ಶಿವಮೊಗ್ಗದಲ್ಲಿ ಭಾರಿ ಕೋಮು ಗಲಭೆಗೆ ಸಂಚು? ಅಪರಿಚಿತ ಪತ್ರ ತಂದ ಆತಂಕ - Vistara News

ಪ್ರಮುಖ ಸುದ್ದಿ

ಶಿವಮೊಗ್ಗದಲ್ಲಿ ಭಾರಿ ಕೋಮು ಗಲಭೆಗೆ ಸಂಚು? ಅಪರಿಚಿತ ಪತ್ರ ತಂದ ಆತಂಕ

ಶಿವಮೊಗ್ಗದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಕೋಮು ಗಲಭೆಗೆ ಸಂಚು ರೂಪಿಸಲಾಗುತ್ತಿದೆ ಎಂದು ಅಪರಿಚಿತ ಪತ್ರವೊಂದು ಪೊಲೀಸರಿಗೆ ದೊರೆತಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

VISTARANEWS.COM


on

shimogga
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿವಮೊಗ್ಗ: ಶಿವಮೊಗ್ಗದಲ್ಲಿ ಭಾರಿ ಕೋಮು ಗಲಭೆ ಸೃಷ್ಟಿಸಲು ಸಂಚು ನಡೆಯುತ್ತಿದೆ ಎಂಬ ಒಕ್ಕಣೆ ಹೊಂದಿರುವ ಅಪರಿಚಿತರು ಬರೆದ ಪತ್ರವೊಂದು ಆತಂಕ ಮೂಡಿಸಿದೆ.

ಗಾಂಧಿ ಬಜಾರ್‌ನ ಗಂಗಪರಮೇಶ್ವರಿ ದೇವಸ್ಥಾನದ ಬಳಿ ಪತ್ರ ಪತ್ತೆಯಾಗಿದೆ. ಗಣಪತಿ ಹಬ್ಬದ ಸಂದರ್ಭ ನಗರದಲ್ಲಿ ಮೂವರ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ದೇವಸ್ಥಾನದ ಪಕ್ಕದಲ್ಲಿದ್ದ ಅಂಗಡಿ ಮಾಲೀಕರೊಬ್ಬರು ಬಾಗಿಲು ಮುಚ್ಚುವ ವೇಳೆ ಖಾಕಿ ಬಣ್ಣದ ಕವರ್ ಪತ್ತೆಯಾಗಿದೆ. ಲಕೋಟೆಯ ಮೇಲೆ ಪೊಲೀಸ್ ಇಲಾಖೆಗೆ ಈ ಪತ್ರ ಕೊಟ್ಟು ಕೋಮುಗಲಭೆ ತಪ್ಪಿಸಿ ಮತ್ತು ಮೂವರ ಪ್ರಾಣವನ್ನ ಉಳಿಸಿ ಎಂದು ಬರೆಯಲಾಗಿದೆ.

ʼʼಒಬ್ಬ ಮಾರ್ವಾಡಿಯನ್ನು ಅರ್ಧಂಬರ್ಧ ಕೊಲೆ ಮಾಡಲಾಗಿದೆ. ಆತನನ್ನು ಸಂಪೂರ್ಣ ತೆಗೆಯಬೇಕು. ಇನ್ನೊಬ್ಬ ಮಾರ್ವಾಡಿ ಉದ್ದಿಮೆದಾರ ಹಾಗೂ ಹರ್ಷನ ಸಹಚರನನ್ನು ಕೊಲೆ ಮಾಡುವ ಯೋಜನೆಯಿದೆ. ಮಾರುಕಟ್ಟೆಯಲ್ಲಿ ಶೌಚಾಲಯದ ಬಳಿ ಮೂವರು ಗಾಂಜಾ ಸೇದುವವರು ಈ ಬಗ್ಗೆ ಮಾತನಾಡಿಕೊಂಡಿದ್ದಾರೆ. ಮೂವರನ್ನು ಮಂಗಳೂರಿನಿಂದ ಕರೆಯಿಸಬೇಕು. ಅವರು ಮೊಬೈಲ್ ಫೋನ್ ಬಳಸಬಾರದು. ಯಾವುದೇ ಕಾರಣಕ್ಕೂ ಸ್ಥಳೀಯವಾಗಿ ಯಾರಿಗೂ ಈ ಬಗ್ಗೆ ತಿಳಿಯಬಾರದು. ಗಲಾಟೆ ನಡೆದರೇ ಈ ಹಬ್ಬದ ಆಚರಣೆ ತಡೆಯಲು ಸಾಧ್ಯ ಎಂದು ಮೂವರು ಯುವಕರು ಮಾತನಾಡಿಕೊಂಡಿರುವುದನ್ನು ಕೇಳಿಸಿಕೊಂಡಿದ್ದೇನೆ. ಇದನ್ನು ಕೇಳಿ ಭಯಭೀತನಾಗಿದ್ದೇನೆʼʼ ಎಂದು ಪತ್ರದಲ್ಲಿ ಬರೆಯಲಾಗಿದೆ.

