ಮಂಗಳೂರು: ಸ್ವಾತಂತ್ರ್ಯೋತ್ಸವದಂದು (Independence day 2023) ಮಕ್ಕಳ ಮೂಲಕ ಸ್ವಾತಂತ್ರ್ಯ ವೀರ ಸಾವರ್ಕರ್‌ಗೆ (Swathanthrya veera Savarkar) ಜಯಘೋಷ ಹಾಕಿಸಿದ ಕಾರಣಕ್ಕೆ ಶಾಲೆಯ ಮುಖ್ಯ ಶಿಕ್ಷಕಿ (Government school Head Mistress) ಕ್ಷಮೆ ಯಾಚಿಸಬೇಕಾದ (Seeks Apology) ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ. ಮಕ್ಕಳ ಬಾಯಲ್ಲಿ, ಅದೂ ಮುಸ್ಲಿಂ ಮಕ್ಕಳ ಬಾಯಲ್ಲಿ ಸಾವರ್ಕರ್ ಕೀ ಜೈ (Savarkar ki Jai) ಎಂಬ ಘೋಷಣೆ ಕೂಗಿಸಿದ್ದು ಎಂಬ ಕೆಲವು ಪೋಷಕರು ಹಾಗೂ ರಾಜಕೀಯ ಮುಖಂಡರ ಆಕ್ಷೇಪಕ್ಕೆ ಮಣಿದ ಶಿಕ್ಷಕಿ ಕ್ಷಮೆ ಯಾಚಿಸಿದ್ದಾರೆ.
ಇಂಥಹುದೊಂದು ಘಟನೆ ನಡೆದಿರುವುದು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಸರ್ಕಾರಿ ಶಾಲೆಯಲ್ಲಿ (Bantwal Taluk Manchi Government school). ಇಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಜಯಘೋಷ ಸಾರುವಂತೆ ವೀರ್ ಸಾವರ್ಕರ್ ಕೀ ಜೈ ಎಂದು ಕೂಡಾ ಘೋಷಿಸಲಾಗಿತ್ತು. ಮಕ್ಕಳು ಕೂಡಾ ತುಂಬ ಜೋಶ್‌ನಿಂದ ಘೋಷಣೆ ಕೂಗಿದ್ದಾರೆ.
ಈ ನಡುವೆ ಶಾಲೆಯ ಸ್ವಾತಂತ್ರ್ಯೋತ್ಸವದಲ್ಲಿ ನಡೆದ ಜಯಘೋಷದ ವಿಡಿಯೊವನ್ನು ವ್ಯಕ್ತಿಯೊಬ್ಬ ಎಲ್ಲರ ಮೊಬೈಲ್‌ಗೆ ಕಳುಹಿಸಿದ್ದಾನೆ. ಇದನ್ನು ನೋಡಿದ ಕೆಲವು ಮುಸ್ಲಿಂ ಪೋಷಕರು ಆಕ್ರೋಶಿತರಾಗಿದ್ದಾರೆ. ಅವರು ನೀವು ಮುಸ್ಲಿಂ ವಿದ್ಯಾರ್ಥಿನಿಯರ ಬಾಯಲ್ಲಿ ಸಾವರ್ಕರ್‌ಗೆ ಜೈಕಾರ ಹಾಕಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ (ಆವತ್ತು ಮುಸ್ಲಿಂ ವಿದ್ಯಾರ್ಥಿನಿ ಸಾವರ್ಕರ್ ಕೀ ಜೈ ಎಂದಿದ್ದಳು)
ನಾನು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ. ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಜಯಘೋಷ ಕೂಗುವಂತೆ ವೀರ ಸಾವರ್ಕರ್ ಹೆಸರನ್ನೂ ಹೇಳಿದ್ದೆ. ಅವರು ಕೂಡಾ ಸ್ವಾತಂತ್ರ್ಯ ಹೋರಾಟಗಾರರು ಅಂತ ಪಾಠದಲ್ಲೂ ಬರುತ್ತದೆ. ದಯವಿಟ್ಟು ಇದರಲ್ಲಿ ನಿಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಬೆರೆಸಬೇಡಿ, ಮಕ್ಕಳ ಮನಸ್ಸಿನಲ್ಲಿ ಇಂಥ ರಾಜಕೀಯ ಬೆಳೆಸಬೇಡಿ ಎಂದು ಮನವಿ ಮಾಡಿದರು.
ಆದರೆ, ಅವರು ಮುಖ್ಯ ಶಿಕ್ಷಕಿಯ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅವರು ತಮ್ಮ ವಲಯಗಳಲ್ಲಿ ಈ ಸುದ್ದಿಯನ್ನು ಹರಡಿಸಿದ್ದು ಮಾತ್ರವಲ್ಲ ರಾಜಕೀಯ ಮುಖಂಡರ ಮೂಲಕವೂ ಒತ್ತಡ ಹಾಕಿಸಿದರು. ರಾಜಕೀಯ ಮುಖಂಡರು ಕೂಡಾ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಆದರೆ, ಯಾರೂ ಶಿಕ್ಷಕಿಯ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆ ಹೊಂದಿರಲಿಲ್ಲ. ಅಂತಿಮವಾಗಿ ಈ ವಿದ್ಯಮಾನಗಳಿಂದ ಮನನೊಂದ ಸರ್ಕಾರಿ ಶಾಲೆ ಶಿಕ್ಷಕಿ ಕ್ಷಮೆ ಕೋರಿದ್ದಾರೆ.
ಇದನ್ನೂ ಓದಿ: Dharma Dangal : ಜಾತ್ರೆಗಳಲ್ಲಿ ವ್ಯಾಪಾರ ದಂಗಲ್; ಹಿಂದುಪರ, ಮುಸ್ಲಿಂ ಪರ ಕದನಕ್ಕೆ ಸಂಘಟನೆಗಳು ರೆಡಿ
ಜಯಘೋಷದ ವಿಡಿಯೊ ವೈರಲ್ ಆದ ಬೆನ್ನಿಗೇ ಮುಖ್ಯ ಶಿಕ್ಷಕಿಗೆ ಕರೆಗಳು ಬರಲು ಆರಂಭವಾಗಿತ್ತು. ಅವರು ನೊಂದು ಕೊನೆಗೆ ಕ್ಷಮೆ ಯಾಚಿಸಿದ್ದರು. ಆದರೆ, ಅದು ಅಷ್ಟಕ್ಕೇ ನಿಲ್ಲದೆ ಗುರುವಾರ ಶಾಲೆಯಲ್ಲಿ ಶಿಕ್ಷಕರು ಮತ್ತು ಪೋಷಕರ ಸಭೆಯನ್ನು ಕರೆಯಲಾಗಿತ್ತು. ಅದರಲ್ಲಿ ಫೋಷಕರು ಮತ್ತು ಕೆಲವು ರಾಜಕೀಯ ಮುಖಂಡರು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಶಿಕ್ಷಕಿ ಪೋಷಕರ ಬಳಿ ಸಾಮೂಹಿಕ ಕ್ಷಮೆ ಯಾಚಿಸಿದರು.
ಈ ನಡುವೆ ಘಟನಾವಳಿಗಳಿಂದ ಸಿಟ್ಟಿಗೆದ್ದ ಮುಖ್ಯ ಶಿಕ್ಷಕಿ ಈ ವಿಡಿಯೋ ಮಾಡಿ ಹರಿಬಿಟ್ಟವರ ಮೇಲೆ ದೂರು ನೀಡಿದ್ದಾರೆ. ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ ಮುಖ್ಯ ಶಿಕ್ಷಕಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.