Site icon Vistara News

ಚಿಂತಾಮಣಿಯಲ್ಲಿ ಕಳ್ಳತನ ಆರೋಪ ಹೊರಿಸಿ ದಲಿತ ಬಾಲಕನನ್ನು ವಿದ್ಯುತ್‌ ಕಂಬಕ್ಕೆ‌ ಕಟ್ಟಿ ಹಾಕಿ ಹಲ್ಲೆ

dalit boy thashed

ಚಿಕ್ಕಬಳ್ಳಾಪುರ: ಉಳ್ಳೇರಹಳ್ಳಿಯ ದಲಿತರ‌ ಮೇಲಿನ‌ ಹಲ್ಲೆಯ ಘಟನೆ ಮಾಸುವ ಮುನ್ನವೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ದಲಿತ ಬಾಲಕನ ಮೇಲೆ ಅಮಾನುಷ ಹಲ್ಲೆ ನಡೆದಿದೆ. ಚಿಂತಾಮಣಿ ತಾಲೂಕಿನ‌ ಅಂಬಾಜಿ ದುರ್ಗ ಹೋಬಳಿಯ ಕೆಂಪದೇನಹಳ್ಳಿ ಗ್ರಾಮದಲ್ಲಿ ಆನಂದ ಎಂಬುವರ ಮಗ ಯಶ್ವಂತ ಎಂಬ ಬಾಲಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಲಾಗಿದೆ.

ನಾಗರಾಜ್‌ ಎಂಬುವರ ಮಗಳ ಕಿವಿಯ ಓಲೆ ಕದ್ದಿದ್ದಾನೆ ಎಂದು ಆರೋಪಿಸಿ ಯಶವಂತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಲಾಗಿದೆ. ನಾರಾಯಣಸ್ವಾಮಿ, ನವೀನ, ನಂಜೇಗೌಡ, ಹರೀಶ್, ನಾಗರಾಜ್ ಸೇರಿದಂತೆ ಹಲವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಥಳಿತಕ್ಕೆ ಒಳಗಾದ ಯಶವಂತ್‌ನನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ

ಈ‌ ಕುರಿತು ಪ್ರತಿಕ್ರಿಯಿಸಿದ ಮಾದಿಗ ದಂಡೋರ ಸಂಘಟನೆಯ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಜಂಗಮಶೀಗೆಹಳ್ಳಿ ದೇವರಾಜ್ ಅವರು, ಉಳ್ಳೇರಹಳ್ಳಿಯ ದಲಿತ ಬಾಲಕನ‌ ಮೇಲಿನ ಹಲ್ಲೆಯ ಘಟನೆ‌ ಮಾಸುವ ಮುನ್ನವೆ ಮತ್ತೊಂದು ಘಟನೆ ನಡೆದಿರುವುದು ಆಘಾತಕಾರಿಯಾಗಿದೆ. ಕಳ್ಳತನ‌ ಆರೋಪ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿ ಕಾನೂನು ತಮ್ಮ ಕೈಗೆ ತೆಗೆದುಕೊಂಡಿರುವ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

Exit mobile version