ಯಶವಂತ್, ದಾವಣಗೆರೆ
ಅಡಕೆನಾಡು ಚನ್ನಗಿರಿ ಕರ್ನಾಟಕ ರಾಜ್ಯಕ್ಕೆ 15ನೇ ಮುಖ್ಯಮಂತ್ರಿಯನ್ನು ಕೊಟ್ಟಂತಹ ಕ್ಷೇತ್ರ. ಜೆ.ಎಚ್. ಪಟೇಲ್ ಅವರಿಗೆ ರಾಜಕೀಯವಾಗಿ ಶಕ್ತಿ ತಂದುಕೊಟ್ಟದ್ದು ಚನ್ನಗಿರಿ ವಿಧಾನಸಭಾ ಕ್ಷೇತ್ರ. 1978ರಲ್ಲಿ ಮೊದಲ ಬಾರಿಗೆ ಚನ್ನಗಿರಿ ಕ್ಷೇತ್ರದಿಂದ ಆಯ್ಕೆಯಾದ ಜೆ.ಎಚ್.ಪಟೇಲ್ 1983, 1985 ಸತತ ಗೆಲುವಿನ ಮೂಲಕ ಹ್ಯಾಟ್ರಿಕ್ ಬಾರಿಸಿದ್ದರು. 1989 ರಲ್ಲಿ ಕಾಂಗ್ರೆಸ್ನ ಎನ್.ಜಿ.ಹಾಲಪ್ಪ ಗೆದ್ದರು. ಬಳಿಕ ಕ್ಷೇತ್ರದ ಜನ 1994 ರಲ್ಲಿ ಪುನಃ ಜೆ.ಎಚ್.ಪಟೇಲ್ ಕೈಹಿಡಿದರು. ಅದರ ಪರಿಣಾಮ ಜೆ.ಎಚ್.ಪಟೇಲ್ ಅವರು ರಾಜ್ಯದ 15ನೇ ಮುಖ್ಯಮಂತ್ರಿಯಾಗಲು ಅನುವು ಮಾಡಿಕೊಟ್ಟರು. ಜೆ.ಎಚ್.ಪಟೇಲ್ ನಂತರ ಉತ್ತರಾಧಿಕಾರಿಯಾಗಿ ಅವರ ಪುತ್ರ ಮಹಿಮಾ ಜೆ ಪಟೇಲ್ 2004 ರಲ್ಲಿ ಸ್ಪರ್ಧಿಸಿ 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅಲ್ಲಿಗೆ ಪಟೇಲರ ಆಡಳಿತ ಮುಗಿದು, ಕಾಂಗ್ರೆಸ್-ಬಿಜೆಪಿ ನಡವೆ ಪೈಪೋಟೆ ಏರ್ಪಟ್ಟಿತು.
ಬಿಜೆಪಿ ವರ್ಸಸ್ ಕಾಂಗ್ರೆಸ್
ಚನ್ನಗಿರಿ ವಿಧಾನಸಭಾ ಕ್ಷೇತ್ರ 2004ರಿಂದೀಚೆಗೆ ಬಿಜೆಪಿ / ಕಾಂಗ್ರೆಸ್ ಕದನ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿಯಾಗಿ ಮಾಡಾಳ್ ವಿರೂಪಾಕ್ಷಪ್ಪ, ಕಾಂಗ್ರೆಸ್ ಅಭ್ಯರ್ಥಿಯಾಗಿ ವಡ್ನಾಳ್ ರಾಜಣ್ಣ ಪ್ರತಿ ಚುನಾವಣೆಯಲ್ಲಿ ಕಣದಲ್ಲಿರುತ್ತಾರೆ. ಆದರೆ, 2023ರ ಚುನಾವಣೆಯಲ್ಲಿ ಈ ಇಬ್ಬರೂ ಅಭ್ಯರ್ಥಿಗಳು ಕಣದಲ್ಲಿ ಇರುತ್ತಾರೆಯೇ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿದೆ. ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ವಯಸ್ಸಿನ ಕಾರಣ ಹಾಗೂ ಉತ್ತರಾಧಿಕಾರಿ ವಿಚಾರದಲ್ಲಿ ಸಾಕಷ್ಟು ಲೆಕ್ಕಾಚಾರ ಹಾಕುತ್ತಿದ್ದಾರೆ. ಅದಕ್ಕಾಗಿಯೇ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಈಗಾಗಲೇ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಪಕ್ಷ ಸಂಘಟನೆಯಲ್ಲೂ ತೊಡಗಿಕೊಂಡಿದ್ದಾರೆ.
