Site icon Vistara News

Drowned in water : ಅಪ್ಪಳಿಸಿ ಬಂದ ರಕ್ಕಸ ಅಲೆಗೆ ಕೊಚ್ಚಿ ಹೋದ ಮಹಿಳೆ ಸಾವು; ಮೂವರ ರಕ್ಷಣೆ

Drowned in water

ಮಂಗಳೂರು: ಮಂಗಳೂರಿನ ಉಳ್ಳಾಲ ಕಡಲತೀರದಲ್ಲಿ (Drowned in water) ಸಮುದ್ರಪಾಲಾಗುತ್ತಿದ್ದ ಮೂವರು ಮಹಿಳೆಯರ ರಕ್ಷಣೆ ಮಾಡಲಾಗಿದ್ದು, ಓರ್ವ ಮಹಿಳೆ ನೀರುಪಾಲಾಗಿದ್ದಾರೆ. ಪಿ.ಎಲ್ ಪ್ರಸನ್ನ ಎಂಬುವರ ಪತ್ನಿ ಪರಿಮೀ ರತ್ನ ಕುಮಾರಿ (57) ನೀರುಪಾಲಾದವರು.

ಆಂಧ್ರಪ್ರದೇಶದ ಕೊಂಡಾಪುರದ ಸಿರಿಲಿಂಗಪಲ್ಲಿ ನಿವಾಸಿಗಳು ಎಂದು ತಿಳಿದು ಬಂದಿದೆ. ಪರಿಮೀ ರತ್ನ ಕುಮಾರಿ ಹಾಗೂ ಅವರ ಸ್ನೇಹಿತರು ಪ್ರವಾಸಕ್ಕೆಂದು ಆಂಧ್ರಪ್ರದೇಶದಿಂದ ಬಂದಿದ್ದರು. ಸಮುದ್ರಕ್ಕಿಳಿದಾಗ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿದಾಗ ನಾಲ್ವರು ಮಹಿಳೆಯರನ್ನು ಎಳೆದುಹೋಗಿದೆ.

ಕೂಡಲೇ ಎಚ್ಚೆತ್ತ ಸ್ಥಳೀಯರು ಕೊಚ್ಚಿ ಹೋಗುತ್ತಿದ್ದವರನ್ನು ತಕ್ಷಣ ಸಮುದ್ರದಿಂದ ಹೊರಗೆಳೆದು ರಕ್ಷಿಸಿದ್ದಾರೆ. ಈ ಪೈಕಿ ಪರಿಮೀ ರತ್ನ ಕುಮಾರಿ ಪ್ರಜ್ಞೆ ತಪ್ಪಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಹೈದರಾಬಾದ್‌ನಿಂದ 5 ಮಂದಿ ಮಹಿಳೆಯರ ತಂಡ ಜೂ.6 ಕ್ಕೆ ಮೈಸೂರಿಗೆ ವಿಮಾನದ ಮೂಲಕ ಬಂದಿಳಿದಿದ್ದರು. ಅಲ್ಲಿ ಪ್ರವಾಸ ಮುಗಿಸಿ ಇನೋವಾ ಕಾರಿನ ಮೂಲಕ ಜೂ.7 ಕ್ಕೆ ಕೊಡಗಿಗೆ ತಲುಪಿತ್ತು. ಅಲ್ಲಿಂದ ಜೂ.9 ಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸಂದರ್ಶನ ನಡೆಸಿ, ನಿನ್ನೆ ಸೋಮವಾರವಷ್ಟೇ ಧರ್ಮಸ್ಥಳ ಸಂದರ್ಶನ ನಡೆಸಿದ್ದರು. ಉಳ್ಳಾಲ ಸಮುದ್ರ ತೀರ ವಿಹಾರಕ್ಕೆ ಬಂದಾಗ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ: Black Magic : 25 ಕುರಿ-ಮೇಕೆಗಳ ರುಂಡ ಕತ್ತರಿಸಿ ವ್ಯಕ್ತಿಗಳ ಫೋಟೊ ಇಟ್ಟು ಭಯಾನಕ ವಾಮಾಚಾರ!

ಪ್ರಾಣ ಕಸಿದ ಸೆಲ್ಫಿ ಕ್ರೇಜ್; ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದ ಪ್ರವಾಸಿಗ ಸಾವು

ಚಿಕ್ಕಮಗಳೂರು: ಸೆಲ್ಫಿ ಕ್ರೇಜ್‌ಗೆ (Selfie Craze)​ ಯುವಕನೊಬ್ಬ ಬಲಿಯಾಗಿದ್ದಾನೆ. ಫಾಲ್ಸ್‌ನಲ್ಲಿ (Hebbe Waterfalls) ಕಾಲು ಜಾರಿ ಬಿದ್ದು ಪ್ರವಾಸಿಗ ಮೃತಪಟ್ಟಿದ್ದಾನೆ. ಹೈದರಾಬಾದ್ ಮೂಲದ ಶ್ರವಣ್ (25) ಮೃತ ದುರ್ದೈವಿ. ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಹೆಬ್ಬೆ ಫಾಲ್ಸ್‌ನಲ್ಲಿ ಘಟನೆ ನಡೆದಿದೆ.

ಶ್ರವಣ್‌ ತನ್ನ ಸ್ನೇಹಿತನೊಂದಿಗೆ ಹೈದರಾಬಾದ್‌ನಿಂದ‌ ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದ. ಸೋಮವಾರ ಬೆಳಗ್ಗೆ ಬೈಕ್‌ನಲ್ಲಿ ಹೆಬ್ಬೆ ಫಾಲ್ಸ್‌ಗೆ ತೆರಳಿದ್ದ. ಹೆಬ್ಬೆ ಫಾಲ್ಸ್‌ನಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ಬಿದ್ದಿದ್ದಾನೆ.

ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version