Site icon Vistara News

Dargah Clearance | ಹುಬ್ಬಳ್ಳಿಯಲ್ಲಿ ದರ್ಗಾ ತೆರವುಗೊಳಿಸಿದ ಸ್ಥಳ ಪರಿಶೀಲಿಸಿದ ಸಿಎಂ; ಮುಸ್ಲಿಂ ಮುಖಂಡರೊಂದಿಗೆ ಸಭೆ

Dargah Clearance

ಹುಬ್ಬಳ್ಳಿ: ನಗರದ ಭೈರಿದೇವರಕೊಪ್ಪದಲ್ಲಿ ಹಜರತ್ ಸೈಯದ್ ಮೆಹಮೂದ್ ಷಾ ಖಾದ್ರಿ ದರ್ಗಾ ತೆರವು ಹಿನ್ನೆಲೆಯಲ್ಲಿ (Dargah Clearance) ಸಿಎಂ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಸ್ಥಳಪರಿಶೀಲನೆ ನಡೆಸಿ, ಅಂಜುಮನ್ ಸಂಸ್ಥೆ, ಸ್ಥಳೀಯ ಮುಸ್ಲಿಂ ಮುಖಂಡರ ಜತೆ ಸಭೆ ನಡೆಸಿದರು.

ಹೆದ್ದಾರಿ ಕಾಮಗಾರಿಗೆ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಆದೇಶದ ಮೇರೆಗೆ ಮೂರು ದಿನಗಳ ಹಿಂದೆ ದರ್ಗಾ ತೆರವು ಕಾರ್ಯಾಚರಣೆ ನಡೆದಿತ್ತು. ಇದಕ್ಕೆ ಸ್ಥಳೀಯ ಮುಸ್ಲಿಮರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಸಿಎಂ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿ, ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ | Kagodu Timmappa | ಡಿಕೆಶಿ ಅವರನ್ನು ಹಿಮ್ಮೆಟಿಸಲು ಬಿಜೆಪಿಯಿಂದ ತನಿಖಾ ಸಂಸ್ಥೆಯ ದುರ್ಬಳಕೆ: ಕಾಗೋಡು ತಿಮ್ಮಪ್ಪ ಆಕ್ರೋಶ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯ ಆದರ್ಶ ನಗರದ ನಿವಾಸದಲ್ಲಿ ಸಭೆ ನಡೆಸಿದರು. ದರ್ಗಾ ಕಮಿಟಿ ಅಧ್ಯಕ್ಷ ಮುನ್ನಾ ಹೆಬ್ಬಳಿ, ಮಾಜಿ ಸಚಿವ ಎ.ಎಮ್ ಹಿಂಡಸಗೇರಿ, ಅಂಜುಮನ್ ಕಮಿಟಿ ಮುಖಂಡರಾದ ವಹಾಬ್ ಮುಲ್ಲಾ, ಮಹಮ್ಮದ್ ಯೂಸುಫ್ ಸವಣೂರ, ಅಲ್ತಾಪ್ ಹಳ್ಳೂರ್, ಅಲ್ತಾಪ್ ಕಿತ್ತೂರ ಸೇರಿದಂತೆ ಮುಸ್ಕೀಮ್ ಮುಖಂಡರು ಭಾಗಿಯಾಗಿದ್ದರು.

ದರ್ಗಾ ತೆರವಿನ ಬಗ್ಗೆ ಮುಖಂಡರೊಂದಿಗೆ ಚರ್ಚೆ ಮಾಡಿದ ಸಿಎಂ, ದರ್ಗಾ ತೆರವು ಮಾಡಿರುವುದರಿಂದ ನನಗೂ ನೋವಾಗಿದೆ ಎಂದು ಹೇಳಿದ್ದಾರೆ. ಸಭೆ ಬಳಿಕ ಮುಖಂಡರು ಪ್ರತಿಕ್ರಿಯಿಸಿ, ನಮ್ಮ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ದರ್ಗಾ ತೆರವು ಮಾಡಿರುವುದರಿಂದ ನಮಗೆ ಬಹಳ ನೋವಾಗಿದೆ. ಆದರೂ ನಾವು ಶಾಂತಿ ಕಾಪಾಡಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Vokkaliga Reservation | ಒಕ್ಕಲಿಗ ಮೀಸಲಾತಿ ಕುರಿತು ಶೀಘ್ರ ವರದಿ ಲಭಿಸಲಿದೆ: ಸಿಎಂ ಬೊಮ್ಮಾಯಿ

Exit mobile version