ಮೊಹ್ಮದ್ ಫೈಸಲ್ ಯಾನೆ ಚೆನ್ನು ಎಂಬಾತ ಈ ಗುಂಪಿನಲ್ಲಿದ್ದ. ಈತ ಗಾಂಜಾ ಮಾರುವುದು, ಗಾಂಜಾ ಸೇವನೆಯನ್ನೂ ಮಾಡುತ್ತಾನೆ. ಈತ ಆಜಾದ್ ನಗರದಲ್ಲಿ ರೌಡಿಯಂತೆ ವರ್ತಿಸುತ್ತಾನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಫೈಸಲ್‌ನನ್ನು ಪೊಲೀಸರು ವಿಚಾರಿಸಬೇಕು. ಪತ್ರ ಬರೆದ ಅಪರಿಚತನನ್ನು ಪತ್ತೆಹಚ್ಚಬೇಕು ಎಂದು ಅದು ದೊರೆತ ಅಂಗಡಿ ಮಾಲೀಕರು ಎಫ್‌ಐಆರ್‌ನಲ್ಲಿ ಮನವಿ ಮಾಡಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Shivamogga clash | ಶಾಂತ ಸ್ಥಿತಿಯಲ್ಲಿ ಶಿವಮೊಗ್ಗ, ಸೆಕ್ಷನ್ 144 ಮುಂದುವರಿಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Fraud case: ಡಾಕ್ಟರ್ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ಹೋಗಿ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡ ನಟ!

Fraud case: ಆ ಲಿಂಕ್ ಒತ್ತಿ ಇಷ್ಟು ಹಣ ಕಳೆದುಕೊಂಡರು, ಈ ಲಿಂಕ್ ಬ್ಯಾಂಕ್ ಬ್ಯಾಲೆನ್ಸ್ ಪೂರ್ತಿ ಕಳೆದುಕೊಂಡರು ಎಂಬ ಸುದ್ದಿ ದಿನ ಕೇಳುತ್ತೇವೆ. ಆದರೂ ಮತ್ತೆ ಮತ್ತೆ ಮೋಸ ಹೋಗುತ್ತಾ ಇರುತ್ತೇವೆ. ದಾದರ್‌ನಲ್ಲಿ ನಟನೊಬ್ಬ ಫೋನ್‌ನಲ್ಲಿ ವೈದ್ಯರ ಅಪಾಯಿಂಟ್ ಮೆಂಟ್ ತೆಗೆದುಕೊಳ್ಳಲು ಹೋಗಿ ವಂಚಕನಿಂದ ಟೋಪಿ ಹಾಕಿಸಿಕೊಂಡ ಘಟನೆ ನಡೆದಿದೆ.

VISTARANEWS.COM


on

Fraud case
Koo

ಮುಂಬೈ: ಇಂದಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್ (Digital) ನಿಂದ ಆಗುತ್ತಿದೆ. ಒಂದು ಪ್ಯಾಕೆಟ್‌ ಬಿಸ್ಕೇಟ್‌ ನಿಂದ ಹಿಡಿದು ಹಾಕುವ ಬಟ್ಟೆವರೆಗೂ ಫೋನ್‌ ಮೂಲಕ ವ್ಯವಹಾರ ನಡೆಸುತ್ತೇವೆ. ಪರ್ಸ್‌ ಮರೆತರೂ ಪರ್ವಾಗಿಲ್ಲ, ಮೊಬೈಲ್‌ ಹಾಗೂ ಆನ್‌ಲೈನ್‌ ಬ್ಯಾಂಕಿಂಗ್‌ನ ಪಾಸವರ್ಡ್‌ ನೆನಪಿದ್ದರೆ ಸಾಕು ಎನ್ನುವವರೇ ಹೆಚ್ಚು. ಜನರು ಎಲ್ಲಾ ವ್ಯವಹಾರಗಳನ್ನು ಆನ್‌ಲೈನ್ ನಲ್ಲಿಯೇ ಮಾಡುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ (Cyber Crime) ಘಟನೆಗಳು ಹೆಚ್ಚಾಗಿ ನಡೆಯುತ್ತಿರುತ್ತದೆ. ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ, ಮೆಸೇಜ್ ಗಳನ್ನು ಕಳುಹಿಸುವ ಮೂಲಕ ಅವರ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಲೂಟಿ ಮಾಡುತ್ತಿದ್ದಾರೆ. ಇದೀಗ ಅಂತಹದೊಂದು ಘಟನೆ ದಾಖಲಾಗಿದೆ. ದಾದರ್‌ನಲ್ಲಿ ನಟನೊಬ್ಬ ಫೋನ್ ನಲ್ಲಿ ವೈದ್ಯರ ಅಪಾಯಿಂಟ್ ಮೆಂಟ್ ತೆಗೆದುಕೊಳ್ಳಲು ಹೋಗಿ ವಂಚಕನಿಂದ (Fraud case) ತನ್ನ ಬ್ಯಾಂಕ್ ಖಾತೆಯಿಂದ 77,000 ರೂ ಕಳೆದುಕೊಂಡಿದ್ದಾನೆ.

ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಬಾಲ್ ಆಜಾದ್ (59) ವಂಚನೆಗೆ ಒಳಗಾದ ಸಂತ್ರಸ್ತ. ಈತ ಗೂಗಲ್ ನಲ್ಲಿ ಮೂಳೆ ವೈದ್ಯರ ಫೋನ್ ನಂಬರ್ ಅನ್ನು ಹುಡುಕಿ ಜೂನ್ 6ರಂದು ಅವರಿಗೆ ಕರೆ ಮಾಡಿದ್ದಾನೆ. ಆ ಕಡೆ ಕರೆ ಸ್ವೀಕರಿಸಿದ ವ್ಯಕ್ತಿ ವೈದ್ಯರೊಂದಿಗೆ ಮಾತನಾಡುವ ಮೊದಲು 10 ರೂ ಪಾವತಿಸಿ ನೊಂದಾಯಿಸಿಕೊಳ್ಳಲು ಹೇಳಿದ್ದಾನೆ. ಹಾಗೇ ಆತ ಆಜಾದ್ ಗೆ ಎರಡು ಬಾರಿ ಲಿಂಕ್ ಕಳುಹಿಸಿದನು. ಆದರೆ ಆಜಾದ್ ಆ ಲಿಂಕ್ ಗೆ ಮೊತ್ತವನ್ನು ಕಳುಹಿಸಲು ವಿಫಲನಾದನು. ಆದರೂ ಅವರ ಖಾತೆಯಿಂದ 77,000 ರೂ. ಲೂಟಿಯಾಗಿದೆ.

ಆಜಾದ್‌ಗೆ ಅನುಮಾನ ಬಂದು ತಕ್ಷಣ ತಮ್ಮ ಬ್ಯಾಂಕ್ ಮ್ಯಾನೇಜರ್‌ಗೆ ಎಚ್ಚರಿಕೆ ನೀಡಿದರೂ ಕೂಡ ವಂಚಿತನ ಲಿಂಕ್ ಟ್ಯಾಪ್ ಮಾಡಿದ ನಾಲ್ಕು ದಿನಗಳ ನಂತರ ಅವನ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆ. ಬ್ಯಾಂಕ್ ಹಣ ಕಡಿತಗೊಂಡ ಬಗ್ಗೆ ಸೋಮವಾರ ಆಜಾದ್ ಮೊಬೈಲ್‌ಗೆ ನಾಲ್ಕು ಮಸೇಜ್ ಬಂದಿದೆ. ಹಾಗಾಗಿ ಆತ ತಕ್ಷಣ ಸೈಬರ್ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿದರೂ ಕೂಡ ಅವನಿಗೆ ಅವನ ಹಣ ಮರಳಿ ಸಿಗಲಿಲ್ಲ ಎಂಬುದಾಗಿ ತಿಳಿದುಬಂದಿದೆ.

ಈ ಬಗ್ಗೆ ಆಜಾದ್ ಪ್ರಕರಣ ದಾಖಲಿಸಿದ್ದು, 420(ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ: Free Bus Problem: ನಮಗೆ ಫ್ರೀ ಬಸ್‌ ಬೇಡ, ವಿದ್ಯೆ ಬೇಕು! ಈ ವಿದ್ಯಾರ್ಥಿನಿ ಮಾತಿನ ವಿಡಿಯೊ ನೋಡಿ

ಹಾಗಾಗಿ ಜನರು ಆನ್‌ಲೈನ್ ನಲ್ಲಿ ವ್ಯವಹಾರ ಮಾಡುವ ಮುನ್ನ ಎಚ್ಚರಿಕೆಯಿಂದಿರಿ. ನಿಮಗೆ ತಿಳಿಯದ ಯಾವುದೇ ಲಿಂಕ್‌ಗಳನ್ನು ಓಪನ್ ಮಾಡಲು ಹೋಗಬೇಡಿ. ಇದರಿಂದ ನೀವು ಸೈಬರ್ ಅಟ್ಯಾಕ್‌ಗಳಿಂದ ತಪ್ಪಿಸಿಕೊಳ್ಳಬಹುದು.

Continue Reading

ಪ್ರಮುಖ ಸುದ್ದಿ

Murder Case: 300 ಕೋಟಿಯ ಆಸ್ತಿಗಾಗಿ ಮಾವನ ಕೊಲೆಗೆ ಸುಪಾರಿ ಕೊಟ್ಟ ಸೊಸೆ!

Murder Case: ಆಸ್ತಿಗಾಗಿ ನಮ್ಮವರನ್ನೇ ಕೊಲೆ ಮಾಡುವಂತಹ ಹೀನಕೃತ್ಯಕ್ಕೆ ಇಂದು ಜನ ಮುಂದಾಗುತ್ತಿದ್ದಾರೆ. ಹಣದ ಮುಂದೆ ಈಗ ಸಂಬಂಧಗಳಿಗೆ, ಮಾನವೀಯತೆಗೆ ಬೆಲೆ ಇಲ್ಲದಂತಾಗಿದೆ. ಇಲ್ಲೊಬ್ಬಳು ಸೊಸೆ ಆಸ್ತಿಗಾಗಿ ಮಾವನಿಗೆ ಸುಪಾರಿ ನೀಡಿದ್ದಾಳೆ.

