು ನವದೆಹಲಿಗೆ ತೆರಳಿ ಅವರವರಿಗೆ ಸಂಬಂಧಿತ ಕೇಂದ್ರ ಸಚಿವರನ್ನು ಭೇಟಿ ಮಾಡಿ ಆಗಮಿಸಿದ್ದರು. ಇದೀಗ ಡಿಸಿಎಂ ಡಿ.ಕೆ. ಶಿವಕುಮಾರ್‌ (D.K. Shivakumar) ಅವರು ಎರಡು ದಿನಗಳ ನವದೆಹಲಿ ಪ್ರವಾಸ ಕೈಗೊಂಡಿದ್ದಾರೆ.

ಬುಧವಾರ ರಾತ್ರಿ ದೆಹಲಿಗೆ ಆಗಮಿಸಲಿರುವ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಎರಡು ದಿನಗಳ ಕಾಲ ದೆಹಲಿಯಲ್ಲೇ ಉಳಿಯಲಿದ್ದಾರೆ. ಗುರುವಾರ ಬೆಳಗ್ಗೆಯಿಂದಲೇ ಆರಂಭಗೊಂಡು ದಿನಪೂರ್ತಿ ಹಾಗೂ ಶುಕ್ರವಾರವೂ ವಿವಿಧ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ.

ಈ ನಡುವೆ ಕಾಂಗ್ರೆಸ್ ಹೈ ಕಮಾಂಡ್ ನಾಯಕರನ್ನೂ ಭೇಟಿ ಮಾಡಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಕಾರಣ ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರಿಗೆ ವಿವಿಧ ನಿಗಮ ಮಂಡಳಿ ಹಂಚಿಕೆ ಕುರಿತು ಮಾತುಕತೆ ನಡೆಸಲಿದ್ದಾರೆ. ರಾಜ್ಯದಲ್ಲಿ ಸರ್ಕಾರ ನಡೆಯುತ್ತಿರುವ ರೀತಿ ಕುರಿತು ವರಿಷ್ಠರಿಗೆ ವರದಿ ಒಪ್ಪಿಸುವುದರ ಜತೆಗೆ ಲೋಕಸಭೆ ಚುನಾವಣೆ ಸಲುವಾಗಿಯೂ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: Education News: ಒಂದೂ ಮಕ್ಕಳಿಲ್ಲದ ಶಾಲೆಗೆ ಇಬ್ಬರು ಶಿಕ್ಷಕರು! ಇದು ದಾಸನಹುಂಡಿ ಸಕಿಪ್ರಾ ಶಾಲೆಯ ಕಥೆ-ವ್ಯಥೆ

ನವದೆಹಲಿಗೆ ಹೊರಡುವುದಕ್ಕೂ ಮುನ್ನ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಅಕ್ಕಿ ಕೊಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೆವು. ಉಚಿತವಾಗಿ ಅಕ್ಕಿ ಕೊಡಬೇಕಿರಲಿಲ್ಲ, ಹಣವನ್ನು ಕೊಡುತ್ತಿದ್ದೆವು. ಆದರೆ ಅವರು ಅಕ್ಕಿ ಕೊಡಲು ಅಡ್ಡಿಪಡಿಸಿದರು. ರಾಜಕಾರಣ ಮಾಡಿದರು. ಹೀಗಾಗಿ ನಾವು ಐದು ಕೆ.ಜಿ. ಅಕ್ಕಿಗೆ ಬದಲಾಗಿ ಹಣ ನೀಡಲು ನಿರ್ಧಾರ ಮಾಡಿದ್ದೇವೆ. ನಾವು ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ಆದರೆ ಕೇಂದ್ರ ಸರ್ಕಾರದ ರಾಜಕಾರಣದಿಂದ ಈಗ ಕೊಡಲು ಆಗುತ್ತಿಲ್ಲ. ಬೇರೆ ರಾಜ್ಯಗಳಲ್ಲಿ ನಮಗೆ ಬೇಕಾದಷ್ಟು ಅಕ್ಕಿ ಇಲ್ಲ. ಹೀಗಾಗಿ ಸದ್ಯ ದುಡ್ಡು ಕೊಡಲು ತೀರ್ಮಾನ ಮಾಡಿದ್ದೇವೆ ಎಂದರು.

Exit mobile version