ಬೆಂಗಳೂರು: ದೇಶದ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯ ಪ್ರದೇಶದವನ್ನು ಹೊಂದಿರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮುನಿರಾಜು (90901) ವಿಜಯ ಸಾಧಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ನ ಆರ್ ಮಂಜುನಾಥ್ ( 81666 ವಿರುದ್ಧ 9235 ಮತಗಳ ಅಂತರದಿಂದ ಗೆಲುವು ಕಂಡರು. 2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಆರ್. ಮಂಜುನಾಥ್ (94044) ಬಿಜೆಪಿಯ ಮುನಿರಾಜು (83369) ವಿರುದ್ಧ 10500 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ದಾಸರಹಳ್ಳಿಯಲ್ಲಿ ಹೊರ ರಾಜ್ಯಗಳ ಜನರೂ ಸೇರಿದಂತೆ ಕರ್ನಾಟಕದ 22ಕ್ಕೂ ಹೆಚ್ಚು ಜಿಲ್ಲೆಗಳ 9 ಲಕ್ಷಕ್ಕೂ ಅಧಿಕ ಮಂದಿ ಈ ಕ್ಷೇತ್ರದಲ್ಲಿ ವಾಸವಾಗಿದ್ದಾರೆ. 2008ರ ಕ್ಷೇತ್ರ ಪುನರ್ರಚನೆ ಬಳಿಕ ಈ ಕ್ಷೇತ್ರ ರಚನೆಯಾಯಿತು. ಚುನಾವಣೆಯಲ್ಲಿ ಬಿಜೆಪಿಯ ಮುನಿರಾಜು ಗೆಲುವು ಸಾಧಿಸಿದ್ದರು. 2103ರಲ್ಲಿ ಬಿಜೆಪಿಯಿಂದ ಮುನಿರಾಜು ಗೆದ್ದಿದ್ದರು. ಆದರೆ 2018ರಲ್ಲಿ ಅವರ ಹ್ಯಾಟ್ರಿಕ್ ಕನಸು ಭಗ್ನಗೊಳಿಸಿದ್ದರು.
ಇದನ್ನೂ ಓದಿ :Nelamangala Election Results : ನೆಲಮಂಗಲವನ್ನು ತೆಕ್ಕೆಗೆ ತೆಗೆದುಕೊಂಡ ಕಾಂಗ್ರೆಸ್
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರೇ ನಿರ್ಣಾಯಕವಾಗಿದ್ದು, 1.42 ಲಕ್ಷ ಮತದಾರರಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ 50ರಿಂದ 60 ಸಾವಿರ ಮತದಾರರು; ಬ್ರಾಹ್ಮಣರು 25 ಸಾವಿರ, ಕುರುಬರು 15 ಸಾವಿರ, ಮಲೆಯಾಳಿ ಭಾಷಿಕ ಮತದಾರರು 18 ಸಾವಿರ.