VISTARANEWS.COM


on

Murder case
Koo

ನಾಗ್ಪುರ: ಇಂದಿನ ಕಾಲದಲ್ಲಿ ಆಸ್ತಿ, ಹಣಕ್ಕೆ ಇದ್ದ ಬೆಲೆ ಮನುಷ್ಯನ ಪ್ರಾಣಕ್ಕಿಲ್ಲದಂತಾಗಿದೆ. ಆಸ್ತಿ, ಹಣಕ್ಕಾಗಿ ಜನರು ತಮ್ಮವರನ್ನೇ ಕೊಲೆ (Murder Case) ಮಾಡುತ್ತಿದ್ದಾರೆ. ಮಾನವೀಯತೆ, ಸಂಬಂಧದ ಮೇಲಿನ ಕಾಳಜಿಯನ್ನು ಬಿಟ್ಟು ಹಣ, ಆಸ್ತಿ ಹಿಂದೆ ಜನರು ಹೋಗುತ್ತಿದ್ದಾರೆ. ಇಂತಹ ಘೋರ ಕೃತ್ಯಗಳು ಈ ಕಲಿಯುಗದಲ್ಲಿ ಅಲ್ಲಲ್ಲಿ ನಡೆಯುತ್ತಿರುತ್ತದೆ. ಅಂತದೊಂದು ಘಟನೆ ಇತ್ತೀಚಿಗೆ ನಾಗ್ಪುರದಲ್ಲಿ ನಡೆದಿದೆ.

ಮಾವ-ಸೊಸೆಯೆಂದರೆ, ತಂದೆ-ಮಗಳ ಹಾಗೇ ಇರುವ ಕಾಲವಿಲ್ಲ ಈಗ. ಒಂದು ಸಂಸಾರದಲ್ಲಿ ಎಲ್ಲರೂ ಇದ್ದಾಗ ಇರುವ ಖುಷಿಯೇ ಬೇರೆ ಇರುತ್ತದೆ. ನಮಗೆ ಸಂಬಂಧಗಳು ಬೇಡ, ಆಸ್ತಿ ಮಾತ್ರ ಸಾಕು ಎನ್ನುವವರೇ ಹೆಚ್ಚು ಈಗ. ಸೊಸೆಯೊಬ್ಬಳು ತನ್ನ ಮಾವನ 300 ಕೋಟಿ ಆಸ್ತಿ ಮೇಲೆ ಕಣ್ಣಿಟ್ಟಿದ್ದು, ಅದನ್ನು ಪಡೆಯಲು ಮಾವನ ಕೊಲೆಗಾಗಿ ಸುಪಾರಿ ನೀಡಿದ್ದಾಳೆ. ಮಾವನ ಕೊಲೆ ಮಾಡಲು ಹಂತಕರಿಗೆ ಒಂದು ಕೋಟಿ ರೂ ನೀಡಿರುವುದಾಗಿ ತಿಳಿದುಬಂದಿದೆ.
ಪುರುಷೋತ್ತಮ್ ಪುಟ್ಟೇವಾರ್ (82 ವರ್ಷ) ಮಹಿಳೆಯ ಸಂಚಿಗೆ ಬಲಿಯಾದ ವ್ಯಕ್ತಿ. ಅವರು ಮೇ22ರಂದು ನಾಗ್ಪುರದ ಬಾಲಾಜಿ ನಗರಿಯಲ್ಲಿ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದು ಸಾವನಪ್ಪಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣದ ಆರಂಭದಲ್ಲಿ ಕಾರು ಚಾಲಕನಿಗೆ ಜಾಮೀನು ನೀಡಿ ಬಿಟ್ಟುಬಿಡಲಾಗಿತ್ತು. ಆದರೆ ತನಿಖೆಯ ವೇಳೆ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳಿಂದ ಇದು ಕೊಲೆ ಪ್ರಕರಣ ಎಂಬುದು ತಿಳಿದುಬಂದಿದೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 6 ರಂದು ಆರೋಪಿ ಅರ್ಚನಾ ಮನೀಶ್ ಪುಟ್ಟೇವಾರ್(53) ಹಾಗೂ ಆಕೆಯ ಸಹಚರರಾದ ಸಾರ್ಥಕ್ ಬಾಗ್ಡೆ ಮತ್ತು ಧರ್ಮಿಕ್ ಅವರನ್ನು ಬಂಧಿಸಲಾಗಿದೆ.

