Site icon Vistara News

ಕ್ಷುಲ್ಲಕ ಕಾರಣಕ್ಕೆ ಜಗಳ, ಯುವಕನಿಗೆ ಚೂರಿ ಇರಿತ

knife attack

ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಭಿನ್ನ ಕೋಮಿನ ಯುವಕರಿಬ್ಬರ ನಡುವೆ ಜಗಳವಾಗಿದ್ದು, ಒಬ್ಬ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮಹಮ್ಮದ್ ಇರ್ಫಾನ್ (24) ಚಾಕು ಇರಿತಕ್ಕೆ ಒಳಗಾದ ಯುವಕ. ಅಭಿಷೇಕ್ ಎನ್ನುವ ಯುವಕ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಮಲೆಬೆನ್ನೂರಿನ ಸಾಯಿ ಬೇಕರಿ ಬಳಿ ಘಟ‌ನೆ ನಡೆದಿದ್ದು, ಚಾಕುವಿನಿಂದ ಹಲ್ಲೆಗೊಳಗಾದ ಯುವಕ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆಯ ಹಿನ್ನೆಲೆಯಲ್ಲಿ ಮಲೆಬೆನ್ನೂರು, ಹರಿಹರದಲ್ಲಿ ಪೊಲೀಸ್ ಭಿಗಿ ಭದ್ರತೆ ಮಾಡಲಾಗಿದ್ದು, ಎಸ್‌ಪಿ ಸಿಬಿ ರಿಷ್ಯಂತ್ ಜಿಲ್ಲಾಸ್ಪತ್ರೆಗೆ ಆಗಮಿಸಿ ಹಲ್ಲೆಗೊಳಗಾದ ಯುವಕ ಹಾಗೂ ಸಂಬಂಧಿಕರಿಂದ ಮಾಹಿತಿ ಪಡೆದಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಏನಾದರೂ ಸುಳ್ಳು ಮಾಹಿತಿ ಹರಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ | Kannada Flag | ಕನ್ನಡ ಬಾವುಟ ಪ್ರಕರಣಕ್ಕೆ ಜಾತಿ ಬಣ್ಣ; ಹಲ್ಲೆ ಮಾಡಿದ ವಿದ್ಯಾರ್ಥಿ ಪರ ನಿಂತ ದಲಿತ ಸಂಘಟನೆಗಳು

Exit mobile version