ಮಂಗಳೂರು: ಮಾಜಿ ಶಾಸಕ ಮೊಯ್ದೀನ್ ಬಾವಾ ಸಹೋದರ ಮುಮ್ತಾಜ್ ಅಲಿ (52) ಎಂಬುವವರು ಮಂಗಳೂರು ಹೊರವಲಯದ ಕೂಳೂರು ಬ್ರಿಡ್ಜ್‌ನಲ್ಲಿ ಕಾರು ನಿಲ್ಲಿಸಿ ನಾಪತ್ತೆ ಆಗಿದ್ದಾರೆ. ಮನೆಯವರಿಗೆ ಸಾಯುತ್ತೇನೆ ಅಂತಾ ಹೇಳಿ ಮುಮ್ತಾಜ್ ಅಲಿ ಹೋಗಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಮಾಜಿ ಶಾಸಕ ಮೊಯಿದ್ದೀನ್ ಬಾವ ಸೇರಿದಂತೆ ಕುಟುಂಬಸ್ಥರು ಭೇಟಿ ನೀಡಿದ್ದಾರೆ. ನದಿಯಲ್ಲಿ ಎಸ್ ಡಿ ಆರ್ ಎಫ್,ಎನ್ ಡಿ ಆರ್ ಎಫ್,ಅಗ್ನಿಶಾಮಕದಳದಿಂದ ಹುಡುಕಾಟ ನಡೆಸುತ್ತಿದ್ದಾರೆ.
ಬೆಳಗಿನ ಜಾವ ಮೂರು ಗಂಟೆಗೆ ಮನೆಯಿಂದ ಹೊರಟ್ಟಿದ್ದ ಮುಮ್ತಾಜ್ ಆಲಿ, ಬೆಳಗ್ಗೆ 5 ಗಂಟೆಗೆ ಕೂಳೂರು ಸೇತುವೆ ಮೇಲೆ ಡ್ಯಾಮೇಜ್ ಆದ ಸ್ಥಿತಿಯಲ್ಲಿ ಬಿಎಂಡಬ್ಲ್ಯೂ ಕಾರು ಪತ್ತೆಯಾಗಿದೆ. ವಿವಿಧ ಉದ್ಯಮ ಮತ್ತು ಮಸೀದಿ ಕಮಿಟಿಗಳಲ್ಲಿ ಮಮ್ತಾಜ್ ಆಲಿ ತೊಡಗಿಸಿಕೊಂಡಿದ್ದರು. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಿಳೆಯಿಂದ ಬ್ಲ್ಯಾಕ್‌ಮೇಲ್?
ಮುಮ್ತಾಜ್ ಆಲಿ ಮಿಸ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮದುವೆ ಆಗುವಂತೆ ಮಹಿಳೆಯಿಂದ ನಿರಂತರ ಬ್ಲ್ಯಾಕ್ ಮೇಲ್ ಬಂದಿತ್ತು ಎನ್ನಲಾಗಿದೆ. ಅದಕ್ಕೆ ಸುರತ್ಕಲ್‌ನ ನಾಲ್ವರು ಸಹಕಾರ ನೀಡಿದ್ದರು. ಮಸೀದಿ ಕಮಿಟಿ ವಿಚಾರದಲ್ಲಿ ಆ ನಾಲ್ವರಿಗೂ ಮುಮ್ತಾಜ್ ಅಲಿಗೂ ಜಟಾಪಟಿ ಇತ್ತು. ಇದರಿಂದ ಆ ಮಹಿಳೆಯ ಹಿಂದೆ ನಿಂತ ಆ ನಾಲ್ವರು, ಮುಮ್ತಾಜ್ ಅಲಿಯ ವಿಡಿಯೋ ಇಟ್ಟುಕೊಂಡು ಮಹಿಳೆ ಮತ್ತು ಆ ನಾಲ್ವರಿಂದ ಬ್ಲ್ಯಾಕ್ ಮೇಲ್ ನಡೆದಿದೆ ಎನ್ನಲಾಗಿದೆ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಮುಂದಾದರಾ ಎಂಬ ಅನುಮಾನ ಮೂಡಿದೆ.