ದಾವಣಗೆರೆ: ಮೂರು ರಾಜಕೀಯ ಪಕ್ಷಗಳಲ್ಲಿ ದೊಡ್ಡ ಮಟ್ಟದ ಕುತೂಹಲವನ್ನು ಮೂಡಿಸಿರುವ, ಮುಂದಿನ ಚುನಾವಣೆಯ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಟರ್ನಿಂಗ್ ಪಾಯಿಂಟ್ ಎಂದೇ ಹೇಳಲಾದ ಸಿದ್ದರಾಮೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ಬೆಳಗ್ಗೆ ೧೦.೩೦ಕ್ಕೆ ಅಧಿಕೃತವಾಗಿ ಕಾರ್ಯಕ್ರಮ ಆರಂಭವಾಗುವುದೇ ಆದರೂ ಈಗಾಗಲೇ ಲಕ್ಷಾಂತರ ಜನರು ದಾವಣಗೆರೆಯಲ್ಲಿ ಬೀಡುಬಿಟ್ಟಿದ್ದಾರೆ. ಕಾರ್ಯಕ್ರಮಕ್ಕಾಗಿ ರೂಪಿಸಿರುವ ಸಭಾಂಗಣಗಳಲ್ಲಿ ಜನರು ಈಗಾಗಲೇ ಬಂದು ಕುಳಿತುಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ೭೫ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆಯೋಜಿಸಿರುವ ಸಮಾರಂಭ ಇದು. ಒಂದು ಕಡೆ ಇದು ಸಿದ್ದರಾಮಯ್ಯ ಅವರು ತಮ್ಮ ವರ್ಚಸ್ಸು ವೃದ್ಧಿಗೆ ಮಾಡಿಕೊಂಡಿರುವ ಸಿದ್ಧತೆ ಎನ್ನಲಾಗುತ್ತಿದೆ. ಆದರೆ, ಅದಕ್ಕಿಂತಲೂ ಹೆಚ್ಚಾಗಿ ಕಾಂಗ್ರೆಸ್‌ನ ಚುನಾವಣಾ ರಣಕಹಳೆ ಇಲ್ಲಿಂದಲೇ ಮೊಳಗಲಿದೆ ಎನ್ನುವ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ರಾತ್ರಿಯೇ ಆಗಮಿಸಿದ್ದಾರೆ. ಜತೆಗೆ ಪಕ್ಷದ ಅಜೆಂಡಾವನ್ನು ಸ್ಪಷ್ಟಪಡಿಸಿದ್ದಾರೆ.
ಇಂದಿನ ಸಮಾವೇಶದ ಅಜೆಂಡಾ ಏನು?
2023ರ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ರಣಕಹಳೆ ಮೊಳಗಿಸುವುದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂದು ಬಿಂಬಿಸುವುದು, ರಾಜ್ಯ ಕಾಂಗ್ರೆಸ್ ಗೆ ಸಿದ್ದರಾಮಯ್ಯ ನಿರ್ಣಾಯಕ ಅನ್ನೋ ಸಂದೇಶ ರಾಹುಲ್ ಗಾಂಧಿಗೆ ರವಾನಿಸುವುದು ಎಂದು ಹೇಳಲಾಗುತ್ತಿದೆ. ಆದರೆ, ಈಗ ರಾಹುಲ್ ಗಾಂಧಿಯವರು ಎಲ್ಲರೂ ಜತೆಗಾಗಿ ಹೋಗಬೇಕು ಎಂದು ಸಂದೇಶ ನೀಡಿದ್ದಾರೆ. ಹೀಗಾಗಿ ಪಕ್ಷದ ಸರ್ವರನ್ನು ಒಳಗೊಳ್ಳುವ ಸಂದೇಶ ಹೊರಬೀಳುವ ನಿರೀಕ್ಷೆಯೂ ಇದೆ.
