Site icon Vistara News

ಹೊನ್ನಾಳಿಯಲ್ಲಿ ಸಾವರ್ಕರ್‌, ತಿಲಕ್‌ ಬ್ಯಾನರ್‌ ಧ್ವಂಸ

savarkar

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಹಾಕಲಾದ ಸ್ವಾತಂತ್ರ್ಯವೀರ ಸಾವರ್ಕರ್ ಹಾಗೂ ಬಾಲಗಂಗಾಧರ ತಿಲಕ್ ಬ್ಯಾನರ್ ಅನ್ನು ದುಷ್ಕರ್ಮಿಗಳು ಹರಿದು ಹಾಕಿದ್ದಾರೆ.

ಹೊನ್ನಾಳಿಯಲ್ಲಿ ಹಿಂದೂ ಮಹಾ ಗಣೇಶ ಸೇವಾ ಸಮಿತಿಯಿಂದ ಈ ಬ್ಯಾನರ್ ಹಾಕಲಾಗಿತ್ತು. ಗಣೇಶ ಹಬ್ಬದ ಪ್ರಯುಕ್ತ ಗಣೇಶನ ಜೊತೆ ಸಾವರ್ಕರ್ ಪೋಟೋ ಹಾಕಿದ್ದರು. ಹಿಂದೂ ಕಾರ್ಯಕರ್ತರು ಸಾವರ್ಕರ್ ಪೋಟೋ ಅಭಿಯಾನ ಮಾಡಿದ್ದರು.

ಮಂಗಳವಾರ ತಡರಾತ್ರಿ ಸಾವರ್ಕರ್ ಪೋಟೋವನ್ನು ದುಷ್ಕರ್ಮಿಗಳು ಹರಿದು ಹಾಕಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸುವಂತೆ ಹಿಂದೂ ಮಹಾಗಣೇಶ ಸಮಿತಿ ಒತ್ತಾಯಿಸಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಭಾರಿ ಕೋಮು ಗಲಭೆಗೆ ಸಂಚು? ಅಪರಿಚಿತ ಪತ್ರ ತಂದ ಆತಂಕ

Exit mobile version