ಮಂಗಳೂರು: ಹೆಬ್ಬಾವಿನ ಮರಿ ಎಂದು ವಿಷದ ಹಾವಿನ ಮರಿ (Snake Bite) ಬರಿಗೈಯಲ್ಲಿ ಹಿಡಿದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹೆಬ್ಬಾವಿನ ಮರಿಯೆಂದು ತಪ್ಪು ಗ್ರಹಿಕೆ ಜೀವಕ್ಕೇ ಎರವಾದ ಪ್ರಸಂಗ ಮಂಗಳೂರು ಹೊರವಲಯದ ಬಜಪೆ ಎಂಬಲ್ಲಿ ನಡೆದಿದೆ. ಬಂಟ್ವಾಳದ ರಾಮಚಂದ್ರ ಪೂಜಾರಿ (58) ಮೃತ ದುರ್ದೈವಿ.
ಇಲ್ಲಿಯ ಮರವೂರಿನ ಮನೆಯೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಬಂಟ್ವಾಳ ರಾಮಚಂದ್ರ ಪೂಜಾರಿ, ಸೆ.4 ರಂದು ಮಧ್ಯಾಹ್ನ ಮನೆಯ ಮೆಟ್ಟಿಲು ಸಮೀಪ ಹಾವಿನ ಮರಿ ಕಂಡಿದ್ದಾರೆ. ಕನ್ನಡಿ ಹಾವಿನ ಮರಿಯನ್ನು ಹೆಬ್ಬಾವಿನ ಮರಿ ಎಂದು ಭಾವಿಸಿ ಬರಿಗೈಯಲ್ಲಿ ಹಿಡಿದಿದ್ದರು. ಹಿಡಿಯುವ ಸಂದರ್ಭ ರಾಮಚಂದ್ರ ಅವರ ಕೈಗೆ ಹಾವಿನ ಮರಿ ಕಚ್ಚಿತ್ತು.
ಕಚ್ಚಿದ್ದು ಹೆಬ್ಬಾವಿನ ಮರಿ ಎಂದು ರಾಮಚಂದ್ರ ನಿರ್ಲಕ್ಷಿಸಿದ್ದರು. ಕೆಲ ಹೊತ್ತಿನಲ್ಲಿ ಅಸ್ವಸ್ಥಗೊಂಡಿದ್ದ ರಾಮಚಂದ್ರರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ವಿಷ ಮೈವೇರಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ರಾಮಚಂದ್ರ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Self Harming : ಮುದ್ದಾದ ಮಕ್ಕಳಿಬ್ಬರ ಕತ್ತು ಹಿಸುಕಿ ಕೊಂದಳು; ಬಳಿಕ ತಾನೂ ನೇಣಿಗೆ ಶರಣಾದಳು ತಾಯಿ
ರಸ್ತೆಯಲ್ಲಿ ಕಾಡಾನೆ ಬಿಂದಾಸ್ ವಾಕ್
ರಾಜ್ಯ ಗಡಿಭಾಗ ಹೊಸೂರು ಸಮೀಪದ ಕೊಡಕರೈ ಮತ್ತು ಪೆಟ್ಟಮುಕಿಲಾಳ ಗ್ರಾಮದ ರಸ್ತೆಯಲ್ಲಿ ಕಾಡಾನೆ ಓಡಾಟವು ಜನರಲ್ಲಿ ಆತಂಕವನ್ನು ಹೆಚ್ಚಿಸಿತ್ತು. ವಾಹನಗಳನ್ನು ಓಡಾಡಲು ಬಿಡದೆ ರಸ್ತೆಯಲ್ಲಿ ಆನೆ ಬೀಡುಬಿಟ್ಟಿತ್ತು. ಗ್ರಾಮದ ಕೆರೆಯಲ್ಲಿ ಜಲಕ್ರೀಡೆ ಆಡಿ, ದೇಹ ತಂಪಾಗಿಸಿಕೊಂಡು ರಸ್ತೆಯಲ್ಲಿ ಓಡಾಡಿಕೊಂಡಿತ್ತು. ಈ ವೇಳೆ ಏಕಾಏಕಿ ಲಾರಿ ಕಡೆಗೆ ನುಗ್ಗಿದ್ದರಿಂದ ಕೆಲ ಸಮಯ ಭಯಭೀತರಾಗಿದ್ದರು. ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿಯೇ ಬೀಡು ಬಿಟ್ಟಿದ್ದ ಕಾಡಾನೆ, ಯಾವುದೇ ಅಪಾಯ ಮಾಡದೆ ಕಾಡಿನೊಳಗೆ ವಾಪಸ್ ಹೋಗಿದೆ. ಕಾಡಾನೆ ಹೋಗುತ್ತಿದ್ದಂತೆ ನಿಟ್ಟುಸಿರು ಬಿಟ್ಟರು.