ಈ ಕೊಲೆ ಮಾಡಲು ಆರೋಪಿ ಅರ್ಚನಾ ಸಹ ಆರೋಪಿ ಧರ್ಮಿಕ್ ಅವರಿಗೆ 40000 ರೂಪಾಯಿ ಖರ್ಚು ಮಾಡಿದ್ದು ಮತ್ತು ಅಪಫಾತ ಮಾಡಲು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಲು ಸಾರ್ಥಕ್ ಬಾಗ್ಡೆ ಗೆ 1.20 ಲಕ್ಷ ರೂಪಾಯಿ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಅಲ್ಲದೇ ಈಗಾಗಲೇ ಧರ್ಮಿಕ್ 3ಲಕ್ಷ ರೂಪಾಯಿ ಹಾಗೂ ಕೆಲಸ ಪೂರ್ಣಗೊಳಿಸಲು ಸ್ವಲ್ಪ ಚಿನ್ನವನ್ನು ಆರೋಪಿ ಅರ್ಚನಾಳಿಂದ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ.

ಈಗಾಗಲೇ ಪೊಲೀಸರು ಧರ್ಮಿಕ್ ನಿವಾಸದಲ್ಲಿ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಗೇ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಕೊಲೆ ಮತ್ತು ಇತರ ಅಪರಾಧಗಳ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Fraud Case: 300 ರೂ. ಬೆಲೆಯ ನಕಲಿ ಆಭರಣವನ್ನು ವಿದೇಶಿ ಮಹಿಳೆಗೆ 6 ಕೋಟಿ ರೂ.ಗೆ ಮಾರಿದರು!

ಹಾಗೇ ಆರೋಪಿ ಅರ್ಚನಾ ಅವರು ಗಡ್ಚಿರೋಲಿ ಮತ್ತು ಚಂದಾಪುರದಲ್ಲಿ ನಗರ ಯೋಜನೆ ಸಹಾಯಕ ನಿರ್ದೇಶಕಿಯಾಗಿದ್ದರು ಎಂಬುದಾಗಿ ತಿಳಿದುಬಂದಿದೆ. ಹಾಗೇ ಸಹ ಆರೋಪಿ ಸಾರ್ಥಕ್ ಬಾಗ್ಡೆ ಆರೋಪಿ ಅರ್ಚನಾಳ ಪತಿಯ ಕಾರು ಚಾಲಕ ಎಂಬುದಾಗಿ ತಿಳಿದುಬಂದಿದೆ.

Continue Reading

ಪ್ರಮುಖ ಸುದ್ದಿ

Belagavi News : ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲೆ ಪಾಕ್​ ಪರ ಘೋಷಣೆ ಕೂಗಿದ ಆರೋಪಿ

Belagavi News ::

VISTARANEWS.COM


on

Belagvi Police
Koo

ಬೆಳಗಾವಿ : ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲೇ ನಟೋರಿಯಸ್​ ಕ್ರಿಮಿನಲ್ ಒಬ್ಬ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆ ನಡೆದಿದೆ. ಆತನ ಕುಕೃತ್ಯದಿಂದ ಕೋಪಗೊಂಡ ಸ್ಥಳದಲ್ಲಿದ್ದವರು ಧರ್ಮದೇಟು ಕೊಟ್ಟಿದ್ದಾರೆ. ಪೊಲೀಸರ ಆತನನ್ನು ರಕ್ಷಿಸಿ ಮತ್ತೆ ಜೈಲಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಆರೋಪಿಯನ್ನು ಐಪಿಎಸ್​ ಅಧಿಕಾರಿ ಅಲೋಕ್ ಕುಮಾರ್​ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಆತ ಪಾಕಿಸ್ತಾನ ಜಿಂದಾಬಾದ್​ ಎಂದು ಕೂಗುವ ಮೂಲಕ ಸ್ಥಳದಲ್ಲಿದ್ದವರನ್ನು ಕೆರಳಿಸಿದ್ದ.

ನಟೋರಿಯಸ್ ಪಾತಕಿ ಜಯೇಶ್ ಪೂಜಾರಿಯಿಂದ ಪಾಕಿಸ್ತಾನ ಪರ ಘೋಷಣೆ ಕೂಗಿ ಧರ್ಮದೇಟು ತಿಂದವು. ಆತ ಘೋಷಣೆ ಕೂಗುತ್ತಿದ್ದಂತೆ ವಕೀಲರು, ಸಾರ್ವಜನಿಕರಿಂದ ಪೆಟ್ಟು ಬಿದ್ದಿದೆ. ಕೋರ್ಟ್ ಒಳ ಭಾಗದಲ್ಲೇ ಆತನಿಗೆ ಪೆಟ್ಟಿ ಬಿದ್ದಿದೆ. ಏಟು ಬೀಳುತ್ತಿದ್ದಂತೆ ಆರೋಪಿಯನ್ನು ರಕ್ಷಣೆ ಮಾಡಿ ಹೊರ ಕರೆದುಕೊಂಡು ಬಂದ ಪೊಲೀಸರು. ಅಲ್ಲಿಂದ ಎಪಿಎಂಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಜಯೇಶ್ ಪೂಜಾರ್​​ ಈ ಹಿಂದೆ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಗೆ ಜೈಲಿನಿಂದ ಜೀವ ಬೆದರಿಕೆ ಹಾಕಿದ್ದ. ಹಿಂಡಲಗಾ ಜೈಲಿನಲ್ಲಿದ್ದುಕೊಂಡು ಜೀವ ಬೆದರಿಕೆ ಹಾಕಿದ್ದ. ಈ ಕೇಸ್ ಹಿನ್ನೆಲೆಯಲ್ಲಿ ಕೋರ್ಟ್ ಗೆ ಕರೆ ತರಲಾಗಿತ್ತು. ಆರೋಪಿ ಜಯೇಶ್​ ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೂ ಜೈಲಿನಿಂದ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಕೋರ್ಟ್ ನಲ್ಲಿ ತನ್ನ ಅಹವಾಲು ಸ್ವೀಕರಿಸುತ್ತಿಲ್ಲ ಅಂತಾ ಪಾಕ್ ಪರ ಘೋಷಣೆ ಕೂಗಿರುವುದಾಗಿ ಆತ ಹೇಳಿದ್ದಾನೆ.