ದಾವಣಗೆರೆಯಲ್ಲಿ ಯಾಕೆ ಸಮಾವೇಶ
ಇದು ರಾಜ್ಯದ ಮಧ್ಯಭಾಗ ಎಂಬ ಕಾರಣವನ್ನು ನೀಡಲಾಗುತ್ತಿದೆ. ಆದರೆ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮ ಶಕ್ತಿ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿ ಆಯೋಜನೆ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಒಂದು ಹಂತದಲ್ಲಿ ಸಿದ್ದರಾಮಯ್ಯ ರಾಜಕೀಯ ಗ್ರಾಫ್ ಇಳಿದಾಗ ಕೈ ಹಿಡಿದಿದ್ದು ಉತ್ತರ ಕರ್ನಾಟಕ. 2005ರಲ್ಲಿ ಅಹಿಂದ ಬೃಹತ್ ಸಮಾವೇಶ ಮಾಡಿ ಶಕ್ತಿ ಗಿಟ್ಟಿಸಿಕೊಂಡಿದ್ದು ಹುಬ್ಬಳ್ಳಿಯಲ್ಲಿ. ೨012 ರ ಬಳ್ಳಾರಿ ಪಾದಯಾತ್ರೆಯಲ್ಲಿ ಬೆಂಗಳೂರಿಂದ ಬಳ್ಳಾರಿವರೆಗೂ ಸಿದ್ದರಾಮಯ್ಯ ಜತೆ ಕಾಲು ನಡಿಗೆ ಮಾಡಿದ್ದರು ಇಲ್ಲಿಯ ಜನ. ಈ ಭಾಗದ ಜನ ಸಾಥ್ ಕೊಟ್ಟ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಕಳೆದ ಬಾರಿ ಗೆಲ್ಲಿಸಿದ್ದು ಕೂಡಾ ಬಾದಾಮಿಯ ಜನರೆ. ಹೀಗಾಗಿ 2023 ವಿಧಾನ ಸಭಾ ಚುನಾವಣೆ ದೃಷ್ಟಿಯಿಂದ ಮುಂದಿನ ಸಿಎಂ ಕನಸು ಕಾಣುತ್ತಿರುವ ಸಿದ್ದರಾಮಯ್ಯ ಉತ್ತರ ಕರ್ನಾಟಕಕ್ಕೆ ಹತ್ತಿರ ಎಂಬ ಸಂದೇಶ ನೀಡಲು ಇಲ್ಲಿ ಸಮಾವೇಶ ಮಾಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಭಾಷಣ ಏನಿರಬಹುದು?
ಸಿದ್ದರಾಮಯ್ಯ ಅವರ ಭಾಷಣವೇ ಸಮಾವೇಶದ ಹೈಲೈಟ್ ಆಗಲಿದೆ. ಡಿಕೆ ಶಿವಕುಮಾರ್ ಭಾಷಣದಲ್ಲಿ ಏನಿದೆ ಎನ್ನುವುದು ಈಗಾಗಲೇ ಲೀಕ್ ಆಗಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಹೇಳುವ ಮಾತುಗಳಿಗೆ ಕುತೂಹಲವಿದೆ.
ಏನೇನು ಕಾರ್ಯಕ್ರಮ?
ಹೀಗಾಗಿ ಡಿಕೆಶಿ ಮನಸ್ಸಿನಲ್ಲಿ ಇರೋ ಅಭಿಪ್ರಾಯ ಈಗಾಗಲೇ ಕಾರ್ಯಕರ್ತರಿಗೆ ಗೊತ್ತಾಗಿದೆ
ಆದ್ರೆ ಸಿದ್ದರಾಮಯ್ಯ ಭಾಷಣದಲ್ಲಿ ಏನು ಹೇಳ್ತಾರೆ ಅನ್ನೋ ಕುತೂಹಲ ಎದ್ದು ಕಾಣಿಸುತ್ತಿದೆ
2023 ರ ಚುನಾವಣೆಯನ್ನ ಗುರಿಯಾಗಿ ಇಟ್ಟುಕೊಂಡು ಭಾಷಣ ಮಾಡಲಿರುವ ಸಿದ್ದರಾಮಯ್ಯ
