ಕೊಡಗು: ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸೊಸೆಯೊಬ್ಬಳು ಮಾವನನ್ನೇ ಗುಂಡಿಕ್ಕಿ ಕೊಂದು (Murder Case) ಹಾಕಿದ ಪ್ರಕರಣ ಸೋಮವಾರಪೇಟೆಯ ಕಿಕ್ಕರಳ್ಳಿಯಲ್ಲಿ ನಡೆದಿದೆ.
ಕೆ.ಎ. ಮಂದಣ್ಣ (73) ಮೃತ ದುರ್ದೈವಿ. ನೀಲಮ್ಮ ಉರುಫ್ ಜ್ಯೋತಿ (26) ಮಾವನನ್ನೇ ಕೊಂದವಳು. ಕೌಟುಂಬಿಕ ಕಲಹವೇ ಇಷ್ಟಕ್ಕೆಲ್ಲ ಕಾರಣ ಎನ್ನಲಾಗಿದೆ. ಆದರೆ, ಯಾವ ಕಾರಣಕ್ಕೆ ಜಗಳ ಪ್ರಾರಂಭವಾಗಿ ಗುಂಡಿಕ್ಕಿ ಕೊಂದಳು ಎಂಬ ಸಂಗತಿ ವಿಚಾರಣೆ ಬಳಿಕವಷ್ಟೇ ತಿಳಿದುಬರಬೇಕಿದೆ.
ಇದನ್ನೂ ಓದಿ: Karnataka Election 2023: ಸಿಎಂ ಬೊಮ್ಮಾಯಿ, ಜೋಶಿ ಸಂಧಾನ; ಬಿಜೆಪಿಯಲ್ಲೇ ಉಳಿಯಲಿದ್ದಾರಾ ವಿ. ಸೋಮಣ್ಣ?
ಭಾನುವಾರ ರಾತ್ರಿ ಸುಮಾರು 7 ಗಂಟೆ ನಂತರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೊಸೆ ಜ್ಯೋತಿಯನ್ನು ವಶಕ್ಕೆ ಪಡೆದ ಸೋಮವಾರಪೇಟೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.