Site icon Vistara News

Self Harming: ದಪ್ಪ ಇದೇನೆ ಎಂದು ಮನನೊಂದು ಕಟ್ಟಡದಿಂದ ಜಿಗಿದು MBBS ವಿದ್ಯಾರ್ಥಿನಿ ಆತ್ಮಹತ್ಯೆ

Medical student death in Mangalore

ಮಂಗಳೂರು: ರಾಜ್ಯದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ (Suicide Case) ಒಂದೇ ಸಮನೆ ಹೆಚ್ಚುತ್ತಿದೆ. ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡಕ್ಕೋ, ವಯಸ್ಸಿನಲ್ಲಿ ಎದುರಾಗುವ ಮಾನಸಿಕ ಖಿನ್ನತೆಗೋ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಂಗಳೂರಿನಲ್ಲಿ ಒಬ್ಬ ಎಂಬಿಬಿಎಸ್‌ ವಿದ್ಯಾರ್ಥಿನಿ (MBBS Student ends life) ಹಾಸ್ಟೆಲ್‌ ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾಳೆ. ʻʻನಾನು ತೀರಾ ದಪ್ಪ ಇದ್ದೇನೆ, ನೋಡೋಕೆ ಚೆನ್ನಾಗಿ ಕಾಣ್ತಾ ಇಲ್ಲʼʼ ಎಂದು ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಂಗಳೂರಿನ ‌ಎ.ಜೆ ಆಸ್ಪತ್ರೆ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಪ್ರಕೃತಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಆಕೆ ಸೋಮವಾರ ಮುಂಜಾನೆ 3 ಗಂಟೆ ಹೊತ್ತಿಗೆ ಎಜೆ ಆಸ್ಪತ್ರೆಯ ಮಹಿಳಾ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹಾಸ್ಟೆಲ್‌ನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಕೆ ಜೀವನದಲ್ಲಿ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‌ ನೋಟ್‌ ಬರೆದಿಟ್ಟಿದ್ದಾರೆ.

ʻʻʻನಾನು ದಪ್ಪ ಇದ್ದೇನೆ. ನೋಡಲು ಚೆನ್ನಾಗಿ ಕಾಣ್ತಾ ಇಲ್ಲ.ʼʼ ಎಂದು ದೀರ್ಘ ಸುಸೈಡ್‌ ನೋಟ್‌ನಲ್ಲಿ ಅವರು ಹೇಳಿದ್ದಾರೆ. ʻʻಎಂ.ಬಿ.ಬಿಎಸ್‌. ಮುಗಿಸಬೇಕು ಅಂತ ತುಂಬಾ ಆಸೆ ಇತ್ತು. ಆದರೆ, ನನ್ನ ಸೌಂದರ್ಯಕ್ಕೆ ದಪ್ಪ ಜೀವ ಅಡ್ಡಿಯಾಗಿದೆ. ತೂಕ ಇಳಿಸಲು ಸಾಕಷ್ಟು ಪ್ರಯತ್ನಪಟ್ಟರೂ ಆಗಲಿಲ್ಲ. ಹೀಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನ ಎಂದು ಅವರು ಹೇಳಿದ್ದಾರೆ.

ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

ಕಳೆದ ನವೆಂಬರ್‌ 2ರಂದು ಹಾಸನದ ರಾಜೀವ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ (Rajiv Institute of Technology College) ಪ್ರಥಮ ವರ್ಷದ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ ಓದುತ್ತಿದ್ದ ಮಾನ್ಯ ಕಾಲೇಜಿನ ಐದನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದರು. ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಹೊನ್ನಶೆಟ್ಟಿಹಳ್ಳಿ ಗ್ರಾಮದವಳಾಗಿರುವ ಮಾನ್ಯ ಆಂತರಿಕ ಪರೀಕ್ಷೆ ವೇಳೆ ನಕಲು ಮಾಡಿದ ಆರೋಪ ಕೇಳಿಬಂದಿತ್ತು. ಈ ವೇಳೆ ಆಕೆಯನ್ನು ಪರೀಕ್ಷಾ ಮೇಲ್ವಿಚಾರಕರು ಹಿಡಿದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಪ್ರಾಂಶುಪಾಲರ ಬಳಿಯೂ ಕರೆದುಕೊಂಡು ಹೋಗಿದ್ದರು. ಕಾಲೇಜು ಪ್ರಾಂಶುಪಾಲರಿಗೆ ಕ್ಷಮಾಪಣಾ ಪತ್ರವನ್ನು ಬರೆದುಕೊಡುವಂತೆ ಕೇಳಿದಾಗ ಆಕೆ ಅದಕ್ಕೆ ಪ್ರತಿಕ್ರಿಯಿಸದೆ ನೇರವಾಗಿ ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಎಸ್‌ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿದ್ದು, ಕಾಲೇಜು ಪ್ರಾಂಶುಪಾಲರನ್ನು ವಿಚಾರಿಸಿದ್ದಾರೆ. ಅಲ್ಲದೆ, ವಿದ್ಯಾರ್ಥಿನಿ ಜಿಗಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರೀಕ್ಷೆ ವೇಳೆ ನಡೆದ ಘಟನೆ ಬಗ್ಗೆಯೂ ಮಾಹಿತಿಯನ್ನು ಸಂಗ್ರಹ ಮಾಡಿದ್ದಾರೆ.

Manya Suicide case

ಗುರುವಾರ ಮೊದಲ ವರ್ಷದ ಬಿಇ ಈ ಆ್ಯಂಡ್ ಸಿ ವಿಭಾಗದ ಗಣಿತದ ಆಂತರಿಕ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆ ವೇಳೆ ವಿದ್ಯಾರ್ಥಿನಿ ಮಾನ್ಯ ಬಳಿ ಕಾಪಿ ಚೀಟಿ ಪತ್ತೆಯಾಗಿದ್ದಾಗಿ ತಿಳಿದುಬಂದಿದೆ. ಈ ವಿಚಾರವನ್ನು ಪ್ರಾಂಶುಪಾಲರಿಗೆ ಉಪನ್ಯಾಸಕರು ತಿಳಿಸಿದ್ದರಿಂದ ಆಕೆಯನ್ನು ಕೊಠಡಿಗೆ ಕರೆಸಿಕೊಂಡಿದ್ದ ಪ್ರಾಂಶುಪಾಲರು ವಾರ್ನ್‌ ಮಾಡಿ ಕಳಿಸಿದ್ದಾರೆನ್ನಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಮಾನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಏಳನೇ ಅಂತಸ್ತಿನಿಂದ ಜಿಗಿದು MBBS ವಿದ್ಯಾರ್ಥಿ ಆತ್ಮಹತ್ಯೆ

ಕಳೆದ ಫೆಬ್ರವರಿ 28ರಂದು ಬೀದರ್‌ನ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಎಂಬಿಬಿಎಸ್‌ (MBBS) ಹಾಸ್ಟೆಲ್‌ನ ಏಳನೇ ಅಂತಸ್ತಿನಿಂದ ಜಿಗಿದು ಶ್ರೀರಾಮ ಕಾಡಗಿ (22) ಎಂಬಾತ ಮೃತಪಟ್ಟಿದ್ದಾನೆ. ಆತ ಮಾನಸಿಕ ಒತ್ತಡಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದ ಎಂದು ಬಳಿಕ ತಿಳಿದುಬಂತು.

ಫೆಬ್ರವರಿ 26ರಂದು ಬೆಂಗಳೂರಿನಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬಳು 10ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು.

Exit mobile version