Site icon Vistara News

Elephant Calf : ತಾಯಿಯಿಂದ ಬೇರ್ಪಟ್ಟು ಅಲೆಯುತ್ತಿರುವ ಮರಿಯಾನೆ; ಎಲ್ಲಿದ್ದಾಳೆ ಅಮ್ಮ?

Elephant Calf Mandekolu

ಸುಳ್ಯ: ಮರಿಯಾನೆಯೊಂದು (Elephant Calf) ತಾಯಿ ಆನೆಯಿಂದ ಬೇರ್ಪಟ್ಟು ಅಲೆಯುತ್ತಿರುವ ಘಟನೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಕನ್ಯಾನದಲ್ಲಿ ನಡೆದಿದೆ. ಸುಮಾರು ಎರಡು ತಿಂಗಳು ಪ್ರಾಯದ ಮರಿಯಾನೆ ಆನೆಗಳ ಹಿಂಡಿನಿಂದ ಬೇರ್ಪಟ್ಟಿದೆ (Elephant cub missed the herd). ಮರಿಯಾನೆಯನ್ನು ರಕ್ಷಿಸಿರುವ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದೀಗ ಆದನ್ನು ತಾಯಿಯ ಜತೆ ಸೇರಿಸಲು ಪ್ರಯತ್ನ ನಡೆಸುತ್ತಿದ್ದಾರೆ.

ಮಂಡೆಕೋಲು ಪರಿಸರದಲ್ಲಿ ಕಾಡಾನೆಗಳ ಗುಂಪು ನಿರಂತರವಾಗಿ ಸಂಚಾರ ನಡೆಸುತಿದೆ. ಶುಕ್ರವಾರ ಬೆಳಗ್ಗೆ ಕನ್ಯಾನ ಶಾಲೆಯ ಪಕ್ಕದಲ್ಲಿ ಗುಂಪಿನಿಂದ ಬೇರ್ಪಟ್ಟ ಮರಿಯಾನೆ ಕಂಡು ಬಂದಿದೆ. ಆನೆಗಳ ಹಿಂಡು ಕನ್ಯಾನ ಸಮೀಪದ ಅರಣ್ಯದಲ್ಲಿ ಬೀಡು ಬಿಟ್ಟಿರುವ ಸಾಧ್ಯತೆ ಇದ್ದು ಆನೆ ಗುಂಪಿನೊಂದಿಗೆ ಸೇರಿಸುವ ಪ್ರಯತ್ನ ನಡೆಸಲಾಗುತ್ತಿದೆ.

ಮರಿಯಾನೆ ಒಂಟಿಯಾಗಿ ಓಡಾಡುತ್ತಿರುವುದರ ಮಾಹಿತಿ ಪಡೆದ ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕ ಆಗಮಿಸಿ ಆನೆ ಮರಿಗೆ ನೀರು ಕುಡಿಸಿ ಆರೈಕೆ ಮಾಡಿದ್ದಾರೆ. ಆನೆಗಳ ಹಿಂಡನ್ನು ಪತ್ತೆ ಹಚ್ಚಿ ಹಿಂಡಿನ ಜೊತೆ ಬಿಡುವ ಪ್ರಯತ್ನ ನಡೆಸಲಾಗುತಿದೆ ಎಂದು ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ.

ಇದನ್ನು ಓದಿ: Elephant Attack : ಗ್ರಾಮಕ್ಕೆ ನುಗ್ಗಿ ಬೈಕ್‌, ಆಟೋ ಜಖಂ ಮಾಡುತ್ತಿದ್ದ ಪುಂಡಾನೆ ಸೆರೆ

ಈ ಹಿಂದೆಯೂ ಮರಿ ಬೇರ್ಪಟ್ಟಿತ್ತು.. ಬಳಿಕ ನಡೆದಿದ್ದೇನು?

2023ರ ಏಪ್ರಿಲ್‌ ಏಪ್ರಿಲ್‌ 13ರಂದು ಸುಳ್ಯದ ಅಜ್ಜಾವರದಲ್ಲಿ ಸನತ್ ರೈ ಎಂಬವರ ತೋಟದ ಕೆರೆಯಲ್ಲಿ ಮರಿಯಾನೆಯೊಂದು ಸಿಲುಕಿ ಹಾಕಿಕೊಂಡಿತ್ತು. ತಾಯಿ ಸಹಿತ ಗುಂಪಿನೊಂದಿಗೆ ಬಂದಿದ್ದ ಈ ಮರಿಯಾನೆಗೆ ಕೆರೆಯಿಂದ ಮೇಲೆ ಏರಲು ಸಾಧ್ಯವಾಗದೆ ಅಲ್ಲೇ ಉಳಿದಿತ್ತು. ಬಳಿಕ ಸಾರ್ವಜನಿಕರು ಸೇರಿ ಅದನ್ನು ಕೆರೆಯಿಂದ ಮೇಲೆತ್ತಿದ್ದರು. ಅದನ್ನು ತಾಯಿಯ ಜತೆ ಸೇರಿಸಲು ಅಧಿಕಾರಿಗಳು ಯತ್ನಿಸಿದ್ದರು. ಆದರೆ, ತಾಯಿ ತನ್ನ ಮರಿಯನ್ನೇ ಹತ್ತಿರ ಸೇರಿಸಿಕೊಂಡಿರಲಿಲ್ಲ.

ಕೆರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಆನೆಗಳು

ಹೀಗೆ ತಾಯಿಯಿಂದ ತಿರಸ್ಕೃತವಾದ ಮರಿಯಾನೆ ಊರಿನ ಜನರ ಜತೆ ಚೆನ್ನಾಗಿ ಆಟವಾಡಿಕೊಂಡಿತ್ತು. ಅಂತಿಮವಾಗಿ ಅದನ್ನು ದುಬಾರೆಯ ಆನೆ ಶಿಬಿರಕ್ಕೆ ಕರೆದೊಯ್ಯಲಾಯಿತು. ಆವತ್ತು ಶಿಬಿರಕ್ಕೆ ಹೋಗುವುದಕ್ಕೆ ವಾಹನ ಹತ್ತಲು ಅದು ನಿರಾಕರಿಸಿತ್ತು.

ಆನೆ ಮರಿಯನ್ನು ದುಬಾರೆಗೆ ಒಯ್ಯುತ್ತಿರುವುದು.

ಏಪ್ರಿಲ್‌ 16ರಂದು ಆನೆ ಮರಿಯನ್ನು ದುಬಾರೆ ಶಿಬಿರಕ್ಕೆ ಕಷ್ಟಪಟ್ಟು ಕರೆದೊಯ್ಯಲಾಯಿತು. ಶಿಬಿರದಲ್ಲಿ ಆರಂಭದಲ್ಲಿ ಚೆನ್ನಾಗಿಯೇ ಇದ್ದ ಆನೆ ಮರಿ ಬಳಿಕ ಮೇ ಮೊದಲ ವಾರದಲ್ಲಿ ಪ್ರಾಣ ಕಳೆದುಕೊಂಡಿತ್ತು.

Exit mobile version