Site icon Vistara News

Murder Case: ತಾಯಿಯ ಕೊಂದು ಸೂಟ್ ಕೇಸ್‌ನಲ್ಲಿ ಶವ ಹೊತ್ತು ಠಾಣೆಗೆ ಹೋದ ಮಗಳು!

suitcase

#image_title

ಬೆಂಗಳೂರು: ಹೆತ್ತ ತಾಯಿಯನ್ನೇ ಕೊಂದ ಮಗಳೊಬ್ಬಳು ಸೂಟ್ ಕೇಸ್‌ನಲ್ಲಿ ಶವ ಹೊತ್ತು ಪೊಲೀಸ್‌ ಠಾಣೆ ತೆರಳಿದ ಘಟನೆ (Murder Case) ನಗರದ ಮೈಕೊಲೇಔಟ್‌ನಲ್ಲಿ ನಡೆದಿದೆ. ಮಹಿಳೆಯು ಟ್ರಾಲಿ ಸೂಟ್ ಕೇಸ್‌ನಲ್ಲಿ ತಾಯಿಯ ಶವವಿಟ್ಟುಕೊಂಡು ಬಂದಿದ್ದನ್ನು ಕಂಡು ದಂಗಾದ ಪೊಲೀಸರು, ಆಕೆಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೆನಾಲಿ ಸೇನ್ (39) ಕೊಲೆ ಆರೋಪಿ. ಬೀವಾ ಪಾಲ್ (70) ಹತ್ಯೆಯಾದವರು. ಬಿಳೇಕಳ್ಳಿಯ ಎನ್‌ಎಸ್‌ಆರ್ ಗ್ರೀನ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಆರೋಪಿ ಸೆನಾಲಿ ಸೇನ್, ತಾಯಿ ಬೀವಾ ಪಾಲ್ ಹಾಗೂ ಆರೋಪಿ ಅತ್ತೆ ಒಟ್ಟಾಗಿದ್ದರು. ತಾಯಿ ಹಾಗೂ ಅತ್ತೆ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ | ಬಸ್‌ ರಶ್‌ ಇದ್ದಿದ್ದರಿಂದ ಬಾಗಿಲಲ್ಲಿ ನೇತಾಡುತ್ತಿದ್ದ ಬಾಲಕಿ ಆಯತಪ್ಪಿ ಬಿದ್ದು ಸಾವು; ಛೆ, ಬಸ್ ಹತ್ತಬಾರದಿತ್ತು ಎಂದ ಜನ

ಬೀಗರ ಜಗಳಕ್ಕೆ ಬೇಸತ್ತ ಬೀವಾ ಪಾಲ್ ನಿದ್ರೆ ಮಾತ್ರೆ ನುಂಗಿ ಸಾಯುವುದಾಗಿ ಹೇಳಿದ್ದಾಳೆ. ಹೀಗಾಗಿ ಮುಂಜಾನೆ ತಾಯಿಗೆ 20 ನಿದ್ರೆ ಮಾತ್ರೆಗಳನ್ನು ಮಗಳು ನುಂಗಿಸಿದ್ದಾಳೆ. ತಾಯಿ ಹೊಟ್ಟೆ ನೋವು ಎಂದಾಗ ಸೆನಾಲಿ ಸೇನ್‌ ತನ್ನ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ನಂತರ ಸೂಟ್‌ಕೇಸ್‌ನಲ್ಲಿ ತಾಯಿಯ ಶವದೊಂದಿಗೆ ತಂದೆಯ ಫೋಟೊವನ್ನು ಇಟ್ಟುಕೊಂಡು ನೇರವಾಗಿ ಮೈಕೊಲೇಔಟ್ ಪೊಲೀಸ್ ಠಾಣೆಗೆ ತೆರಳಿದ್ದಾರೆ.

ಸೆನಾಲಿ ಸೇನ್ ಕೃತ್ಯ ಕಂಡು ದಂಗಾಗಿ ಹೋಗಿರುವ ಪೊಲೀಸರು, ಸದ್ಯ ಪ್ರಕರಣ ದಾಖಲಿಸಿಕೊಂಡು ಆಕೆಯನ್ನು ಬಂಧಿಸಿದ್ದಾರೆ.

Exit mobile version