ವಾಟರ್​ ಮ್ಯಾನ್​ ಮೇಲೆ ಠಾಣೆಯಲ್ಲಿ ಹಲ್ಲೆ ; ಡಿವೈಎಸ್​ಪಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಎಫ್​ಐಆರ್​​

ತುಮಕೂರು: ಗ್ರಾಮ ಪಂಚಾಯತ್​ ವಾಟರ್ ಮ್ಯಾನ್ ಒಬ್ಬರನ್ನು ಎಳೆದೊಯ್ದು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಡಿವೈಎಸ್​ಪಿ ಸೇರಿ ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಕುಣಿಗಲ್​ ಪೊಲೀಸ್ ಠಾಣೆಯಲ್ಲಿ (Tumkur News) ದೂರು ದಾಖಲಾಗಿದೆ. ಎಫ್​ಐಆರ್​ ದಾಖಲಿಸುವಂತೆ ನ್ಯಾಯಾಲಯ ಆದೇಶದ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಇದನ್ನೂ ಓದಿ:Chikkaballapur News : ಒಂದೇ ಗ್ರಾಮದಲ್ಲಿ ನಾಲ್ವರ ಸರಣಿ ಸಾವು ; ಸ್ಥಳೀಯರಲ್ಲಿ ಆತಂಕ

ಕುಣಿಗಲ್ ಡಿವೈಎಸ್​​ಪಿ, ಓಂ ಪ್ರಕಾಶ್, ಸರ್ಕಲ್ ಇನ್ ಸ್ಪೆಕ್ಟರ್ ಮಾಧವ ನಾಯಕ್, ಅಮೃತ್ತೂರು ಪೊಲೀಸ್ ಠಾಣೆ ಸಬ್ ಇನ್ ಸ್ಪೆಕ್ಟರ್ ಶಮಂತ್ ಗೌಡ, ಎಸ್​​ಎಚ್​ಒ ದಯಾನಂದ್ ವಿರುದ್ಧ ಎಫ್ ಐಆರ್ ದಾಖಲು ಮಾಡಲು ಕೋರ್ಟ್ ಆದೇಶಿದೆ.

ಮಾರ್ಚ್ 23ರಂದು ವಾಟರ್ ಮ್ಯಾನ್ ಗಂಗಾಧರ್ ಅವರನ್ನು ವಿಚಾರಣೆ ನೆಪದಲ್ಲಿ ಕುಣಿಗಲ್​ ಠಾಣೆಗೆ ಕರೆದೊಯ್ಯಲಾಗಿತ್ತು. ಅಮೃತ್ತೂರು ಹೋಬಳಿಯ ಕೆ.ಹೆಚ್ ಹಳ್ಳಿ ಗ್ರಾ.ಪಂನ ವಾಟರ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರೋ ಗಂಗಾಧರ್ ಅವರನ್ನು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡದೇ ಕರೆದುಕೊರಮಡು ಹೋಗಲಾಗಿತ್ತು. ಅಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

Continue Reading

ಪ್ರಮುಖ ಸುದ್ದಿ

Tumkur News : ವಾಟರ್​ ಮ್ಯಾನ್​ ಮೇಲೆ ಠಾಣೆಯಲ್ಲಿ ಹಲ್ಲೆ ; ಡಿವೈಎಸ್​ಪಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಎಫ್​ಐಆರ್​​

Tumkur News :ಕುಣಿಗಲ್ ಡಿವೈಎಸ್​​ಪಿ, ಓಂ ಪ್ರಕಾಶ್, ಸರ್ಕಲ್ ಇನ್ ಸ್ಪೆಕ್ಟರ್ ಮಾಧವ ನಾಯಕ್, ಅಮೃತ್ತೂರು ಪೊಲೀಸ್ ಠಾಣೆ ಸಬ್ ಇನ್ ಸ್ಪೆಕ್ಟರ್ ಶಮಂತ್ ಗೌಡ, ಎಸ್​​ಎಚ್​ಒ ದಯಾನಂದ್ ವಿರುದ್ಧ ಎಫ್ ಐಆರ್ ದಾಖಲು ಮಾಡಲು ಕೋರ್ಟ್ ಆದೇಶಿದೆ.

