ಬೆಂಗಳೂರು: ನಗರದಲ್ಲಿ ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಬೈಕ್ ರೈಡ್ (Dangerous Bike Stunt) ಮಾಡಿದ್ದ ಯುವಕನನ್ನು ಹೆಬ್ಬಾಳ ಸಂಚಾರ ಪೊಲೀಸರು ಬಂಧಿಸಿದ್ದಾರೆ. ಅಪಾಯಕಾರಿ ಬೈಕ್ ರೈಡಿಂಗ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಯುವಕನನ್ನು ಪೊಲೀಸರು ಬಂಧಿಸಿ, ಬೈಕ್ ವಶಕ್ಕೆ ಪಡೆದಿದ್ದಾರೆ.
ಶಾಂಪುರ ನಿವಾಸಿ ಸಿಲಂಬರಸನ್ (21) ಬಂಧಿತ ಯುವಕ. ಯುವತಿಯನ್ನು ಯುವಕ ತೊಡೆ ಮೇಲೆ ಕೂರಿಸಿಕೊಂಡು ಬೈಕ್ ಚಾಲನೆ ಮಾಡಿದ್ದ ವಿಡಿಯೊ ವೈರಲ್ ಆಗಿತ್ತು. ಇದರಿಂದ ಬೈಕ್ ನಂಬರ್ ಪ್ಲೇಟ್ ಅಧರಿಸಿ ಸಿಲಂಬರಸನ್‌ನನ್ನು ಪೊಲೀಸರು ಬಂಧಿಸಿ, ಡಿಎಲ್ ರದ್ದು ಮಾಡಲು ಆರ್‌ಟಿಒಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ | Bomb Threat: ಏರ್‌ಪೋರ್ಟ್‌ನಲ್ಲಿ ಬಾಂಬ್ ಇದೆ ಎಂದು ತಮಾಷೆ ಮಾಡಲು ಹೋಗಿ ಜೈಲು ಪಾಲಾದ
ಬೈಕ್ನಲ್ಲಿ ಹೋಗುತ್ತಲೇ ರೊಮ್ಯಾನ್ಸ್!
ಇತ್ತೀಚೆಗೆ ಜೋಡಿಗಳು ಬೈಕ್ನಲ್ಲಿ ಹೋಗುತ್ತಲೇ ರೊಮ್ಯಾನ್ಸ್ (Romance in bike riding) ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹುಚ್ಚು ಸಾಹಸವೂ, ಪ್ರೇಮದ ಉನ್ಮಾದವೋ ಗೊತ್ತಿಲ್ಲ. ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಪರಸ್ಪರ ಎದುರುಬದುರು ಕುಳಿತುಕೊಂಡು ಮುದ್ದಾಡಿಕೊಂಡು ಹೋಗುವುದು, ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಡೆಡ್ಲಿ ರೈಡಿಂಗ್ ಮಾಡುವುದು ಹೆಚ್ಚುತ್ತಿದೆ. ಅದೇ ರೀತಿ ಬೆಂಗಳೂರಲ್ಲಿ (Yelahanka flyover) ಜೋಡಿಯೊಂದರ ಬೈಕ್ ರೈಡಿಂಗ್ (Bike Riding ವಿಡಿಯೊ ವೈರಲ್ ಆಗಿತ್ತು.
ಯುವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಯುವಕ ಸಿಲಂಬರಸನ್ ಬೈಕ್ ರೈಡ್ ಮಾಡಿದ್ದ. ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯ ಯಲಹಂಕ ಫ್ಲೈಓವರ್‌ನಲ್ಲಿ ಮೇ 17ರ ರಾತ್ರಿ ಈ ಘಟನೆ ನಡೆದಿತ್ತು. ಯುವ ಜೋಡಿಗಳು ಹೆಲ್ಮೆಟ್ ಧರಿಸದೇ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದ್ದರು. ಜೋಡಿಗಳ ಜಾಲಿ ರೈಡ್‌ನ ದೃಶ್ಯ ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.
ಇದನ್ನೂ ಓದಿ: Viral Video: ಐಸ್ ಕ್ರೀಮ್‌ನಲ್ಲಿ ಚಿನ್ನದ ಉಂಗುರ ಅಡಗಿಸಿಕೊಟ್ಟ ಪ್ರಿಯತಮ! ಮುಂದೇನಾಯ್ತು?
ನಂತರ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗಿದೆ. ಸಾರ್ವಜನಿಕ ಸುರಕ್ಷತೆ ಅಪಾಯಗಳ ಬಗ್ಗೆ ವ್ಯಾಪಕ ಕಳವಳ ಹುಟ್ಟುಹಾಕಿತ್ತು. ಹೆಲ್ಮೆಟ್ ಧರಿಸದೆ ಇರುವುದು ಜತೆಗೆ ಯುವತಿ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ತನ್ನ ಸಂಗಾತಿಯನ್ನು ಅಪ್ಪಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಇದನ್ನೂ ಓದಿ: Murder Case : ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ; ಕೆಆರ್ ಮಾರ್ಕೆಟ್‌ನಲ್ಲಿ ಶವ ಪತ್ತೆ
ಅಜಾಗರೂಕ ಮತ್ತು ಅನುಚಿತ ವರ್ತನೆಗಾಗಿ ದಂಡ ವಿಧಿಸಿ ಎಂದು ನೆಟ್ಟಿಗರು ಕಾಮೆಂಟ್ ಹಾಕಿದ್ದರು. ರಸ್ತೆ ಸುರಕ್ಷತೆಯ ಬಗ್ಗೆ ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯತೆಯ ಬಗ್ಗೆ ಚರ್ಚಿಸಿದ್ದರು. ಹೀಗಾಗಿ ಯಲಹಂಕ ಸಂಚಾರ ಪೊಲೀಸ್ ಠಾಣೆ ಪೊಲೀಸರು ಯುವಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.