ಕಾಂಗ್ರೆಸ್ನಲ್ಲಿ ವಡ್ನಾಳ್ ರಾಜಣ್ಣ ಕಣ್ಣಕ್ಕಿಳಿದರೆ ವಿರೂಪಾಕ್ಷಪ್ಪ ಕೂಡ ಕಣ್ಣಕ್ಕಿಳಿಯುವ ಲೆಕ್ಕಾಚಾರ ಹಾಕುತ್ತಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ನಲ್ಲಿ ವಡ್ನಾಳ್ ರಾಜಣ್ಣ ಅವರ ಸ್ಪರ್ಧೆ ಇನ್ನೂ ಖಚಿತವಾಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ವಡ್ನಾಳ್ ರಾಜಣ್ಣಗೆ ಟಿಕೆಟ್ ಫೈನಲ್ ಮಾಡದೇ ಹೊದರೆ ಅವರ ಸಹೋದರನ ಪುತ್ರ ವಡ್ನಾಳ್ ಅಶೋಕ್ ಅಥವಾ ವಡ್ನಾಳ್ ಜಗದೀಶ್‌ಗೆ ಕೊಡಿಸಲು ಪ್ರಯತ್ನಿಸಬಹುದು. ಜತೆಗೆ ದಾವಣಗೆರೆಯ ಉದ್ಯಮಿ ಶಿವಗಂಗಾ ಬಸವರಾಜ್ ಕಳೆದ ಮೂರು-ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಜೆಡಿಎಸ್ ಸ್ಥಳೀಯ ಪ್ರಭಾವಿ ನಾಯಕ ಹೊದಿಗೆರೆ ರಮೇಶ್ ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಮಹಿಮಾ ಪಟೇಲ್ ಸಹೋದರ ತೇಜಸ್ವಿ ಪಟೇಲ್ ಕೂಡ ರೇಸ್ನಲ್ಲಿದ್ದಾರೆ. ಎರಡೂ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ಬಿಜೆಪಿ ವರ್ಸಸ್ ಕಾಂಗ್ರೆಸ್ ಫೈಟ್ ಖಚಿತ.
ಪುತ್ರ ವ್ಯಾಮೋಹ ಕೈಕೊಡುತ್ತ?
ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಪುತ್ರ ವ್ಯಾಮೋಹ ಕೈ ಕೊಡತ್ತಾ ಎನ್ನುವ ಪ್ರಶ್ನೆಯೂ ಮೂಡಿದೆ. ಒಂದು ವೇಳೆ ಮಾಡಾಳ್ ವಿರೂಪಾಕ್ಷಪ್ಪ ಪುತ್ರನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟರೆ ಪಕ್ಷದ ಹಿರಿಯ ಕಾರ್ಯಕರ್ತರು ಒಪ್ಪಿಕೊಳ್ಳುತ್ತಾರೆಯೇ ಎಂಬ ಅನುಮಾನವೂ ಇದೆ. ಮಾಡಾಳ್ ಮಲ್ಲಿಕಾರ್ಜುನ್ಗೆ ಟಿಕೆಟ್ ಕೊಡುವುದಾದರೆ ಪಕ್ಷದ ಹಿರಿಯ ಕಾರ್ಯಕರ್ತರು, ಟಿಕೆಟ್ ವಂಚಿತರಿಗೆ ಟಿಕೆಟ್ ಕೊಡಿ ಎನ್ನುವ ಕೂಗು ಕೇಳಬಹದು. ಇವರು ಕುಟುಂಬ ರಾಜಕಾರಣ ಮಾಡುತ್ತಾರೆ ಎಂದು ಕ್ಷೇತ್ರದ ಜನ ಪರ್ಯಾಯ ನಾಯಕರನ್ನು ನೋಡಿಕೊಳ್ಳುವುದನ್ನು ತಳ್ಳಿ ಹಾಕುಂತಿಲ್ಲ.
೨೦೨೩ರಲ್ಲಿ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಮಾಡಾಳ್ ವಿರೂಪಾಕ್ಷಪ್ಪ, ಮಾಡಾಳ್ ಮಲ್ಲಿಕಾರ್ಜುನ್ (ಬಿಜೆಪಿ)
೨. ವಡ್ನಾಳ್ ರಾಜಣ್ಣ, ವಡ್ನಾಳ್ ಅಶೋಕ್, ವಡ್ನಾಳ್ ಜಗದೀಶ್, ಶಿವಗಂಗಾ ಬಸವರಾಜ್, ಹೊದಿಗೆರೆ ರಮೇಶ್, ತೇಜಸ್ವಿ ಪಟೇಲ್(ಕಾಂಗ್ರೆಸ್)
ಚುನಾವಣಾ ಇತಿಹಾಸ
ಮತದಾರರ ವಿವರ
ಇದನ್ನೂ ಓದಿ | ಎಲೆಕ್ಷನ್ ಹವಾ | ಮಾಯಕೊಂಡ | ಲಿಂಗಣ್ಣ ಬದಲಾದರೆ ತಮಗೊಂದು ಚಾನ್ಸ್ ಎನ್ನುತ್ತಿರುವ ಬಿಜೆಪಿಗರು