Site icon Vistara News

Life Threat: ಚಿಂತಕರಿಗೆ ಬೆದರಿಕೆ ಹಾಕಿದ ಶಿವಾಜಿ ರಾವ್ ಬೆಳಗ್ಗೆ 4 ಗಂಟೆಗೆ ಎದ್ದು ಭಗವದ್ಗೀತೆ ಓದ್ತಿದ್ದ!

Shivaji Rao jadhav at davanagere

ದಾವಣಗೆರೆ: ʻʻನಮ್ಮ ತಮ್ಮ ಒಬ್ಬ ಹಿಂದೂವಾದಿಯಾಗಿದ್ದ. ರಾಷ್ಟ್ರೀಯವಾದಿಯಾಗಿದ್ದ (Hinduvadi and Nationalist). ಹಿಂದುತ್ವದ ವಿಚಾರಗಳಲ್ಲಿ ಹೆಚ್ಚಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದದ್ದು ಹೌದು. ಆದರೆ, ಈ ರೀತಿಯಾಗಿ ಬೆದರಿಕೆ ಹಾಕಿದ್ದಾನೆ (Threatening letter) ಎಂದರೆ ನಂಬಲಾಗುತ್ತಿಲ್ಲʼʼ ಎಂದು ಸಾಹಿತಿಗಳು ಮತ್ತು ಎಡಪಂಥೀಯರಿಗೆ ಬೆದರಿಕೆ ಪತ್ರ (Threatening to leftists and writers) ಹಾಕಿದ ಮತ್ತು ಕರೆ ಮಾಡಿದ (life threat) ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಶಿವಾಜಿ ರಾವ್‌ ಜಾಧವ್‌ (Shivaji Rao Jadhav arrested) ಸಹೋದರ ಗುರುರಾಜ್‌ ಹೇಳಿದ್ದಾರೆ.

ಬಂಧಿತ ಶಿವಾಜಿ ರಾವ್‌ ದಾವಣಗೆರೆ ಮೂಲದವನಾಗಿದ್ದು, ದಾವಣಗೆರೆಯ EWS ಕಾಲೋನಿಯಲ್ಲಿ ಆತನ ಕುಟುಂಬ ವಾಸಿಸುತ್ತಿದೆ. ಶಿವಾಜಿ ರಾವ್‌ಗೆ ಸೋದರ ಮತ್ತು ತಾಯಿ ಇದ್ದಾರೆ. ಅವರಿಬ್ಬರೂ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನೋಡಿ ಆತಂಕಿತರಾಗಿದ್ದಾರೆ.

ʻʻಶಿವಾಜಿ ರಾವ್‌ ಸುಮಾರು ವರ್ಷಗಳಿಂದ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನು ಸೂಕ್ಷ್ಮ ಸ್ವಭಾವದ ವ್ಯಕ್ತಿಯಾಗಿದ್ದ. ಬೆಳಗ್ಗೆ 4 ಗಂಟೆಗೆ ಎದ್ದು ಭಗವದ್ಗೀತೆ ಓದುತ್ತಿದ್ದ. ಯಾರ ತಂಟೆಗೂ ಹೋಗುತ್ತಿರಲಿಲ್ಲʼʼ ಎಂದು ಗುರುರಾಜ್‌ ಹೇಳಿದ್ದಾರೆ.

ʻʻಅವನಿಗೆ ಹಿಂದುತ್ವದಲ್ಲಿ ಅತೀವ ನಂಬಿಕೆ ಇತ್ತು. ರಾಷ್ಟ್ರೀಯತೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ. ಧಾರ್ಮಿಕ ವಿಚಾರದಲ್ಲಿ ಮಾತನಾಡಿದವರಿಗೆ ಆ ರೀತಿ ಮಾತನಾಡಬೇಡಿ ಎಂದು ಮನವಿ ಮಾಡಿಕೊಂಡಿರಬೇಕು. ಜೀವ ಬೆದರಿಕೆ ಹಾಕುವ ಮಟ್ಟಿಗೆ ಹೋಗುವಂತ ಮನೋಭಾವ ಆತನಿಗಿಲ್ಲ. ಆತ ಯಾರಿಗೂ ಕೂಡ ಬೆದರಿಕೆ ಹಾಕುವಂತ ವ್ಯಕ್ತಿಯಲ್ಲʼʼ ಎಂದು ಗುರುರಾಜ್‌ ಹೇಳಿದ್ದಾರೆ.

ಕಣ್ಣೀರು ಹಾಕುತ್ತಿರುವ ಶಿವಾಜಿ ರಾವ್‌ ತಾಯಿ

ʻʻಮಾಧ್ಯಮದಲ್ಲಿ ಬರುವುದು ನೋಡಿ ನಮಗೆ ಭಯ ಆಗ್ತಿದೆ. ನಮ್ಮ ತಮ್ಮನ ನ್ಯೂಸ್ ಬರೋದನ್ನ ನೋಡಿ ನಮ್ಮ ತಾಯಿ ಕಣ್ಣೀರು ಹಾಕುತ್ತಿದ್ದಾರೆʼʼ ಎಂದು ಗುರುರಾಜ್‌ ಹೇಳಿದ್ದಾರೆ.

