ದಾವಣಗೆರೆ: ಲೋಕಾಯುಕ್ತ ದಾಳಿಯಾದ (Lokayukta Raid) ನಂತರದಲ್ಲಿ ನಾನು ಎಲ್ಲಿಯೂ ಹೋಗಿಲ್ಲ, ಮಾಡಾಳುವಿನ ಮನೆಯಲ್ಲೇ ಇದ್ದೆ ಎಂದಿರುವ ಬಿಜೆಪಿ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ತಮ್ಮದು ಯಾವುದೇ ತಪ್ಪಿಲ್ಲ ಎಂದಿದ್ದಾರೆ. ಚನ್ನೇಶಪುರ ಗ್ರಾಮದ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ವಿರೂಪಾಕ್ಷಪ್ಪ ಮಾತನಾಡಿದ್ದಾರೆ.
ನನ್ನ ಮೇಲಿನ ಆರೋಪ ನಿರಾಧಾರ, ಸತ್ಯಕ್ಕೆ ದೂರವಾದ ವಿಚಾರ. 40 ಲಕ್ಷ ರೂ. ಸಿಕ್ಕಿರೋದು ಯಾವುದು ಅಂತ ಮಾಹಿತಿ ಇಲ್ಲ. ನನಗೆ ಮಾಹಿತಿ ಬಂದಿಲ್ಲ,. ಇಷ್ಟು ದಿನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಮನೆಯಲ್ಲೇ ಇದ್ದೆ. ದೂರುದಾರ ನನಗೆ ಗೊತ್ತಿಲ್ಲ ಎಂದರು.
ಲೋಕಾಯುಕ್ತ ಸಂಸ್ಥೆ ಬಗ್ಗೆ ನನಗೆ ಗೌರವವಿದೆ. ಭ್ರಷ್ಟಾಚಾರವನ್ನು ಕಿತ್ತೊಗೆಯಲು ಕೆಲಸ ಮಾಡುತ್ತಿದೆ. ಆ ಸಂಸ್ಥೆ ಕೇಳುವ ಯಾವುದೇ ಮಾಹಿತಿಯನ್ನು ನಾನು ಹಂಚಿಕೊಳ್ಳುತ್ತೇನೆ. ಪಕ್ಷ ನನ್ನನ್ನು ಉಚ್ಛಟನೆ ಮಾಡಿಲ್ಲ ಎಂದ ವಿರೂಪಾಕ್ಷಪ್ಪ, ಪಕ್ಷದ ತೀರ್ಮಾನಕ್ಕೆ ಬದ್ಧ. ನಾನು ಸಜ್ಜನ ರಾಜಕಾರಣಿ. ವಾಸ್ತವಾಂಶದ ಬಗ್ಗೆ ಬಿತ್ತರಿಸಿ ಎಂದರು. ಯಡಿಯೂರಪ್ಪ ಕ್ರಮ ಕೈಗೊಳ್ಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ವಿರೂಪಾಕ್ಷಪ್ಪ, ಯಡಿಯೂರಪ್ಪ ಹೇಳಿಕೆ ತಪ್ಪೇನು ಇಲ್ಲ. ಮಾಡಾಳು ಮನೆಯಲ್ಲಿ ಇದ್ದೆ, ನಾನು ಎಲ್ಲೂ ಹೋಗಿರಲಿಲ್ಲ. ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಮಾಡ್ಲಿ.
ಇದನ್ನೂ ಓದಿ: Lokayukta Raid : ತಲೆಮರೆಸಿಕೊಂಡಿದ್ದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಸಿಕ್ಕಿತು ಮಧ್ಯಂತರ ಜಾಮೀನು
ಸಂಸದ ಜಿಎಂ ಸಿದ್ದೇಶ್ವರ್ ಉಪ್ಪು ತಿಂದು ನೀರು ಕುಡಿದಿದ್ದಾರೆ. ಅವರ ತಮ್ಮ ಮೈನಿಂಗ್ ವಿಚಾರದಲ್ಲಿ ಜೈಲಿಗೆ ಹೋಗಿದ್ರು. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಪಕ್ಷ ಮುಖ್ಯ.
ನಮ್ಮ ತಾಲೂಕಿನಲ್ಲಿ ಮನೆ ಮನೆಗಳಲ್ಲಿ 2-3 ಕೋಟಿ ಇಟ್ಕೊಂಡಿದ್ದಾರೆ. ನಾನು ಬಿಸಿನೆಸ್‌ಮ್ಯಾನ್. 125 ಎಕರೆ ಅಡಕೆ ತೋಟ, ಪಾನ್ ಮಸಾಲ ಕಂಪನಿ, ಕ್ರಷನ್ ಇದೆ.