ಮಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಸ್ಫೋಟ (Blast in Bengaluru) ನಡೆಸಿದ ದುಷ್ಕರ್ಮಿಯನ್ನು ಪತ್ತೆ ಮಾಡಬೇಕು ಎಂದರೆ ರಾಜ್ಯದ ಮಸೀದಿ ಮತ್ತು ಮದರಸಾಗಳಲ್ಲಿ (Mosque and Madarasa) ಹುಡುಕಬೇಕು ಎಂದು ಹೇಳಿದ್ದಾರೆ ಮಂಗಳೂರಿನ ವಿಶ್ವಹಿಂದು ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ (Sharan Pupmwell).
ಮುಸ್ಲಿಂ ಮಕ್ಕಳಿಗೆ ಶಿಕ್ಷಣ ಧಾರ್ಮಿಕ ಶಿಕ್ಷಣ ನೀಡುವ ಮದರಸಾಗಳು ಭಯೋತ್ಪಾದಕರ ಅಡಗು ತಾಣಗಳಾಗಿವೆ. ಭಯೋತ್ಪಾದಕರಿಗೆ ಮೌಲ್ವಿಗಳು ಶಿಕ್ಷಣ ನೀಡುತ್ತಿದ್ದಾರೆ. ಹೀಗಾಗಿ, ರಾಷ್ಟ್ರೀಯ ತನಿಖಾ ದಳ ಮಸೀದಿ ಹಾಗೂ ಮದರಸಾಗಳಲ್ಲಿ ಹುಡುಕಿದರೆ ರಾಮೇಶ್ವರಂ ಕೆಫೆ ಬಾಂಬರ್ ಸಿಗುತ್ತಾನೆ ಎಂದು ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಮಾಧ್ಯಮಗಳ ಜತೆ ಮಾತನಾಡುತ್ತಾ ಹೇಳಿದರು.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ನಡೆಸಿದ ಆರೋಪಿ ಘಟನೆ ನಡೆದು ಹತ್ತು ದಿನಗಳಾದರೂ ಸಿಕ್ಕಿಲ್ಲ. ಆತನಿಗಾಗಿ ಎನ್‌ಐಎ ಎಲ್ಲ ಕಡೆ ಹುಡುಕಾಟ ನಡೆಸಿದರೂ ಫಲ ನೀಡಿಲ್ಲ. ಆತ ಬೆಂಗಳೂರಿನಿಂದ ತುಮಕೂರಿಗೆ ಹೋಗಿ ಅಲ್ಲಿಂದ ಬಳ್ಳಾರಿಗೆ ಹೋಗಿದ್ದಾನೆ. ಅಲ್ಲಿಂದ ಭಟ್ಕಳಕ್ಕೆ ಹೋಗಿದ್ದಾನೆ ಎಂಬ ಮಾಹಿತಿ ಇತ್ತು. ಇನ್ನೊಂದು ಕಡೆ ಆತ ಕಲಬುರಗಿ, ಬೀದರ್‌ಗೆ ಹೋಗಿರುವ ಸುದ್ದಿಯೂ ಇತ್ತು. ಆದರೆ, ಎಲ್ಲಿಯೂ ಆತ ಇದುವರೆಗೂ ಸಿಕ್ಕಿಲ್ಲ.
ಶಂಕಿತ ಉಗ್ರನನ್ನು ಹಿಡಿಯಲು ಸುಲಭದ ಮಾರ್ಗವೆಂದರೆ ರಾಜ್ಯದಲ್ಲಿರುವ ಎಲ್ಲ ಮದರಸಾಗಳನ್ನು ಶೋಧನೆ ಮಾಡುವುದು. ಯಾಕೆಂದರೆ, ಮದರಸಗಳೇ ಭಯೋತ್ಪಾದಕರ ತಾಣವಾಗಿದೆ. ಭಯೋತ್ಪಾದಕರಿಗೆ ಮೌಲ್ವಿಗಳು ಶಿಕ್ಷಣ ನೀಡುತ್ತಿದ್ದಾರೆ ಎಂದಿರುವ ಶರಣ್ ಪಂಪ್‌ವೆಲ್, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ದಾಳಿ ನಡೆಸಿದ ಆರೋಪಿ ಯಾವುದಾದೂ ಮಸೀದಿಗೆ ಹೋಗಿ ನಮಾಜ್ ಮಾಡಿ ಬಟ್ಟೆ ಬದಲಿಸಿದ್ದಾನೆ ಎಂದು ಆರೋಪಿಸಿದರು.
