Site icon Vistara News

Express Highway : ಬೆಂಗಳೂರು-ಮೈಸೂರು ಹೆದ್ದಾರಿ, ವಂದೇ ಭಾರತ್‌ ಒಂದೇ ಫ್ರೇಮಲ್ಲಿ! ಬೊಮ್ಮಾಯಿ ವಿಡಿಯೊ ರಿಟ್ವೀಟ್‌ ಮಾಡಿದ ಮೋದಿ

Bommai modi Express way

#image_title

ಬೆಂಗಳೂರು: ಮೈಸೂರನ್ನು ಬೆಂಗಳೂರಿನ ಸನಿಹಕ್ಕೇ ತಂದಿರುವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ (Express Highway) ಸುಂದರ ದೃಶ್ಯ ಮತ್ತು ಅದೇ ಹೊತ್ತಿಗೆ ಅಡಿಭಾಗದಲ್ಲಿ ಸಾಗುವ ವಂದೇ ಭಾರತ್‌ ರೈಲಿನ ಸೊಬಗನ್ನು ಏಕಕಾಲದಲ್ಲಿ ಸೆರೆ ಹಿಡಿದ ಚೆಲುವಾದ ದೃಶ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಂಚಿಕೊಂಡಿದ್ದರು. ಅದನ್ನು ರಿಟ್ವೀಟ್‌ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೊಮ್ಮಾಯಿ ಅವರು ಹಂಚಿಕೊಂಡ ದೃಶ್ಯಾವಳಿಯಲ್ಲಿ ಡ್ರೋನ್‌ ಮೂಲಕ ಕಾಣುವ ಮೇಲ್ಸೇತುವೆಯ ಚೆಲುವು ಇದೆ. ಅಷ್ಟು ಹೊತ್ತಿಗೆ ವಂದೇ ಭಾರತ್‌ ರೈಲು ಬರುತ್ತದೆ. ಮುಂದೆ ಡ್ರೋನ್‌ ಹೆದ್ದಾರಿಯ ಮೂಲಕವೇ ಸ್ವಲ್ಪ ದೂರ ಸಾಗುತ್ತದೆ. ಇದೊಂದು ಸುಂದರ ದೃಶ್ಯವಾಗಿದ್ದು, ʻವ್ಹಾ ಎಂಥ ಸುಂದರ ದೃಶ್ಯ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಜತೆಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌. ಇದು ವಿಶ್ವದರ್ಜೆಯ ಮೂಲಭೂತ ಸೌಕರ್ಯ ಮತ್ತು ಕರ್ನಾಟಕದಲ್ಲಿ ನಡೆದಿರುವ ಅಭೂತಪೂರ್ವ ಬೆಳವಣಿಗೆಯ ದ್ಯೋತಕ ಎಂದು ಬರೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ರಾಜ್ಯದಲ್ಲಿ ಅದ್ಭುತಗಳನ್ನು ಸೃಷ್ಟಿಸುತ್ತಿದೆ ಎಂದು ಬೊಮ್ಮಾಯಿ ಟ್ವಿಟರ್‌ನಲ್ಲಿ ಬರೆದಿದ್ದರು.

ಸಿಎಂ ಬೊಮ್ಮಾಯಿ‌ ಟ್ವೀಟ್‌ನ್ನು ರಿಟ್ವೀಟ್‌ ಮಾಡಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ನಮ್ಮ ಜನರು ಸಾಧ್ಯವಿರುವ ಎಲ್ಲ ಉತ್ತಮ ಮೂಲಸೌಕರ್ಯಕ್ಕೆ ಅರ್ಹರು. ಅದನ್ನು ಒದಗಿಸಲು ನಮ್ಮ ಸರ್ಕಾರ ಯಾವಾಗಲೂ ಶ್ರಮಿಸುತ್ತದೆ. ಮೂಲಸೌಕರ್ಯ ಸೃಷ್ಟಿಯಲ್ಲಿನ ನಮ್ಮ ದಾಪುಗಾಲು ವ್ಯಾಪಕವಾಗಿ ಶ್ಲಾಘಿಸಲ್ಪಟ್ಟಿದೆ‌ ಎಂದಿದ್ದಾರೆ.

Exit mobile version