Site icon Vistara News

ಮದರಸದಿಂದ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಮಂಗಳೂರು: ಸುರತ್ಕಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ(ಜೂನ್‌ 27) ರಾತ್ರಿ ಮದರಸದಿಂದ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

ಕಾಟಿಪಳ್ಳ ಅರನೇ ಬ್ಲಾಕ್‌ನಲ್ಲಿರುವ ಮದರಸದಿಂದ ಬಾಲಕ ಶಯಾನ್‌ ಮನೆಗೆ ತೆರಳುತ್ತಿದ್ದ. ಇದೇ ಸಂದರ್ಭದಲ್ಲಿ ಚಕ್ರವರ್ತಿ ಮೈದಾನದ ಸಮೀಪ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಬಾಲಕನ ಮದರಸ ಸಮವಸ್ತ್ರವನ್ನು ಹರಿದು ಪರಾರಿಯಾಗಿದ್ದಾರೆ.

ಹಲ್ಲೆಗೊಳಗಾದ ಶಯಾನ್, ತೌಯಿಬಾ ಮಸೀದಿಯ ಅರನೇ ತರಗತಿ ವಿದ್ಯಾರ್ಥಿ. ಬಾಲಕನ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಪ್ಪಿತಸ್ಥರ ಪತ್ತೆಗೆ ಪೊಲೀಸರು ಪ್ರಯತ್ನ ಆರಂಭಿಸಿದ್ದಾರೆ.

ಇದನ್ನೂ ಓದಿ: ಎಸ್ಕೇಪ್‌ಗೆ ಯತ್ನ, ರಾಜಾ ಕೊಲೆ ಆರೋಪಿಗಳ ಮೇಲೆ ಮಂಗಳೂರು ಪೊಲೀಸರ ಫೈರಿಂಗ್

Exit mobile version