VISTARANEWS.COM


on

Tumkur News
Koo

ತುಮಕೂರು: ಗ್ರಾಮ ಪಂಚಾಯತ್​ ವಾಟರ್ ಮ್ಯಾನ್ ಒಬ್ಬರನ್ನು ಎಳೆದೊಯ್ದು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ಡಿವೈಎಸ್​ಪಿ ಸೇರಿ ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಕುಣಿಗಲ್​ ಪೊಲೀಸ್ ಠಾಣೆಯಲ್ಲಿ (Tumkur News) ದೂರು ದಾಖಲಾಗಿದೆ. ಎಫ್​ಐಆರ್​ ದಾಖಲಿಸುವಂತೆ ನ್ಯಾಯಾಲಯ ಆದೇಶದ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಕುಣಿಗಲ್ ಡಿವೈಎಸ್​​ಪಿ, ಓಂ ಪ್ರಕಾಶ್, ಸರ್ಕಲ್ ಇನ್ ಸ್ಪೆಕ್ಟರ್ ಮಾಧವ ನಾಯಕ್, ಅಮೃತ್ತೂರು ಪೊಲೀಸ್ ಠಾಣೆ ಸಬ್ ಇನ್ ಸ್ಪೆಕ್ಟರ್ ಶಮಂತ್ ಗೌಡ, ಎಸ್​​ಎಚ್​ಒ ದಯಾನಂದ್ ವಿರುದ್ಧ ಎಫ್ ಐಆರ್ ದಾಖಲು ಮಾಡಲು ಕೋರ್ಟ್ ಆದೇಶಿದೆ.

ಮಾರ್ಚ್ 23ರಂದು ವಾಟರ್ ಮ್ಯಾನ್ ಗಂಗಾಧರ್ ಅವರನ್ನು ವಿಚಾರಣೆ ನೆಪದಲ್ಲಿ ಕುಣಿಗಲ್​ ಠಾಣೆಗೆ ಕರೆದೊಯ್ಯಲಾಗಿತ್ತು. ಅಮೃತ್ತೂರು ಹೋಬಳಿಯ ಕೆ.ಹೆಚ್ ಹಳ್ಳಿ ಗ್ರಾ.ಪಂನ ವಾಟರ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರೋ ಗಂಗಾಧರ್ ಅವರನ್ನು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡದೇ ಕರೆದುಕೊರಮಡು ಹೋಗಲಾಗಿತ್ತು. ಅಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Chikkaballapur News : ಒಂದೇ ಗ್ರಾಮದಲ್ಲಿ ನಾಲ್ವರ ಸರಣಿ ಸಾವು ; ಸ್ಥಳೀಯರಲ್ಲಿ ಆತಂಕ

ಗಂಗಾಧರ್ ಅವರನ್ನು ಕರೆದುಕೊಂಡು ಹೋದ ಪೊಲೀಸರು ಸಂಜೆ ವೇಳೆ ಬಿಟ್ಟಿದ್ದರು. ಈ ನಡುವೆ ಅವರಿಗೆ ಬಾಸುಂಡೆ ಬರುವಂತೆ ಬಾರಿಸಿದ್ದರು ಎಂದು ಹೇಳಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ತಮಗಾಗಿರುವ ಅನ್ಯಾಯವನ್ನು ಪ್ರಶ್ನಿಸಿ ಕೋರ್ಟ್​ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯ ಪೊಲೀಸ್​ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಿಸಲು ಆದೇಶಿಸಿದೆ.

ಖಾಸಗಿ ಕ್ಷಣದ ಫೋಟೋಗಳನ್ನಿಟ್ಟು ಬೆದರಿಕೆ ಹಾಕುತ್ತಿದ್ದವನನ್ನು ಕೊಲೆ ಮಾಡಿದ ವಿವಾಹಿತ ಮಹಿಳೆ


ಖಾಸಗಿ ಕ್ಷಣಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿ ಮರ್ಯಾದೆ ಕಳೆಯುವುದಾಗಿ ಬೆದರಿಕೆ ಹಾಕಿದ್ದ ಪ್ರಿಯಕರನ್ನು ವಿವಾಹಿತ ಮಹಿಳೆಯೊಬ್ಬಳು ಸಹೋದರನ ಜತೆ ಸೇರಿಕೊಂಡು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣ (Murder News) ಎಚ್​​​ಡಿ ಕೋಟೆ ತಾಲೂಕಿನ ಸಿದ್ದಯ್ಯನ ಹುಂಡಿ ಬಳಿ ನಡೆದಿದೆ. ಪ್ರೇಮಾ ಹಾಗೂ ಆಕೆಯ ಸಹೋದರ ಶಿವು ಕೊಲೆ ಆರೋಪಿಗಳು. 32 ವರ್ಷದ ರಾಜೇಶ್​ ಕೊಲೆಯಾದ ವ್ಯಕ್ತಿ.

