ಉಡುಪಿ: ಯಕ್ಷಗಾನ ಪ್ರದರ್ಶನವೊಂದರ ವೇಳೆ ಪಂಜುರ್ಲಿ ದೈವದ ವೇಷಧಾರಿ ಹತ್ತಾರು ದೊಂದಿಗಳ ಸಮೇತ ಪ್ರತ್ಯಕ್ಷವಾಗಿ ನರ್ತಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕರಾವಳಿಯಲ್ಲಿ ಸದ್ಯ ಯಕ್ಷಗಾನ ಪ್ರದರ್ಶನಗಳ ಸೀಸನ್ ನಡೆಯುತ್ತಿದ್ದು, ಗ್ರಾಮೀಣ ಪದೇಶಗಳಲ್ಲಿಯೂ ಸ್ಥಳೀಯ ಹತ್ತಾರು ಯಕ್ಷಗಾನ ಮೇಳಗಳು ಪ್ರದರ್ಶನ ನೀಡುತ್ತಿವೆ. ಬ್ರಹ್ಮಾವರದ ಇಂದಿರಾನಗರದಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನ ಸೇವೆಯಲ್ಲಿ ಹಟ್ಟಿಯಂಗಡಿ ಮೇಳ ನೀಡಿರುವ ಯಕ್ಷಗಾನ ಪ್ರದರ್ಶನದ ಸಂದರ್ಭ ಪಂಜರ್ಲಿ ದೈವದ ಪ್ರವೇಶದ ವೇಳೆಯಲ್ಲಿ ಹೀಗೆ ದೊಂದಿಗಳ ಬಳಕೆ ಮಾಡಲಾಗಿದೆ.
ಕೋಲದ ವೇಷದಲ್ಲಿ ವಿಭಿನ್ನವಾಗಿ ಹತ್ತಾರು ದೊಂದಿಗಳೊಂದಿಗೆ ರಂಗಸ್ಥಳಕ್ಕೆ ಬಂದ ವೇಷಧಾರಿ ಅವುಗಳನ್ನು ಸುಂದರವಾಗಿ ಬ್ಯಾಲೆನ್ಸ್ ಮಾಡಿಕೊಂಡು ನರ್ತಿಸಿದ್ದು, ಇದನ್ನು ಸೆರೆಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆದಿದೆ. ಕರಾವಳಿಯಾದ್ಯಂತ ಭಾರಿ ವೈರಲ್ ಆಗಿದೆ ಕೂಡ.
ಇದನ್ನೂ ಓದಿ: Shardul Thakur: ಹಳದಿ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ ಶಾರ್ದೂಲ್ ಠಾಕೂರ್; ವಿಡಿಯೊ ವೈರಲ್