Site icon Vistara News

RTI activist death: ದಾವಣಗೆರೆ ಆರ್‌ಟಿಐ ಕಾರ್ಯಕರ್ತನ ಸಾವು ಸಿಐಡಿ ತನಿಖೆಗೆ

RTI Activist Harish Halli Died

ದಾವಣಗೆರೆ: ಕೋಟ್ಯಂತರ ರೂಪಾಯಿ ಭೂ ಅಕ್ರಮದ ಆರೋಪಿಯಾಗಿದ್ದ, ಆರ್‌ಟಿಐ ಕಾರ್ಯಕರ್ತ ಹರೀಶ್​ ಹಳ್ಳಿ (Harish Halli) ಎಂಬಾತ ಪೊಲೀಸ್ ಕಾರಿನಿಂದ (Police Vehicle)ನಿಂದ ಜಿಗಿದು ಮೃತಪಟ್ಟ (RTI activist death) ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

ಪೊಲೀಸ್ ವಶದಲ್ಲಿದ್ದ ಆರೋಪಿ ಸಾವಿಗೀಡಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಭಾನುವಾರ ಬೆಳಗಿನ ಜಾವ ಆರ್‌ಟಿಐ ಕಾರ್ಯಕರ್ತ ಹರೀಶ್‌ ಹಳ್ಳಿಯನ್ನು ಬಂಧಿಸಿ ಪೊಲೀಸರು ಠಾಣೆಗೆ ಕರೆತರುತ್ತಿದ್ದರು. ಈ ಸಂದರ್ಭದಲ್ಲಿ ಆತ ಕಾರಿನಿಂದ ಜಿಗಿದು ಪ್ಲೈಒವರ್ ಮೇಲಿಂದ ಕೆಳಗೆ ಹಾರಿ ಸಾವನ್ನಪ್ಪಿದ್ದ ಎಂದು ಪೊಲೀಸರು ಹೇಳಿದ್ದರು.

ಹರೀಶ್ ಹಳ್ಳಿ ಆರ್​ಟಿಐ ಕಾರ್ಯಕರ್ತನಾಗಿದ್ದು, ಒಟ್ಟು 2 ಕೋಟಿ ರೂ.ಬೆಲೆಯ ಮೂರು ನಿವೇಶನಗಳನ್ನು ಅಕ್ರಮವಾಗಿ ನೋಂದಣಿ ಮಾಡಿಸಿಕೊಂಡ ಆರೋಪ ಎದುರಿಸುತ್ತಿದ್ದ. ಈ ಭೂ ಅಕ್ರಮ ಕೇಸ್​​ನಡಿ ಹರೀಶ್ ಹಳ್ಳಿ, ಸಬ್​ ರಿಜಿಸ್ಟ್ರಾರ್ ಆರ್.ಎಲ್.ವೀಣಾ ಸೇರಿ ಒಟ್ಟು ಐವರ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಈತ ಸೈಟ್​ನ್ನು ತನ್ನದಾಗಿಸಿಕೊಳ್ಳಲು ನಕಲಿ ಮಾಲೀಕರನ್ನೇ ಸೃಷ್ಟಿಸಿದ್ದ. ನಕಲಿ ಆಧಾರ್​ ಕಾರ್ಡ್​ ಮಾಡಿಸಿಕೊಂಡಿದ್ದ ಎಂದೂ ಪೊಲೀಸರು ಹೇಳಿದ್ದಾರೆ.

ಭೂ ಅಕ್ರಮದ ಕೇಸ್​​ನಲ್ಲಿ ಎ 1 ಆರೋಪಿಯಾದ ಹರೀಶ್​ನನ್ನು ಮೇ 27ರ ಮಧ್ಯರಾತ್ರಿ 12 ಗಂಟೆ ಹೊತ್ತಿಗೆ ಪೊಲೀಸರು ಬಂಧಿಸಿ, ವಿಚಾರಣೆಗೆಂದು ಕರೆದುಕೊಂಡು ಬರುವಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಫ್ಲೈಓವರ್​ ಮೇಲೆ ಪೋಲೀಸ್ ವಾಹನ ಹೋಗುತ್ತಿದ್ದಾಗ ಈತ ಜಿಗಿದಿದ್ದಾನೆ. ತೀವ್ರವಾಗಿ ಪೆಟ್ಟು ಬಿದ್ದು ಗಾಯಗೊಂಡಿದ್ದ ಅವನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆದರೆ ಆತನ ಪತ್ನಿ ಕಿಡಿಕಾರಿದ್ದಾರೆ. ನನ್ನ ಪತಿಯನ್ನು ಪೊಲೀಸರು ಮಧ್ಯರಾತ್ರಿ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಹರೀಶ್​ ಹಳ್ಳಿಯನ್ನು ಕರೆದುಕೊಂಡು ಹೋದ ಗಾಂಧಿನಗರ ಪೊಲೀಸ್​ ಠಾಣೆ ಪಿಎಸ್​ಐ ಮತ್ತು ಚಾಲಕನ ವಿರುದ್ಧ ದೂರು ನೀಡಿದ್ದಾರೆ. ದೂರಿನ ಅಧಾರದ ಮೇಲೆ ಪಿಎಸ್‌ಐ ಹಾಗೂ ಒಬ್ಬ ಕಾನ್‌ಸ್ಟೇಬಲ್ ಸಸ್ಪೆಂಡ್ ಮಾಡಲಾಗಿತ್ತು. ಸಸ್ಪೆಂಡ್ ಆದೇಶವನ್ನು ಎಸ್‌ಪಿ ಡಾ. ಅರುಣ್ ಹೊರಡಿಸಿದ್ದರು. ಸಿಐಡಿ ತನಿಖೆಗೆ ವಹಿಸಿದ ಹಿನ್ನೆಲೆಯಲ್ಲಿ ಸಿಐಡಿ ಡಿಸಿಪಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟ ಆರ್​ಟಿಐ ಕಾರ್ಯಕರ್ತ

Exit mobile version