ದಾವಣಗೆರೆ: ಮತದಾರರಿಗೆ ಆಮಿಷ ಒಡ್ಡಿರುವ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಮೇಲೆ ದೂರು ದಾಖಲು
ಚುನಾವಣಾ ನೀತಿ ಸಂಹಿತೆಗೂ ಮುನ್ನವೇ ಈ ಪ್ರಕರಣ ದಾಖಲಾಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್. ಎಸ್.ಮಲ್ಲಿಕಾರ್ಜುನ್ ಮೇಲೆ ದೂರು ದಾಖಲಾಗಿದೆ. ಎಸ್.ಎಸ್ ಮತ್ತು ಎಸ್.ಎಸ್.ಎಂ ಅಭಿಮಾನಿ ಬಳಗದ ಹೆಸರಿನಲ್ಲಿ ಹಂಚುತ್ತಿದ್ದ ಗಿಫ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
7.19 ಲಕ್ಷ ರೂ. ಮೌಲ್ಯದ ದೋಸೆ ಹಂಚು ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಜನರಿಗೆ ಆಮಿಷ ತೋರಿಸಿ ಗಿಫ್ಟ್ ಹಂಚುತ್ತಿದ್ದ ಬಗ್ಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಎ1, ಎಸ್.ಎಸ್.ಮಲ್ಲಿಕಾರ್ಜುನ್ ಎ2 ಆರೋಪಿಗಳನ್ನಾಗಿಸಿ ದಾವಣಗೆರೆಯ ಕೆಟಿಜೆ ನಗರದ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲು ಮಾಡಲಾಗಿದೆ.
ಅನಧಿಕೃತ ಹಣ ಜಪ್ತಿ ಮಾಡಿದ ವಿಜಯನಗರ ಜಿಲ್ಲಾಡಳಿತ
ವಿಜಯನಗರ: ವಿಜಯನಗರ ಜಿಲ್ಲೆಯಲ್ಲಿ ಚುನಾವಣೆಗೆ ಮುನ್ನ ಅಕ್ರಮ ಹಣ, ಡ್ರಗ್ಸ್, ಅಕ್ರಮ ಬೆಳ್ಳಿ ಬಂಗಾರದ ಹವಾ ಜೋರಾಗಿದ್ದು, ಕೋಟಿ, ಕೋಟಿ ಅನಧಿಕೃತ ಹಣವನ್ನು ವಿಜಯನಗರ ಜಿಲ್ಲಾಡಳಿತ ಸೀಜ್ ಮಾಡಿದೆ.
ಚುನಾವಣೆ ನೀತಿ ಸಂಹಿತೆ ಜಾರಿ ಮುನ್ನವೇ ವಿಜಯನಗರ ಜಿಲ್ಲಾಡಳಿತದಿಂದ ಭರ್ಜರಿ ಬೇಟೆ ನಡೆದಿದೆ. 23 ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆದಿದೆ. ಕಳೆದ 15 ದಿನಗಳಲ್ಲಿ ಬರೋಬ್ಬರಿ 3 ಕೋಟಿ 44 ಲಕ್ಷ, 23 ಸಾವಿರ ರೂ ಮೌಲ್ಯದ ಅಕ್ರಮ ಹಣ, ವಸ್ತುಗಳು ಸೀಜ್ ಆಗಿವೆ. 3 ಕೋಟಿ 15 ಲಕ್ಷದ 5 ಸಾವಿರದ 200 ರೂ. ಅಕ್ರಮ ಹಣ, 40 ಸಾವಿರ ಮೌಲ್ಯದ ಅಕ್ರಮ ಮದ್ಯ, 32,0940 ಮೌಲ್ಯದ ಡ್ರಗ್ಸ್, 35 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಬೆಳ್ಳಿ- ಬಂಗಾರ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Karnataka Budget 2023: ಬಡವರು, ಯುವಕರು, ಮಹಿಳೆಯರು, ಕಾರ್ಮಿಕರಿಗೆ ನೆರವು ನೀಡದ ಬಜೆಟ್: ಶಾಮನೂರು ಶಿವಶಂಕರಪ್ಪ