ಮಂಗಳೂರು: ಕಲ್ಲನ್ನು ಅಲಂಕಾರ ಮಾಡಿ ಇವನು ಶ್ರೀ ರಾಮ ಎಂದರೆ ಅವನೇನು ಅಲ್ಲಿ ಬಂದು ಕುಳಿತುಕೊಳ್ಳುತ್ತಾನಾ? (Sri Rama is a stone) ಹಿಂದು ಧರ್ಮಕ್ಕೆ ಬೇರೆ ದೇಶಗಳಲ್ಲಿ ಅಸ್ತಿತ್ವವನ್ನೇ ಇಲ್ಲ.. ಹೀಗೆ ಶ್ರೀರಾಮ, ಹಿಂದು ಧರ್ಮ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ ಕ್ರೈಸ್ತ ಶಿಕ್ಷಕಿಯೊಬ್ಬರ ಮೇಲೆ ಮಂಗಳೂರಿನಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ. ಕಾಯಕವೇ ಪೂಜೆ (Work is Worship) ಎಂಬ ವಿಚಾರದಲ್ಲಿ ಮಕ್ಕಳಿಗೆ ಬೋಧನೆ ಮಾಡುತ್ತಿದ್ದ ಶಿಕ್ಷಕಿ ಅದನ್ನು ಬಿಟ್ಟು ಹಿಂದು ದ್ವೇಷವನ್ನು (Communal Hatred) ಕಾರಿಕೊಂಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರಿನ ಜೆರೋಸಾ ಶಾಲೆಯ ಏಳನೇ ತರಗತಿ ಶಿಕ್ಷಕಿ ಸಿಸ್ಟರ್ ಪ್ರಭಾ ಎಂಬವರೇ ಈ ರೀತಿ ಮಕ್ಕಳ ಮುಂದೆ ಹಿಂದೂ ಧರ್ಮ, ಶ್ರೀರಾಮ, ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದವರು. ಇದನ್ನು ಖಂಡಿಸಿ ಶನಿವಾರ ಮಧ್ಯಾಹ್ನ ಮಕ್ಕಳ ಪೋಷಕರು ಶಾಲೆಗೆ ಮುತ್ತಿಗೆ ಹಾಕಿದರು. ಶಾಲೆಯ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಪೋಷಕರು ಸಿಸ್ಟರ್ ಪ್ರಭಾ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಅವರಿಗೂ ಈ ಬಗ್ಗೆ ದೂರು ನೀಡಲಾಗಿದ್ದು, ಹಿಂದು ಸಂಘಟನೆಗಳ ಕಾರ್ಯಕರ್ತರು ಕೂಡಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಶಿಕ್ಷಕಿ ಶಾಲಾ ಮಕ್ಕಳಿಗೆ ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನಕಾರಿ ಬೋಧನೆ ಮಾಡಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ಧರ್ಮ ವಿರೋಧಿ ಭಾವನೆಯನ್ನು ಮೂಡಿಸಲು ಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ : MP DK Suresh : ನಾನೇ ನಿಮ್ಮ ಮುಂದೆ ಬರ್ತೇನೆ, ಗುಂಡಿಟ್ಟು ಕೊಲ್ಲಿ; ಈಶ್ವರಪ್ಪಗೆ ಡಿಕೆಸು ಸವಾಲ್
ಏನಿದು ಪ್ರಕರಣ? ಅವಹೇಳನ ಮಾಡಿದ್ದು ಯಾಕೆ?
