ದಾವಣಗೆರೆ: ಈಗಾಗಲೆ ಸಾವರ್ಕರ್ ಫ್ಲೆಕ್ಸ್ ಹಾಗೂ ಗಣೇಶೋತ್ಸವ ವಿವಾದ ಚರ್ಚೆ ಆಗುತ್ತಿರುವಂತೆಯೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಾಸಕ ಯು.ಟಿ. ಖಾದರ್, ಜೈಲಿನಿಂದ ಬಿಡುಗಡೆಗಾಗಿ ಬ್ರಿಟಿಷರ ಬಳಿ ಸಾವರ್ಕರ್ ಭಿಕ್ಷೆ ಬೇಡಿದ್ದರು ಎಂದು ತಿಳಿಸಿದ್ದಾರೆ.
ಸಾವರ್ಕರ್ ಸ್ವಾತಂತ್ರ್ಯ ಹೋರಾಟಕ್ಕಾಗಿ ಅಂಡಮಾನ್ ಜೈಲಿಗೆ ಹೋದರು ನಿಜ. ಆದರೆ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಹುತಾತ್ಮರಾದವರಾ? ಅವರು ತಮ್ಮ ಬಿಡುಗಡೆಗೆ ಬ್ರಿಟಿಷ್ ಸರ್ಕಾರಕ್ಕೆ 10 ಪತ್ರ ಬರದಿದ್ದಾರೆ. ಬಿಡುಗಡೆಗಾಗಿ ಬ್ರಿಟಿಷರ ಬಳಿ ಪತ್ರ ಬರೆದು ಭಿಕ್ಷೆ ಬೇಡಿದ್ದರು.
ಅವರ ಜತೆ ಬೇರೆಯವರು ಕೂಡ ಅಂಡಮಾನ್ ಜೈಲಿನಲ್ಲಿದ್ದರು. ಅವರು ಬ್ರಿಟಿಷರ ಗುಂಡಿಗೆ ಬಲಿಯಾದರು, ಪೊಲೀಸರ ಗುಂಡಿಗೆ ಬಲಿಯಾದರು. ಆದರೆ ಸಾವರ್ಕರ್ ಹುತಾತ್ಮರಾ? ಬಿಡುಗಡೆಗೆ ಭಿಕ್ಷೆ ಬೇಡಿದವರು ಹುತಾತ್ಮರ? ಎಂದು ಪ್ರಶ್ನಿಸಿದ್ದಾರೆ.
ಶಿವಮೊಗ್ಗದಲ್ಲಿ ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಿದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಯಾರು ಫ್ಲೆಕ್ಸ್ ಹರಿದು ಹಾಕಿದರೂ ಅದು ತಪ್ಪು. ಆ ರೀತಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ ಎಂದರು.
ಸಿದ್ದರಾಮಯ್ಯ ಕೊಡಗು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಕರೆ ಕೊಟ್ಟ ಕುರಿತು ಪ್ರತಿಕ್ರಿಯಿಸಿ, ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮಾಡುವುದು ಸಹಜ. ಸರ್ಕಾರ ಪೊಲೀಸ್ ಇಲಾಖೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಅದನ್ನು ಬಿಡುಗಡೆಗೊಳಿಸಲು ಹೋರಾಟ ಮಾಡುತಿದ್ದೇವೆ. ಕೊಡಗಿನ ಜನ ಭಯ ಪಡುವ ಅಗತ್ಯವಿಲ್ಲ ಎಂದರು.
ಇದನ್ನೂ ಓದಿ | Savarkar Photo | ಸಾವರ್ಕರ್ ಗಣೇಶೋತ್ಸವ: ರಾಜ್ಯದೆಲ್ಲೆಡೆ ಹಬ್ಬುತ್ತಿದೆ ಕಾವು