ʻʻಆತ ಕುಟುಂಬದ ಜೊತೆ ಬೆರೆಯುವುದು ಕಡಿಮೆ. ಆತನಿಗೆ ಇನ್ನೂ ಮದುವೆ ಆಗಿಲ್ಲʼʼ ಎಂದು ಹೇಳಿರುವ ಗುರುರಾಜ್‌, ʻʻಜನರಿಗೆ ನಿಸ್ವಾರ್ಥ ಸೇವೆ ಮಾಡುತ್ತಿದ್ದ, ಯಾವಾಗಲೂ ಒಳ್ಳೆಯದನ್ನೇ ಬಯಸುತ್ತಿದ್ದ. ಸೂಕ್ಷ್ಮ ವ್ಯಕ್ತಿತ್ವ ಹೊಂದಿರುವ ನನ್ನ ತಮ್ಮ ಈ ತರಹ ಮಾಡಿದ್ದಾನೆ ಅಂದ್ರೆ ನಂಗೆ ನಂಬಲಿಕ್ಕೇ ಆಗುತ್ತಿಲ್ಲʼʼ ಎಂದು ದಾವಣಗೆರೆಯಲ್ಲಿ ಶಿವಾಜಿರಾವ್ ಜಾಧವ್ ಅಣ್ಣ ಗುರು ರಾಘವೇಂದ್ರ ಹೇಳಿದ್ದಾರೆ.

Shivaji Raos house at Davanagere

ದಾವಣಗೆರೆಯ ಮನೆಯಲ್ಲಿ ಮಹಜರ್‌: ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದ ಆರೋಪಿ ಶಿವಾಜಿ ರಾವ್‌ ಜಾಧವ್‌ನನ್ನು ಸಿಸಿಬಿ ಪೊಲೀಸರು ಈಗ ದಾವಣಗೆರೆಯ ಮನೆಗೆ ಕರೆತಂದು ಮಹಜರು ನಡೆಸಿದ್ದಾರೆ.

ಯಾರು ಬರೆಸುತ್ತಿದ್ದಾರೆ ಎಂದು ತನಿಖೆ

ಈ ನಡುವೆ, ಈ ಪತ್ರಗಳನ್ನು ಶಿವಾಜಿ ರಾವ್‌ ಜಾಧವ್‌ ಒಬ್ಬನೇ ಬರೆಯುತ್ತಿದ್ದನಾ? ಅವನಿಂದ ಯಾರಾದರೂ ಬರೆಸುತ್ತಿದ್ದರಾ? ಯಾರದಾದರೂ ಕೈವಾಡವಿದೆಯಾ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದು ತುಮಕೂರಿನಲ್ಲಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿದ್ದಾರೆ.

ʻʻಸಾಹಿತಿಗಳು ತಮಗೆ ಬೆದರಿಕೆ ಕರೆ ಬರುವ ಕುರಿತು ನನ್ನ ಬಳಿ ಹೇಳಿಕೊಂಡದ್ದರು. ಸಾಹಿತಿಗಳ ಅಹವಾಲು ನಾನು ಕೇಳಿದ್ದೆ. ಸಿಎಂಗೂ ಭೇಟಿ ಮಾಡಿ‌ ಸಾಹಿತಿಗಳು ಬೆದರಿಕೆ ಕರೆ ಬಗೆ ಹೇಳಿದ್ದರು. ನಾವು ಆ ಪ್ರಕರಣವನ್ನು ಸಿಸಿಬಿಗೆ ವಹಿಸಿದ್ದೆವು. ಸಿಸಿಬಿ ಪೊಲೀಸರು ದಾವಣಗೆರೆ ಮೂಲದವರನ್ನು ಬಂಧಿಸಿದ್ದಾರೆ. ಆತನ ಹಿಂದೆ ಯಾರಿದ್ದಾರೆ? ಯಾರು ಬರೆಸ್ತಾ ಇದ್ದಾರೆ ಅನ್ನೋದು ತನಿಖೆ ಆಗುತ್ತದೆʼʼ ಎಂದ ಪರಮೇಶ್ವರ್‌ ಅವರು, ಯಾವ ಸರ್ಕಾರ ಇದ್ದರೂ ಕೂಡ ಅವರು ಬೆದರಿಕೆ ಹಾಕುತ್ತಾರೆ ಎಂದರು.

ಏನಿದು ಬೆದರಿಕೆ ಪ್ರಕರಣ?

ಸಾಹಿತಿಗಳಿಗೆ ಮತ್ತು ಎಡಪಂಥೀಯರಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ವಿವಿಧ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು. ಸಂಜಯನಗರ, ಕೊಟ್ಟೂರು, ಚಿತ್ರದುರ್ಗ, ಹಾರೋಹಳ್ಳಿ -2 ಎಫ್ಐಆರ್, ಬಸವೇಶ್ವರ ನಗರ -2 ಎಫ್ಐಆರ್ ದಾಖಲಾಗಿದ್ದವು. ಕೊಟ್ಟೂರು ಠಾಣೆಯಲ್ಲಿ ಸಾಹಿತಿ ಕುಂ.ವೀರಭಧ್ರಪ್ಪ ಪ್ರಕರಣ ದಾಖಲಿಸಿದ್ದರು. ಚಿತ್ರದುರ್ಗದಲ್ಲಿ ಸಾಹಿತಿ ಬಿಎಲ್ ವೇಣು, ಹಾರೋಹಳ್ಳಿ ಠಾಣೆಯಲ್ಲಿ ಬಂಜಗೆರೆ ಜಯಪ್ರಕಾಶ್, ಸಂಜಯನಗರ ಠಾಣೆಯಲ್ಲಿ ಬಿ.ಟಿ. ಲಲಿತಾ ನಾಯ್ಕ್, ಬಸವೇಶ್ವರ ನಗರ ಠಾಣೆಯಲ್ಲಿ ವಸುಂಧರಾ ಭೂಪತಿ ಪ್ರಕರಣ ದಾಖಲು ಮಾಡಿದ್ದರು.

Exit mobile version