ಮೂಡಬಿದಿರೆ: ಕಾಲೇಜಿಗೆ ಹೋಗಿದ್ದ ವಿದ್ಯಾರ್ಥಿನಿಯೊಬ್ಬಳು (College Student) ಮನೆಗೆ ಮರಳದೆ ನಾಪತ್ತೆಯಾಗಿದ್ದಳು. ಈಗ ಆಕೆ ತನ್ನ ಪ್ರಿಯಕರನ ಜತೆ ಕೇರಳದಲ್ಲಿ ಪತ್ತೆಯಾಗಿದ್ದಾಳೆ (Found in Kerala). ಅವರಿಬ್ಬರೂ ಮದುವೆ ಮಾಡಿಕೊಂಡಿದ್ದಾರೆ (Love Case) ಎಂದು ತಿಳಿದುಬಂದಿದೆ. ಇದು ಕೊಲ್ಲೂರಿನ ಹುಡುಗಿ, ಬೈಂದೂರಿನ ಹುಡುಗನ ಪ್ರೇಮ ಕಥೆ. ಆಕೆ ನಾಪತ್ತೆಯಾಗಿದ್ದು ಮೂಡುಬಿದರೆಯಿಂದ (Moodbidre college) ಪೊಲೀಸರು ಹುಡುಕಿದಾಗ ಸಿಕ್ಕಿದ್ದು ಕೇರಳದಲ್ಲಿ.
ಉಡುಪಿ ಜಿಲ್ಲೆಯ ಕೊಲ್ಲೂರಿನ ನಿವಾಸಿಯಾಗಿರುವ ಆದಿರಾ 19 ವರ್ಷದ ಹುಡುಗಿ. ಆಕೆ ಈಗ ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಪಿಟಿ ಅಧ್ಯಯನ ನಡೆಸುತ್ತಿದ್ದಾಳೆ. ಆಕೆಗೆ ಹಿಂದಿನಿಂದಲೂ ಒಬ್ಬ ಹುಡುಗನ ಜತೆ ಪ್ರೀತಿ ಇತ್ತು. ಅವನು ಬೈಂದೂರಿನವನು.
ಅವರಿಬ್ಬರ ಪ್ರೀತಿ ಬಗ್ಗೆ ಸಂಶಯ ಹೊಂದಿದ್ದ ಮನೆಯವರು ಆಕೆಯ ಮನಸ್ಸು ತಿಳಿಯಾಗಲಿ, ಇದೆಲ್ಲ ಮರೆಯಲಿ ಎಂದು ಹೇಳಿ ಪಿಯುಸಿ ಬಳಿಕ ಆಕೆಯನ್ನು ಮೂಡುಬಿದರೆ ಕಾಲೇಜಿಗೆ ಸೇರಿಸಿದ್ದಳು. ಆಲ್ಲಿ ಆಕೆ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಳು.
ಮನೆಯವರು ಆಕೆಯನ್ನು ಮೂಡುಬಿದರೆ ಕಾಲೇಜಿಗೆ ಹಾಕಿದ್ದರೂ ಹುಡುಗ ಮತ್ತು ಹುಡುಗಿ ನಡುವೆ ಸಂಬಂಧ ಕಟ್ ಆಗಿರಲಿಲ್ಲ. ಬಹುಶಃ ಅವರು ವ್ಯವಸ್ಥಿತವಾಗಿ ಸಂಪರ್ಕದಲ್ಲಿದ್ದರು. ಕಳೆದ ಫೆಬ್ರವರಿ 23ರ ಶುಕ್ರವಾರ ಬೆಳಿಗ್ಗೆ 7.45ಕ್ಕೆ ಆದಿರಾ ಹಾಸ್ಟೆಲ್‌ನಿಂದ ಆಳ್ವಾಸ್ ಬಸ್‌ನಲ್ಲಿ ಹೊರಟಿದ್ದಾರೆ. ಆಕೆ ಮೂಡುಬಿದಿರೆ ಕನ್ನಡಭವನದ ಬಳಿ ಇಳಿದಿದ್ದಳು. ಅಲ್ಲಿಂದ ಆಕೆ ಕಾಲೇಜಿಗೆ ಹೋಗಬೇಕಾಗಿತ್ತು. ಆದರೆ, ಆಕೆ ಕಾಲೇಜಿಗೆ ಹೋಗಿರಲಿಲ್ಲ.
ಕಾಲೇಜಿಗೂ ಇಲ್ಲ, ಹಾಸ್ಟೆಲ್‌ಗೂ ಇಲ್ಲ, ಮನೆಗೂ ಹೋಗಲಿಲ್ಲ. ಹೀಗೆ ದಿಢೀರ್ ನಾಪತ್ತೆಯಾಗಿರುವ ಆದಿರಾ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ಇದನ್ನೂ ಓದಿ: Chaithra Hebbar : ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಿಗೂಢ ನಾಪತ್ತೆ; ಯಾರು ಈ ಶಾರುಖ್ ಶೇಖ್?
ಪೊಲೀಸರು ಆಕೆ ಕನ್ನಡ ಭವನದ ಬಳಿ ಇಳಿದ ನಂತರ ಎಲ್ಲಿ ಹೋದಳು ಎಂಬ ಬಗ್ಗೆ ಫೂಟೇಜ್‌ಗಳನ್ನು ಚೆಕ್ ಮಾಡಿದಾಗ ಆಕೆ ಮತ್ತು ಒಬ್ಬ ಹುಡುಗ ಜತೆಯಾಗಿದ್ದು, ಅವರ ಜತೆಯಾಗಿ ಹೋಗಿದ್ದು ಕಂಡುಬಂದಿದೆ. ಇವರ ಚಲನವಲನಗಳ ಜಾಡು ಹಿಡಿದ ಮೂಡುಬಿದರೆ ಪೊಲೀಸರು ಅವರನ್ನು ಕೇರಳದಲ್ಲಿ ಪತ್ತೆ ಹಚ್ಚಿದ್ದಾರೆ.
ಅಷ್ಟು ಹೊತ್ತಿಗೆ ಅವರಿಬ್ಬರೂ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಅವರನ್ನು ಮೂಡುಬಿದರೆಗೆ ಕರೆತಂದು ಹೆತ್ತವರನ್ನು ಕರೆಸಿ ಮಾತುಕತೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.