Site icon Vistara News

Datta Jayanti: ಈ ವೀಕೆಂಡ್‌ನಲ್ಲಿ ಚಿಕ್ಕಮಗಳೂರು ಕಡೆ ಬರಬೇಡಿ! ಗಿರಿಗಳಿಗೆ ನೋ ಎಂಟ್ರಿ, ಎಣ್ಣೆಯೂ ಸಿಗಲ್ಲ!

Bababudan giri

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ (Chikkamagaluru news) ಗಿರಿಧಾಮ (Hill station) ಪ್ರವಾಸಿ ತಾಣಗಳಲ್ಲಿ (Tourist places) ಇಂದಿನಿಂದ ಆರು ದಿನ ದತ್ತ ಜಯಂತಿ (Datta Jayanti) ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ. ಲಿಕ್ಕರ್‌ ಕೂಡ (liquor ban) ಸಿಗುವುದಿಲ್ಲ. ಹೀಗಾಗಿ ಈ ವಾರಾಂತ್ಯದಲ್ಲಿ ಚಿಕ್ಕಮಗಳೂರು ಟೂರ್‌ ಪ್ಲಾನ್‌ ಇದ್ದರೆ ಕ್ಯಾನ್ಸಲ್‌ ಮಾಡುವುದು ಉಚಿತ.

ದತ್ತಜಯಂತಿಯ ಹಿನ್ನೆಲೆಯಲ್ಲಿ ದೇವಸ್ಥಾನದ ಭಕ್ತಾದಿಗಳಿಗೆ ಹೊರತುಪಡಿಸಿ ಚಂದ್ರದ್ರೋಣ ಪರ್ವತಗಳ ಸಾಲಿನ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಇಂದಿನಿಂದ ಆರು ದಿನ (ಡಿಸೆಂಬರ್‌ 22- 27) ಟೂರಿಸ್ಟ್‌ಗಳಿಗೆ ಅವಕಾಶ ಬಂದ್ ಮಾಡಲಾಗಿದೆ. ಮೂರು ದಿನ ಲಿಕ್ಕರ್‌ ಕೂಡ ಸಿಗುವುದಿಲ್ಲ.

ಇಂದಿನಿಂದ 6 ದಿನಗಳ ಕಾಲ ಮುಳ್ಳಯ್ಯನಗಿರಿ ಬಂದ್ ಮಾಡಲಾಗುತ್ತಿದೆ. ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಧಾರ ಜಲಪಾತ ಎಲ್ಲವನ್ನೂ ಕ್ಲೋಸ್‌ ಮಾಡಲಾಗುತ್ತಿದೆ. ಇಂದಿನಿಂದ 27ರ ಬುಧವಾರ ಸಂಜೆವರೆಗೆ ಎಲ್ಲಾ ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.

ಆದರೆ ನೀವು ಹೋಂಸ್ಟೇ, ರೆಸಾರ್ಟ್‌ಗಳಲ್ಲಿ ರೂಮ್‌ ಬುಕ್ ಮಾಡಿದ್ದರೆ ಚಿಕ್ಕಮಗಳೂರಿಗೆ ಬರಬಹುದು. ಆದರೆ ಪ್ರವಾಸಿ ತಾಣಗಳಿಗೆ ಹೋಗುವಂತಿಲ್ಲ. ಹೋಂಸ್ಟೇ, ರೆಸಾರ್ಟ್ ಸುತ್ತಮುತ್ತ ಓಡಾಡಬಹುದು. ಜಿಲ್ಲೆಯ ಇತರ ಕಡೆಗಳಿಗೆ ಹಾಗೂ ಪ್ರವಾಸಿ ತಾಣಗಳಿಗೆ ಹೋಗುವುದಕ್ಕೆ ನಿರ್ಬಂಧವಿಲ್ಲ.

ಮುಳ್ಳಯ್ಯನಗಿರಿ ಭಾಗಕ್ಕೆ ರಾಜ್ಯದಿಂಧ ಹಾಗೂ ಕೇರಳದಿಂದ ಸಾವಿರಾರು ಪ್ರವಾಸಿಗರು ಪ್ರತಿದಿನ ಭೇಟಿ ನೀಡುತ್ತಿರುತ್ತಾರೆ. ದತ್ತಜಯಂತಿ ಹಿನ್ನೆಲೆಯಲ್ಲಿ ಭಕ್ತಾದಿಗಳು ಹಾಗೂ ಮಾಲಾಧಾರಿಗಳ ಸಂಖ್ಯೆ ಹೆಚ್ಚಿದೆ. ದತ್ತಮಾಲಾ ಧಾರಿಗಳು ಪಾದಯಾತ್ರೆಯ ಮೂಲಕ ಬೆಟ್ಟವನ್ನು ಏರುವ ರೂಢಿ ಇದೆ. ಹೀಗಾಗಿ ಈ ದಾರಿಯಲ್ಲಿ ವಾಹನಗಳ ಸಂಖ್ಯೆಯನ್ನು ಸೀಮಿತಗೊಳಿಸಲಾಗುತ್ತಿದೆ.

ಇದರ ಜೊತೆಗೆ ದತ್ತಜಯಂತಿ ಉತ್ಸವದ ಕಡೆಯ ದಿನ 5 ತಾಲೂಕುಗಳಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ. ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರದಲ್ಲಿ ಮದ್ಯದಂಗಡಿಗಳನ್ನು ತೆರೆಯದಂತೆ ಆದೇಶಿಸಲಾಗಿದೆ.

ಇದನ್ನೂ ಓದಿ: Datta Jayanti: ದತ್ತಮಾಲೆ ಧರಿಸಿದ ಚಿಕ್ಕಮಗಳೂರು ಕಾಂಗ್ರೆಸ್‌ ಶಾಸಕ ಎಚ್.ಡಿ ತಮ್ಮಯ್ಯ; ಹಿಂದು ಸಂಘಟನೆಗಳಿಗೆ ಸಾಥ್

Exit mobile version