ಮುಂದಿನ ಚುನಾವಣೆಯಲ್ಲಿ ನಮ್ಮ ಶಕ್ತಿ ಹೆಚ್ಚಿಸಿ ಅಂತ ಕರೆ ಕೊಡಲಿರುವ ಸಿದ್ದರಾಮಯ್ಯ
ಸಿದ್ದರಾಮಯ್ಯ ಭಾಷಣದ ಸಮಯದಲ್ಲಿ ಸಿದ್ದು ಸಿಎಂ ಸಿದ್ದು ಸಿಎಂ ಎಂಬ ಘೋಷಣೆ ಕೂಗುವುದು ಗ್ಯಾರೆಂಟಿ
ಇಂದು ಸಿದ್ದರಾಮಯ್ಯ75 ಅಮೃತ ಮಹೋತ್ಸವ ಕಾರ್ಯಕ್ರಮ
ಬೆಳಗ್ಗೆ 10.30-11:30 ಸಂಗೀತ ಕಾರ್ಯಕ್ರಮ
11:30 ರಿಂದ 11:45 ಸಿದ್ದರಾಮಯ್ಯ ಕುರಿತ ಸಾಕ್ಷ್ಯ ಚಿತ್ರ ಅನಾವರಣ
11:45 ರ ಬಳಿಕ ವಿವಿಧ ಶಾಸಕರು, ಕಾಂಗ್ರೆಸ್ ಮುಖಂಡರಿಂದ ಭಾಷಣ: ಕೆಎನ್.ರಾಜಣ್ಣ, ಎಚ್.ಸಿ. ಮಾಹದೇವಪ್ಪ, ಎಂ.ಬಿ ಪಾಟೀಲ್, ಕೆ.ಜೆ ಚಾರ್ಜ್, ರೆಹಮಾನ್ ಖಾನ್ ಅಥವಾ ಯುಟಿ ಖಾದರ್, ಡಾ.ಜಿ ಪರಮೇಶ್ವರ್, ದಿನೇಶ್ ಗುಂಡೂರಾವ್, ವೀರಪ್ಪ ಮೊಯ್ಲಿ, ಎಚ್.ಕೆ ಪಾಟೀಲ್, ಕೃಷ್ಣಭೈರೇಗೌಡ, ಕೆ.ಆರ್. ರಮೇಶ್ ಕುಮಾರ್, ಎಚ್ ಎಂ. ರೇವಣ್ಣ, ರಾಮಲಿಂಗರೆಡ್ಡಿ, ಈಶ್ವರ ಖಂಡ್ರೆ, ಮೋಟಮ್ಮ, ರಾಣಿ ಸತೀಶ್, ಉಮಾಶ್ರೀ, ಸತೀಶ್ ಜಾರಕಿಹೊಳಿ, ಧ್ರುವ ನಾರಾಯಣ್, ಸಲೀಂ ಅಹ್ಮದ್ ಮಾತನಾಡುತ್ತಾರೆ.
12:30ಕ್ಕೆ ವೇದಿಕೆಗೆ ಆಗಮಿಸಲಿರುವ ರಾಹುಲ್ ಗಾಂಧಿ. ರಾಹುಲ್ ಗಾಂಧಿ ಆಗಮನದ ಬಳಿಕ ಬಸವರಾಜ ರಾಯರೆಡ್ಡಿ ಸ್ವಾಗತ ಭಾಷಣ ಮಾಡುತ್ತಾರೆ. ಬಳಿಕ ರಾಹುಲ್ ಗಾಂಧಿಗೆ ಸನ್ಮಾನ ನಡೆಯಲಿದೆ.
ಬಿಕೆ ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ರಿಂದ ಭಾಷಣದ ಬಳಿಕ ರಾಹುಲ್ ಗಾಂಧಿ ಮಾತನಾಡುತ್ತಾರೆ. ಆರ್.ವಿ. ದೇಶಪಾಂಡೆ ಅವರಿಂದ ಅಭಿನಂದನಾ ಭಾಷಣದ ಬಳಿಕ ಸಿದ್ದರಾಮಯ್ಯ ಅವರಿಗೆ ಸನ್ಮಾನ ನಡೆಯಲಿದೆ. ಬಳಿಕ ಸಿದ್ದರಾಮಯ್ಯ ಮಾತನಾಡುತ್ತಾರೆ. ಕೊನೆಗೆ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಂದ ಧನ್ಯವಾದ ಸಮರ್ಪಣೆ.
ಇದನ್ನೂ ಓದಿ | ಸಿದ್ದರಾಮಯ್ಯ@75 | ಎಲ್ಲ ದಾರಿಗಳೂ ದಾವಣಗೆರೆಯತ್ತ, ನಿರೀಕ್ಷೆ ಮೀರಿ ಬಂದ ವಾಹನಗಳು, ಫುಲ್ ಟ್ರಾಫಿಕ್ ಜಾಮ್