Site icon Vistara News

Jai Shriram : ಬೈಕ್‌ನಲ್ಲಿ ಮಸೀದಿ ಆವರಣಕ್ಕೆ ನುಗ್ಗಿ ಜೈಶ್ರೀರಾಂ ಘೋಷಣೆ ಕೂಗಿ ಪುಂಡಾಟ

Jaishriram Chantings at Mardhala Moque

ಮಂಗಳೂರು: ಕೋಮು ಸೂಕ್ಷ್ಮ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada District) ಶಾಂತಿಯನ್ನು ಕದಡುವ ಪ್ರಯತ್ನಗಳು (Attmpt to disturb peace) ಆಗಾಗ ನಡೆಯುತ್ತಲೇ ಇರುತ್ತವೆ. ಇದರ ಭಾಗವೋ ಎಂಬಂತೆ ಯುವಕರ ತಂಡವೊಂದು ಬೈಕ್‌ನಲ್ಲಿ ಮಸೀದಿ ಆವರಣ (Mosque compound) ಪ್ರವೇಶ ಮಾಡಿ ಅಲ್ಲಿ ಜೈಶ್ರೀರಾಂ (Jai shriram) ಎಂದು ಘೋಷಣೆ ಕೂಗಿದೆ.

ದ‌.ಕ ಜಿಲ್ಲೆಯ ಕಡಬ ತಾಲೂಕಿನ ಮರ್ಧಾಳ ಎಂಬಲ್ಲಿ ಘಟನೆ ನಡೆದಿದೆ. ಮರ್ಧಾಳ ಬದ್ರಿಯಾ ಜುಮಾ ಮಸೀದಿಯಲ್ಲಿ (Mardhala Badriya Jumma Masjid) ಯಾವುದೋ ಕಾರ್ಯಕ್ರಮ ನಡೆಯುತ್ತಿದ್ದು, ಅದಕ್ಕಾಗಿ ಮಸೀದಿಯನ್ನು ಅಲಂಕರಿಸಲಾಗಿದೆ. ಇದರ ನಡುವೆಯೇ ಇಬ್ಬರು ಪುಂಡರು ಕಾಂಪೌಂಡ್ ಪ್ರವೇಶಿಸಿ ಕಿಡಿಗೇಡಿತನ ಪ್ರದರ್ಶಿಸಿದ್ದಾರೆ.

ಮಸೀದಿ ಆವರಣ ಪ್ರವೇಶಿಸುತ್ತಿರುವ ಬೈಕ್‌

ಭಾನುವಾರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಮಸೀದಿಯ ಆವರಣದಲ್ಲಿ ಸಾಕಷ್ಟು ಬೆಳಕು ಇರುವಂತೆಯೇ ಇಬ್ಬರು ಕಿಡಿಗೇಡಿಗಳು ಗೇಟ್‌ ತೆರೆದಿದ್ದ ಆವರಣದೊಳಗೆ ಪ್ರವೇಶ ಮಾಡಿದ್ದಾರೆ.

ಮಸೀದಿಯ ಆವರಣವನ್ನು ಪ್ರವೇಶ ಮಾಡಿದ ಕಿಡಿಗೇಡಿಗಳು ಮಸೀದಿ ಆವರಣದಲ್ಲಿ ಬೈಕ್ ಹಿಂತಿರುಗಿಸಿ ತೆರಳಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇವರು ಒಳಗೆ ಬಂದಿದ್ದು ಮಾತ್ರವಲ್ಲ ಜೈಶ್ರೀರಾಂ ಘೋಷಣೆ ಕೂಗಿದ್ದಾರೆ ಎಂದು ಮಸೀದಿ ಧರ್ಮಗುರುಗಳು ದೂರು ನೀಡಿದ್ದಾರೆ. ಒಳಗೆ ಪ್ರವೇಶ ಮಾಡಿದ ಕಿಡಿಗೇಡಿಗಳು ಧರ್ಮಗುರುಗಳನ್ನು ಕಂಡು ತಕ್ಷಣವೇ ಬೈಕ್‌ ತಿರುಗಿಸಿ ಹಿಂದೆ ಹೋಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Eid milad holiday : ಈದ್‌ ಮಿಲಾದ್‌ ಹಬ್ಬಕ್ಕೆ ಮೀನು ವ್ಯಾಪಾರಕ್ಕೆ ಕಡ್ಡಾಯ ರಜೆ: ಬ್ಯಾನರ್‌ ವಿರುದ್ಧ ಹಿಂದುಗಳ ಆಕ್ರೋಶ

ಧರ್ಮಗುರುಗಳು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎರಡು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಪರಿಸರದ ವಿವಿಧ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಯಾವುದೋ ದುರುದ್ದೇಶದಿಂದ ಇಲ್ಲವೇ ಜೈ ಶ್ರೀರಾಂ ಘೋಷಣೆ ಕೂಗಿ ಭಯ ಹುಟ್ಟಿಸುವ ಉದ್ದೇಶದಿಂದ ಈ ರೀತಿ ಮಾಡಿರುವ ಸಾಧ್ಯತೆಗಳಿವೆ. ಇದರ ನಡುವೆ ಕೆಲವು ಕಿಡಿಗೇಡಿ ಯುವಕರು ಊರಿನಲ್ಲಿ ಸಮಸ್ಯೆ ಸೃಷ್ಟಿಸುವ ಉದ್ದೇಶದಿಂದ ಮಸೀದಿಯ ಆವರಣಕ್ಕೆ ಬಂದು ಈ ರೀತಿ ಮಾಡಿರುವ ಸಾಧ್ಯತೆ ಇದೆ.

ರಾತ್ರಿ ಹನ್ನೊಂದು ಗಂಟೆಯ ಹೊತ್ತಿಗೆ ಇಲ್ಲಿ ಒಂದಷ್ಟು ಓಡಾಟವೂ ಇತ್ತು. ಈ ಘಟನೆ ನಡೆಯುವ ಕೆಲವೇ ಕ್ಷಣಗಳ ಒಂದು ಒಂದು ಕಾರು ಮಸೀದಿ ಬಳಿಯಿಂದ ಹೊರಟು ಹೋಗಿತ್ತು. ಬೈಕ್‌ಧಾರಿಗಳು ನೇರವಾಗಿ ಮಸೀದಿಯ ಒಳಗೇ ಪ್ರವೇಶ ಮಾಡಿರುವುದು ನೋಡಿದರೆ ಮೊದಲೇ ತೀರ್ಮಾನ ಮಾಡಿ ಬಂದವರಂತೆ ಕಾಣಿಸುತ್ತಾರೆ. ಹೀಗಾಗಿ ಯಾವುದಾರೂ ಸಂಚೂ ಇರಬಹುದು ಎಂಬ ಅಭಿಪ್ರಾಯವಿದೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Exit mobile version