ರಾಮೇಶ್ವರಂ ಕೆಫೆ ಬಾಂಬರ್ ಬಳ್ಳಾರಿಯಲ್ಲಿ ಓಡಾಟ ಮಾಡಿದ್ದಾನೆ. ನಂತರ, ಭಟ್ಕಳಕ್ಕೆ ಬಂದಿದ್ದಾನೆ ಅನ್ನೋ ಮಾಹಿತಿಯನ್ನು ಎನ್‌ಐಎ ನೀಡಿದ್ದಾರೆ. ಎನ್ ಐ ಎ ಪೊಲೀಸ್ ನವರು ಕರ್ನಾಟಕದಲ್ಲಿರುವ ಮದರಸ ಮಸೀದಿ ಮೇಲೆ ದಾಳಿ ಮಾಡಿ ತನಿಖೆ ಮಾಡಬೇಕು. ಇನ್ನು ಬಾಂಬರ್ ಭಟ್ಕಳದಲ್ಲಿದ್ದಾನೆ ಎಂದು ಮಾಹಿತಿ ಬಂದಿದೆ. ಹೀಗಾಗಿ, ಭಟ್ಕಳದಲ್ಲಿರುವ ಎಲ್ಲ ಮಸೀದಿಗಳು ಹಾಗೂ ಮದರಸಗಳ ಮೇಲೆ ದಾಳಿ ಮಾಡಿದರೆ ಆತ ಸಿಕ್ಕಿಬೀಳುತ್ತಾನೆ ಎಂದಿದ್ದಾರೆ ಶರಣ್ ಪಂಪ್‌ವೆಲ್.
ಇದನ್ನೂ ಓದಿ : Blast in Bengaluru: 10 ದಿನ ಕಳೆದ್ರೂ ಸಿಗದ ಬಾಂಬರ್ ಸುಳಿವು; ಬಳ್ಳಾರಿ, ಕಲಬುರಗಿಯಲ್ಲಿ ಎನ್‌ಐಎ ತೀವ್ರ ಶೋಧ
ಹಿಂದೂ ಸಂಘಟನೆಗಳಿಂದಲೂ ಹುಡುಕಾಟ
ಆರೋಪಿಯನ್ನು ಹುಡುಕುವುದು ಕೇವಲ ಪೊಲೀಸರ ಕೆಲಸವಲ್ಲ. ಎಲ್ಲ ನಾಗರಿಕರೂ ಇದಕ್ಕೆ ಸಹಕಾರ ನೀಡಬೇಕು. ಈ ಕಾರಣಕ್ಕಾಗಿಯೇ ನಾವು ನಮ್ಮ ಸಂಘಟನೆಗಳ ಮೂಲಕ ನಮ್ಮ ಎಲ್ಲ ಕಾರ್ಯಕರ್ತರಿಗೆ ಎನ್‌ಐಎ ಬಿಡುಗಡೆ ಮಾಡಿದ ಬಾಂಬರ್ ಫೋಟೊಗಳನ್ನು ಹಂಚುತ್ತಿದ್ದೇವೆ. ಆತ ಎಲ್ಲಿದ್ದರೂ ಹುಡುಕಲು ಇದು ಸಹಾಯ ಮಾಡುತ್ತದೆ ಎಂದು ಶರಣ್ ಪಂಪ್‌ವೆಲ್ ಅವರು ಹೇಳಿದರು.