ಹಾವೇರಿ: ದೇವಾಲಯಕ್ಕೆ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ದಲಿತ ಸಮುದಾಯದ ತಾಯಿ, ಮಗನ ಮೇಲೆ ಹಲ್ಲೆ (Assault Case) ನಡೆಸಿರುವ ಘಟನೆ ರಾಣೇಬೆನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಯಿ ಹೆಮ್ಮವ್ವ ಮಲ್ಲಾಡದ, ಪುತ್ರ ರಮೇಶ್ ಹಲ್ಲೆಗೊಳಗಾದವರು. ಕಳೆದ ಎರಡು ದಿನಗಳ ಹಿಂದೆ ನಂದಿಹಳ್ಳಿ ಜಾತ್ರಾ ಮಹೋತ್ಸವ ನಡೆದಿತ್ತು. ಈ ವೇಳೆ ಬಸವೇಶ್ವರ ದೇವಾಲಯಕ್ಕೆ ಹೋಗಲು ಮುಂದಾದಾಗ ದಲಿತ ಸಮುದಾಯದ ತಾಯಿ, ಮಗನನ್ನು ಮೇಲ್ವರ್ಗದ ಜನರು ಪ್ರವೇಶ ದ್ವಾರದಲ್ಲೇ ತಡೆದು ಎಚ್ಚರಿಕೆ ನೀಡಿದ್ದಾರೆ. ಆದರೆ, ತಾಯಿ, ಮಗ ದೇವಸ್ಥಾನ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಮನೆಗೆ ತೆರಳಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ | Theft Case: ಕೋಲಾರದಲ್ಲಿ ದೇವರಿಗೆ ಕನ್ನ ಹಾಕಿದ ಖದೀಮರು; ಉಡುಪಿಯಲ್ಲಿ ಮನೆಗಳ್ಳರ ಬಂಧನ
ದೇಗುಲ ಪ್ರವೇಶ ಮಾಡಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ ಮಾಡಿ ಮನೆ ಹೆಂಚು, ಬೈಕ್ ಜಖಂಗೊಳಿಸಿ ದೌರ್ಜನ್ಯ ಮಾಡಲಾಗಿದೆ ಎಂದು ಹಲ್ಲೆಗೊಳಗಾದವರು ಸುಮಾರು 30 ಜನರ ವಿರುದ್ಧ ಹಲಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.