ದಾವಣಗೆರೆ: ಆಕೆ ಕೇವಲ 13 ವರ್ಷದ ಹುಡುಗಿ (13 year old Girl). ಸಣ್ಣ ವಯಸ್ಸಿನಲ್ಲೇ ಕುಸ್ತಿಪಟುವಾಗಿ (Wrestler) ಗಮನ ಸೆಳೆದ ಆಕೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾಳೆ. ಆದರೆ ಇದ್ದಕ್ಕಿದ್ದಂತೆಯೇ ಏನಾಯಿತೋ ಗೊತ್ತಿಲ್ಲ. ಆಕೆ ಈಗ ನೇಣು ಬಿಗಿದುಕೊಂಡು ಶವವಾಗಿದ್ದಾಳೆ (Self Harming). ಆಕೆ ಗರಡಿ ಮನೆಯಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ.
ದಾವಣಗೆರೆ ಜಿಲ್ಲೆಯ (Davanagere) ಹರಿಹರ ಪಟ್ಟಣದ ನಿವಾಸಿಯಾಗಿರುವ ಕಾವ್ಯಾ ಪೂಜಾರ್ (13) ಅತ್ಮಹತ್ಯೆಗೆ ಶರಣಾದ ಬಾಲಕಿ. ಆಕೆ ಹರಿಹರದ ಶಿಬಾರ ಸರ್ಕಲ್ ಬಳಿ ಇರುವ ಗರಡಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಧಾರವಾಡ ಕುಸ್ತಿ ಹಾಸ್ಟೆಲ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾವ್ಯಾ ಎರಡು ದಿನಗಳ ಹಿಂದೆ ಹರಿಹರದ ಮನೆಗೆ ಬಂದಿದ್ದಳು. ಬೆಳಗ್ಗೆ ಎದ್ದು ಗರಡಿ ಮನೆಗೆ ತರಬೇತಿಗೆ ಹೋಗಿದ್ದ ಆಕೆ ಅಲ್ಲೇ ನೇಣು ಬಿಗಿದುಕೊಂಡು ಬದುಕನ್ನು ಅಂತ್ಯ ಮಾಡಿಕೊಂಡಿದ್ದಾಳೆ.
ಇಷ್ಟು ಸಣ್ಣ ವಯಸ್ಸಲ್ಲೇ ದೊಡ್ಡ ಸಾಧನೆ ಮಾಡಿದ ಆಕೆ ಯಾವ ಕಾರಣಕ್ಕೆ ಅತ್ಮಹತ್ಯೆ ಮಾಡಿಕೊಂಡಿದ್ದಾಳೆಎನ್ನುವುದು ತಿಳಿದು ಬಂದಿಲ್ಲ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರಾದರೂ ಆಕೆಗೆ ನೋವು ಮಾಡಿದರೇ? ಯಾರಾದರೂ ಕಿರುಕುಳ ನೀಡಿದರೇ, ಮನಸ್ಸಿಗೆ ನೋವಾಗುವಂತೆ ನಡೆದುಕೊಂಡರೇ ಎನ್ನುವುದು ಗೊತ್ತಾಗಿಲ್ಲ. ಯಾವುದನ್ನೂ ಹೇಳದೆಯೇ ಆಕೆ ಬಾರದ ಲೋಕಕ್ಕೆ ತೆರಳಿದ್ದಾಳೆ.
ಮಾನಸಿಕ ಅಸ್ವಸ್ಥನಿಂದ ಅವಾಂತರ: ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಕೊಲೆ
ತುಮಕೂರು: ಮಾನಸಿಕ ಅಸ್ವಸ್ಥರ (Mentally unstable) ಜತೆ ವ್ಯವಹರಿಸುವಾಗ ಎಷ್ಟು ಎಚ್ಚರವಿದ್ದರೂ ಸಾಲದು. ಅವರು ಯಾವಾಗ ಯಾವ ಮೂಡ್‌ನಲ್ಲಿ ಇರುತ್ತಾರೆ ಎನ್ನುವುದು ಗೊತ್ತಾಗುವುದಿಲ್ಲ. ಅದರಲ್ಲೂ ಅಗ್ರೆಸಿವ್ ವರ್ತನೆ (Aggressive Behaviour) ತೋರುವ ಮಂದಿ ಏನು ಮಾಡಬಲ್ಲರು ಎಂದು ಊಹಿಸಲು ಕೂಡಾ ಸಾಧ್ಯವಿಲ್ಲ.