ಶುಕ್ರವಾರದ ದಿನ ಸಿಸ್ಟರ್ ಪ್ರಭಾ ಅವರು ಏಳನೇ ಕ್ಲಾಸಿನ ಮಕ್ಕಳಿಗೆ ಕಾಯಕವೇ ಪೂಜೆ (Work is worship) ಎಂಬ ವಿಚಾರದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಆದರೆ, ಮಾತನಾಡುವ ಭರದಲ್ಲಿ ಹಿಂದೂ ಧರ್ಮದ ಅವಹೇಳನ ಮಾಡಿದ್ದಾರೆ, ರಾಮನ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ʻʻನಿಮಗೆ ಮಸೀದಿ ಒಡೆದು ರಾಮಮಂದಿರ ಕಟ್ಟುವ ಆಗತ್ಯೇ ಇದೆಯಾ, ನೀವು ಕಲ್ಲನ್ನು ಅಲಂಕಾರ ಮಾಡಿ ಅಲ್ಲಿ ಕುತ್ಕೊಳ್ಳಿಸಿದ್ದೀರಿ. ಏನು ರಾಮ ಬಂದು ಅದರಲ್ಲಿ ಕುಳಿತುಕೊಳ್ತಾನಾ? ನೀವು ಯಾಕೆ ದೇವಸ್ಥಾನಕ್ಕೆ ಹೋಗ್ತೀರಾ? ಅಲ್ಲಿ ಇರುವುದು ಕಲ್ಲು. ನಿಮಗೆ ಹಿಂದುಗಳಿಗೆ ಅಸ್ತಿತ್ವವೇ ಇಲ್ಲ. ನೀವು ಎಲ್ಲಿದ್ದೀರಿ ? ನಿಮ್ಮ ಮೂಲ ಏನು ಎಂಬುದು ನಿಮಗೆ ಗೊತ್ತಿಲ್ಲ. ಭಾರತದಲ್ಲಿ ಮಾತ್ರ ಹಿಂದೂ ಹಿಂದೂ ಅಂತ ಹೇಳ್ತೀರಿ. ಬೇರೆ ಎಲ್ಲಿಯೂ ನೀವು ಇಲ್ಲʼʼ ಎಂದು ಶಿಕ್ಷಕಿ ಪ್ರಭಾ ಏಳನೇ ಕ್ಲಾಸ್ ಮಕ್ಕಳಿಗೆ ಬೋಧನೆ ಮಾಡಿದ್ದಾರೆ!
ಗೋದ್ರಾ ಹತ್ಯೆಯ ಸಮಯದಲ್ಲಿ ಗುಜರಾತಿನಲ್ಲಿ ಮುಖ್ಯಮಂತ್ರಿ ಆಗಿದ್ದವರು ನರೇಂದ್ರ ಮೋದಿ. ದಂಡ ಪಿಂಡಗಳನ್ನು ಕೊಂಡು ಹೋಗಿ ಬಾಂಬ್ ಹಾಕಿದ್ದು ಮೋದಿಯವರು. ಅದರಲ್ಲಿ ಸತ್ತವರು ಮುಸ್ಲಿಮರು. ಒಬ್ಬ ಬಸುರಿ ಮಹಿಳೆಯನ್ನು ಕೊಂದು ಹಾಕಿದ್ದರು. 12 ಜನ ಸೇರಿ ಯುವತಿಯನ್ನು ಅತ್ಯಾಚಾರ ಮಾಡಿದ್ದರು. ಮುಸ್ಲಿಂ ಮಕ್ಕಳನ್ನು ತಲೆಗೆ ಕಲ್ಲು ಹೊಡೆದು ಕೊಂದಿದ್ದಾರೆ, ನೀವು ಹಿಂದೂಗಳು ನೀಚರು ಎಂದೆಲ್ಲ ಆಕೆ ಮಕ್ಕಳ ಜತೆ ಮಾತನಾಡುತ್ತಾ ಹೇಳಿದ್ದರೆನ್ನಲಾಗಿದೆ.
ಮಕ್ಕಳು ಈ ವಿಚಾರಗಳನ್ನು ಮನೆಯವರ ಬಳಿ ಹೇಳಿದ್ದಾರೆ. ಇದರಿಂದ ಪೋಷಕರು ಸಿಟ್ಟಿಗೆದ್ದು ಪ್ರತಿಭಟನೆಗೆ ಮುಂದಾದರು. ಸಿಸ್ಟರ್ ಪ್ರಭಾ ಅವರು ಶಾಲೆ ಬಿಟ್ಟು ಹೊರಗೆ ಬರುತ್ತಿದ್ದಂತೆಯೇ ಪ್ರತಿಭಟನೆ ನಡೆಸಿದರು. ಇದೀಗ ಶಿಕ್ಷಕಿ ಮೇಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ರಮ ಕೈಗೊಳ್ಳಬೇಕೆಂದು ವಿಎಚ್ ಪಿ ಪ್ರಾಂತ ಸಹಸಂಯೋಜಕ್ ಶರಣ್ ಪಂಪುವೆಲ್ ಒತ್ತಾಯಿಸಿದ್ದಾರೆ.