Site icon Vistara News

Moral Policing : ಮುಸ್ಲಿಂ ಯುವತಿಗೆ ಡ್ರಾಪ್‌ ಕೊಟ್ಟ ಹಿಂದು ಯುವಕನಿಗೆ ಯದ್ವಾತದ್ವಾ ಹಲ್ಲೆ

Davanagere attack Moral policing

ದಾವಣಗೆರೆ: ಮುಸ್ಲಿಂ ಯುವತಿಯೊಬ್ಬಳನ್ನು ‌(Muslim Girl) ಡ್ರಾಪ್‌ ಮಾಡಿದ ಎಂಬ ಕಾರಣಕ್ಕೆ ಹಿಂದು ಯುವಕನೊಬ್ಬನ (Hindu Youth) ಮೇಲೆ ಕೆಲವು ಮುಸ್ಲಿಮರು ಸೇರಿ ಯದ್ವಾತದ್ವಾ ಹಲ್ಲೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಈ ನೈತಿಕ ಪೊಲೀಸ್ ಗಿರಿಯ (Moral Policing) ವಿಡಿಯೊ ಕೂಡಾ ಲಭ್ಯವಾಗಿದೆ. ಅಷ್ಟು ಮಾತ್ರವಲ್ಲ, ಹಿಂದೂ ಯುವಕನ‌‌ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲ, ಆತನ ವಿರುದ್ಧ ನಕಲಿ ಪೋಕ್ಸೊ ಕೇಸ್‌ (Pocso Case) ಕೂಡಾ ದಾಖಲಿಸಲಾಗಿದೆ.

ಶುಕ್ರವಾರ ಸಂಜೆ ದಾವಣಗೆರೆಯ ಎಸ್ಪಿ ಕಚೇರಿ ಸಮೀಪದ ಆರ್.ಟಿ.ಒ ಸರ್ಕಲ್ ಬಳಿ ಈ ಹಲ್ಲೆ ನಡೆದಿದೆ. ಜಾಲಿ ನಗರದ ನಿವಾಸಿ ಶ್ರೀನಿವಾಸ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಈತ ಪರಿಚಯಸ್ಥ ಮುಸ್ಲಿಂ ಯುವತಿಗೆ ಡ್ರಾಪ್ ಕೊಟ್ಟದ್ದಕ್ಕೆ ಈ ಹಲ್ಲೆ ನಡೆದಿತ್ತು.

ನಿಜವೆಂದರೆ ಯುವತಿ ಮತ್ತು ಯುವಕರು ಪರಿಚಿತರೇ ಆಗಿದ್ದಾರೆ. ಆಕೆಯೇ ಸ್ವತಃ ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಇದನ್ನು ಹಲ್ಲೆಯ ವೇಳೆ ಆಕೆಯೇ ಬಾಯಿ ಬಿಟ್ಟು ಹೇಳಿದ್ದಳು. ನೋಟ್ಸ್ ಜೆರಾಕ್ಸ್ ಮಾಡಿಸಲು‌‌ ನಾನೇ ಡ್ರಾಪ್‌‌ ಕೇಳಿದ್ದೆ ಎಂದು ಹೇಳಿದ ಆಕೆ ಹೊಡೆಯಬೇಡಿ ಎಂದು ಪರಿಪರಿಯಾಗಿ ಮನವಿ ಮಾಡಿದ್ದಳು. ಆದರೆ, ಈ ದುಷ್ಟರು ಆಕೆಯ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

ನಡು ರಸ್ತೆಯಲ್ಲೇ‌ ಬೈಕ್ ತಡೆದು ಹಲ್ಲೆ ನಡೆಸಿದ ಮುಸ್ಲಿಂ ಯುವಕತು, ಖಾಸಗಿ ಶಾದಿ ಮಹಲ್ ಗೂ ಕರೆದೊಯ್ದು ರಾತ್ರಿಯಿಡೀ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶ್ರೀನಿವಾಸ್‌ ನನ್ನು ನಿರ್ಜನ ಪ್ರದೇಶದಲ್ಲಿ ಬಿಸಾಕಿ ಹೋಗಿದ್ದರು.

ಈ ನಡುವೆ, ತಡರಾತ್ರಿ 2.30ಕ್ಕೆ ಮಹಿಳಾ ಠಾಣೆಗೆ ಹೋದ ದುಷ್ಕರ್ಮಿಗಳು ಹಲ್ಲೆಗೊಳಗಾದ ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಯುವತಿಯ ತಾಯಿಯನ್ನು ಮನವೊಲಿಸಿದ ತಂಡ, ಮಗಳ ಮೇಲೆ ಆತ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ದೂರು ಕೊಡಿಸಿದ್ದರು. ಯುವತಿ 18ರ ಕೆಳಹರೆಯದವಳಾಗಿರುವುದರಿಂದ ಪೋಕ್ಸೋ ಪ್ರಕರಣ ದಾಖಲಾಗಿದೆ. ಗಂಭೀರ ಗಾಯಗೊಂಡ ಶ್ರೀನಿವಾಸ್‌ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : Assault Case: ಪ್ರೀತಿಸಿದವಳ ಜತೆಗೆ ಓಡಿಹೋದ ಯುವಕ; ತಾಯಿಯನ್ನೇ ಬೆತ್ತಲೆಗೊಳಿಸಿದ ಕ್ರೂರಿಗಳು!

ಅಗ್ನಿ ಅವಘಡ: 10ನೇ‌ ತರಗತಿ ವಿದ್ಯಾರ್ಥಿನಿ ಸಾವು

ಮೊಂಬತ್ತಿ ಬೆಳಕಿನಲ್ಲಿ ಸ್ಕೂಟರ್‌ಗೆ ಪೆಟ್ರೋಲ್ ಹಾಕುವ ವೇಳೆ ಅಗ್ನಿ ಅವಘಡ ಸಂಭವಿಸಿ ಸೌಂದರ್ಯ(16) ಎಂಬ ಬಾಲಕಿ ದಾರುಣವಾಗಿ ಮೃತಪಟ್ಟಿದ್ದಾಳೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಡೆಯೂರು ಬಳಿಯ ಕಟ್ಟಿಗೇಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಸೌಂದರ್ಯ ಶುಕ್ರವಾರ ರಾತ್ರಿ ವಿದ್ಯುತ್ ಇಲ್ಲದ ವೇಳೆಯಲ್ಲಿ ಮೊಂಬತ್ತಿ ಬೆಳಕಿನಲ್ಲಿ ಸ್ಕೂಟರ್‌ಗೆ ಪೆಟ್ರೋಲ್ ಹಾಕುತ್ತಿದ್ದಳು. ಒಮ್ಮೆಗೇ ವಿದ್ಯುತ್‌ ಬಂದಾಗ ಸೌಂದರ್ಯ ಗಾಬರಿಗೊಂಡಂತಾಗಿ ಪೆಟ್ರೋಲ್ ಬಾಟಲಿಯನ್ನು ಕೆಳಗೆ ಬಿಟ್ಟಿದ್ದರು. ಈ ವೇಳೆ ಮೊಂಬತ್ತಿ ಕಿಡಿಗೆ ಬೆಂಕಿ ಹತ್ತಿಕೊಂಡು ಸೌಂದರ್ಯಗೆ ಗಂಭೀರ ಗಾಯವಾಗಿದೆ.

ಗಾಯಗೊಂಡಿದ್ದ ಸೌಂದರ್ಯಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಈಗ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version