ಆರೋಪಿ ಪ್ರೇಮಾ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಯಾಗಿದ್ದಾರೆ. ಅವರು 15 ವರ್ಷದ ಹಿಂದೆ ನಂಜನಗೂಡಿನ ಶ್ರೀರಾಂಪುರಕ್ಕೆ ಮದುವೆ ಆಗಿ ಬಂದಿದ್ದರು. ಒಂದು ತಿಂಗಳ ಹಿಂದೆ ಪ್ರೇಮಾಳ ಪತಿ ಆತ್ಮಹತ್ಯೆ. ಮಾಡಿಕೊಂಡಿದ್ದರು. ಆ ಬಳಿಕ ಪ್ರೇಮಾ ಪತಿಯ ಸ್ನೇಹಿತ ರಾಜೇಶ್​ ಜತೆ ಪ್ರೀತಿಯಲ್ಲಿ ಬಿದ್ದಿದ್ದಳು. ಅವರಿಬ್ಬರು ಖಾಸಗಿ ಕ್ಷಣಗಳನ್ನೂ ಕಳೆದಿದ್ದರು. ಇದನ್ನೇ ದುರ್ಬಳಕೆ ಮಾಡಿಕೊಂಡಿದ್ದ ರಾಜೇಶ್​​, ಆ ಕ್ಷಣದ ಫೋಟೋಗಳನ್ನು ತೆಗೆದಿಟ್ಟುಕೊಂಡು ಬೆದರಿಕೆ ಹಾಕಲು ಆರಂಭಿಸಿದ್ದ. ಬೆದರಿದ ಪ್ರೇಮಾ ಆತನ ಜೀವನ ಕೊನೆಗೊಳಿಸಲು ನಿರ್ಧರಿಸಿದ್ದಾಳೆ. ಅಂತೆಯೇ ಆತನನ್ನು ತನ್ನ ಬಳಿಗೆ ಕರೆಸಿಕೊಂಡು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾಳೆ.

Continue Reading
Advertisement
Gold Rate Today
ಚಿನ್ನದ ದರ3 mins ago

Gold Rate Today: ಚಿನ್ನದ ದರ ಮತ್ತೆ ಗಗನಮುಖಿ; ಇಂದಿನ ಬೆಲೆ ಇಷ್ಟಿದೆ

Actor Darshan Cars Seized By Police
ಸ್ಯಾಂಡಲ್ ವುಡ್26 mins ago

Actor Darshan: ಕಾರಿನಲ್ಲಿತ್ತು ಮದ್ಯದ ಬಾಟಲಿ, ವ್ಯಾನಿಟಿ ಬ್ಯಾಗ್; ಶವ ಸಾಗಿಸಿದ್ದು ಯಾವ ಕಾರಲ್ಲಿ?

Fraud case
ಪ್ರಮುಖ ಸುದ್ದಿ34 mins ago

Fraud case: ಡಾಕ್ಟರ್ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ಹೋಗಿ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡ ನಟ!

Murder case
ಪ್ರಮುಖ ಸುದ್ದಿ37 mins ago

Murder Case: 300 ಕೋಟಿಯ ಆಸ್ತಿಗಾಗಿ ಮಾವನ ಕೊಲೆಗೆ ಸುಪಾರಿ ಕೊಟ್ಟ ಸೊಸೆ!

Chandrababu Naidu
ದೇಶ39 mins ago

Chandrababu Naidu: ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪದಗ್ರಹಣ

Viral News
ರಾಜಕೀಯ39 mins ago

Viral News: ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯಿದೆ ಜಾರಿ?

Belagvi Police
ಪ್ರಮುಖ ಸುದ್ದಿ42 mins ago

Belagavi News : ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲೆ ಪಾಕ್​ ಪರ ಘೋಷಣೆ ಕೂಗಿದ ಆರೋಪಿ

Tumkur News
ಪ್ರಮುಖ ಸುದ್ದಿ1 hour ago

Tumkur News : ವಾಟರ್​ ಮ್ಯಾನ್​ ಮೇಲೆ ಠಾಣೆಯಲ್ಲಿ ಹಲ್ಲೆ ; ಡಿವೈಎಸ್​ಪಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಎಫ್​ಐಆರ್​​

Actor Darshan arest Actor Jaggesh Says Karma Follows You
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್‌ ಅರೆಸ್ಟ್​ ಆದ ಬೆನ್ನಲ್ಲೇ ಕರ್ಮ ಫಲ ಎಂದು ಜಗ್ಗೇಶ್‌ ಟ್ವೀಟ್‌!

Modi 3.0
ದೇಶ1 hour ago

Modi 3.0: ಶೀಘ್ರ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್‌, ಡೀಸೆಲ್‌? ಕೇಂದ್ರ ಸಚಿವರು ಹೇಳಿದ್ದೇನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ20 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ21 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ22 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ24 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