ತುಮಕೂರು ಜಿಲ್ಲೆ (Tumkur News) ಪಾವಗಡ ಪಟ್ಟಣದಲ್ಲಿ ಹೀಗೇ ಆಗಿದೆ. ಮಾನಸಿಕ ಅಸ್ವಸ್ಥನೊಬ್ಬ ದೊಣ್ಣೆಯಿಂದ ಹೊಡೆದು ವ್ಯಕ್ತಿಯೊಬ್ಬರನ್ನು (Mentally unstable man kills other) ಕೊಂದೇ ಹಾಕಿದ್ದಾನೆ.
ಪಾವಗಡ ಪಟ್ಟಣದ ಸ್ವಾಗತ ಹೋಟೆಲ್ ಮುಂಭಾಗದಲ್ಲಿ ಅನಿಲ್ ಎಂಬ ಮಾನಸಿಕ ಅಸ್ವಸ್ಥ ಶಂಕರಪ್ಪ ಎಂಬ ವ್ಯಕ್ತಿಯನ್ನು ಹೊಡೆದೇ ಕೊಂದಿದ್ದಾನೆ.
ಪಾವಗಡ ಪಟ್ಟಣದಲ್ಲಿ ಕಳೆದ ಎರಡು ವರ್ಷದಿಂದ ಓಡಾಡಿಕೊಂಡಿದ್ದ ಮನೋರೋಗಿ ಅನಿಲ್ ಸೋಮವಾರ ರಾತ್ರಿ ಸ್ವಾಗತ ಹೋಟೆಲ್ ಬಳಿ ಇದ್ದ. ಆಗ ಅಲ್ಲಿಗೆ ಶಂಕರಪ್ಪ ಎಂಬವರು ಬಂದಿದ್ದರು. ತಮ್ಮ ಪಾಡಿಗೆ ಇದ್ದ ಅವರನ್ನು ಅನಿಲ್ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: Couple ends life : ಮಗನ ಸಾವಿನ ಕೊರಗು; ಕೃಷ್ಣರಾಜ ನಾಲೆಗೆ ಹಾರಿ ದಂಪತಿ ಆತ್ಮಹತ್ಯೆ
ತಂದೆಯನ್ನೇ ಕೊಂದು ಹಾಕಿದ್ದ ಅನಿಲ್
ಅನಿಲ್‌ಗೆ ವ್ಯಗ್ರತೆ ಹೊಸತೇನೂ ಅಲ್ಲ. ಆತ ತನ್ನ ಹುಚ್ಚಿನಿಂದ ಈ ಮೊದಲು ತನ್ನ ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ. ಕೆಲವು ಸಮಯ ಜೈಲಿನಲ್ಲಿದ್ದ ಆತನನ್ನು ಯಾವುದೋ ಕಾರಣಕ್ಕಾಗಿ ಬಿಡುಗಡೆ ಮಾಡಲಾಗಿತ್ತು. ಈಗ ಆತ ಮತ್ತೊಂದು ಕೊಲೆ ಮಾಡಿದ್ದಾನೆ. ಹೀಗಾಗಿ ಮತ್ತೆ ಜೈಲು ಪಾಲಾಗಲಿದ್ದಾನೆ.
ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಅನಿಲ್‌ನ ಹುಚ್ಚು ಮಿತಿ ಮೀರಿದೆ. ಅದೇ ಅತಿರೇಕದಲ್ಲಿ ಆತ ತಂದೆಯನ್ನು ಕೊಂದಿದ್ದ. ಅಷ್ಟಾದರೂ ಆತನ ಮಾನಸಿಕ ಸ್ಥಿತಿಯನ್ನು ಪರಿಗಣಿಸದೆ ಬಿಡುಗಡೆ ಮಾಡಿದ್ದು ಯಾಕೆ ಎಂದು ಊರಿನವರು ಪ್ರಶ್ನೆ ಮಾಡುತ್ತಿದ್ದಾರೆ. ಈಗಲಾದರೂ ಆತನನ್ನು ಜೈಲಿನಲ್ಲೇ ಉಳಿಸಿಕೊಳ್ಳಬೇಕು, ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಶಂಕರಪ್ಪನವರ ಮನೆಯವರ ಕಣ್ಣೀರಂತೂ ಕಡಲಾಗಿದೆ.