Site icon Vistara News

Road Accident : ಗಾಂಜಾ ನಶೆಯಲ್ಲಿ ಎರ‍್ರಾಬಿರ‍್ರಿ ಓಡಿದ ಥಾರ್ ಜೀಪ್; ಬೈಕ್‌ ಸವಾರ ಸಾವು

Road Accident Mangalore Jeep

ಉಳ್ಳಾಲ (ಮಂಗಳೂರು): ಮಹೀಂದ್ರಾ ಥಾರ್‌ ಜೀಪ್‌ (Mahindra Thar Jeep) ಚಾಲಕನ ಅವಾಂತರದಿಂದಾಗಿ ಮಂಗಳೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ ಸವಾರರೊಬ್ಬರು (Bike rider dead) ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ (Road Accident). ರಾ.ಹೆದ್ದಾರಿ 66ರ ಕೊಲ್ಯ ಬ್ರಹ್ಮಶ್ರೀ ಮಂದಿರ ಎದುರುಗಡೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಈ ಅವಾಂತರಕ್ಕೆ ಥಾರ್‌ ಜೀಪ್‌ನಲ್ಲಿದ್ದವರ ಗಾಂಜಾ ನಶೆಯೇ (Ganja Case) ಕಾರಣ ಎಂದು ಆರೋಪಿಸಲಾಗಿದೆ.

ಥಾರ್‌ ಜೀಪ್‌ ಮಂಗಳೂರಿನಿಂದ ಕಾಸರಗೋಡು ಕಡೆಗೆ ಹೆದ್ದಾರಿಯಲ್ಲಿ ಸಾಗುತ್ತಿತ್ತು. ಅದು ಅತಿವೇಗ ಮತ್ತು ಅಜಾಗರೂಕತೆಯಿಂದ ವೇಗವಾಗಿ ಧಾವಿಸಿ ನಿಯಂತ್ರಣ ತಪ್ಪಿ ಎದುರು ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಕಾರಿನ ಚಕ್ರವೇ ಸಿಡಿದು ಹೊರಬಂತು.

ಹಾಗೆ ಕಾರಿನಿಂದ ಸಿಡಿದ ಕಾರು ಮುಂದೆ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯಿತು. ಚಕ್ರದ ಹೊಡೆತಕ್ಕೆ ಒಮ್ಮಿಂದೊಮ್ಮೆಗೇ ಸವಾರ ಕಕ್ಕಾಬಿಕ್ಕಿಯಾದರು. ಆಗ ಬೈಕ್‌ ಹೋಗಿ ಡಿವೈಡರ್‌ಗೆ ಬಡಿಯಿತು. ಬೈಕ್‌ ಸವಾರ ಅಲ್ಲೇ ಉರುಳಿಬಿದ್ದ ಪರಿಣಾಮವಾಗಿ ತಲೆ ರಸ್ತೆಗೆ ಬಡಿದು ಪ್ರಾಣ ಕಳೆದುಕೊಂಡಿದ್ದಾರೆ.

ಕೊಲ್ಯ ನಿವಾಸಿ ಸಂತೋಷ್ ಬೆಳ್ಚಾಡ ( 45) ಮೃತರು. ಬಾಳೆಹಣ್ಣು ವ್ಯಾಪಾರಿಯಾಗಿದ್ದ ಅವರು ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.

ಮಂಗಳೂರು ಕಡೆಯಿಂದ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯಲ್ಲಿದ್ದ ಜೀಪ್ ಎದುರಿನಲ್ಲಿ ಧರ್ಮಸ್ಥಳದಿಂದ ಕಾಞಂಗಾಡ್ ಗೆ ಕುಟುಂಬ ಸಮೇತರಾಗಿ ತೆರಳುತ್ತಿದ್ದ ಬಲೇನೋ ಕಾರಿನ ಮುಂಭಾಗಕ್ಕೆ ಢಿಕ್ಕಿ ಹೊಡೆದಿದೆ.

Road Accident mangalore

ಆಯತಪ್ಪಿದ ಕಾರು ಎದುರಿನಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ಬೈಕ್ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಬೈಕ್ ಡಿವೈಡರ್ ಗೆ ಬಡಿದ ಪರಿಣಾಮ ಸಂತೋಷ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ತೆರಳುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ವಿವಾಹಿತರಾಗಿದ್ದ ಸಂತೋಷ್ ಹೆತ್ತವರು, ಇಬ್ಬರು ಹೆಣ್ಮಕ್ಕಳು ಹಾಗೂ ಪತ್ನಿ ಇರುವ ಕುಟುಂಬದ ಆಧಾರಸ್ತಂಭವಾಗಿದ್ದರು.

ಇದನ್ನೂ ಓದಿ : Road Accident : ಡಿವೈಡರ್‌ಗೆ ಬೈಕ್‌ ಡಿಕ್ಕಿ; ಜವರಾಯನ ಮನೆ ಸೇರಿದ ಸವಾರ

ಗಾಂಜಾ ನಶೆಯಿಂದ ಘಟನೆ, ಶಾಶ್ವತ ಸಂಚಾರಿ ಪೊಲೀಸ್, ಬ್ಯಾರಿಕೇಡ್‌ಗೆ ಆಗ್ರಹ

ಘಟನೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಕೊಲ್ಯ ನಿವಾಸಿಗಳು ತಕ್ಷಣವೇ ಸ್ಥಳದಲ್ಲಿ ಸಂಚಾರಿ ಪೊಲೀಸರು, ಬ್ಯಾರಿಕೇಡ್ ಅಳವಡಿಸಲು ಒತ್ತಾಯಿಸಿದ್ದಾರೆ. ಸ್ಥಳದಲ್ಲಿ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಲೇ ಇದೆ. ಪೊಲೀಸರು ಯಾವುದೇ ಕ್ರಮ ವಹಿಸುತ್ತಿಲ್ಲ.

ಮಂಗಳವಾರ ನಡೆದಿರುವ ಅಪಘಾತಕ್ಕೆ ಗಾಂಜಾ ನಶೆಯೇ ಕಾರಣ. ಜೀಪಿನಲ್ಲಿದ್ದ ಮೂವರು ಯುವಕರು ನಶೆಯಲ್ಲಿದ್ದರಿಂದ ಘಟನೆ ನಡೆದಿದೆ. ತಕ್ಷಣವೇ ಮೂವರನ್ನು ತನಿಖೆಗೆ ಒಳಪಡಿಸಿ ಮೃತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬ ಆಗ್ರಹವನ್ನು ಸ್ಥಳೀಯ ಶೇಖರ್ ಕನೀರುತೋಟ ಮಾಡಿದ್ದಾರೆ.

Exit mobile version