ದಾವಣಗೆರೆ: ವ್ಯಕ್ತಿಯೊಬ್ಬ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಳ್ಳಲು ಯತ್ನಿಸಿದ ಘಟನೆ (Self Harming) ನಗರದಲ್ಲಿ ಭಾನುವಾರ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ್ದಾನೆ. ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಮೊದಲು ಕತ್ತು ಕೊಯ್ದುಕೊಳ್ಳಲು ವ್ಯಕ್ತಿ ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು, ಆತನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಹೀಗಾಗಿ ಆಂಬ್ಯುಲೆನ್ಸ್ ಮೂಲಕ ನಗರದ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.
ಆಸ್ಪತ್ರೆಯಿಂದ ಎಸ್ಕೇಪ್
ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ತಡವಾಗಿದ್ದರಿಂದ ಆಸ್ಪತ್ರೆಯಿಂದ ವ್ಯಕ್ತಿ ಎಸ್ಕೇಪ್ ಆಗಿದ್ದಾನೆ. ಶಾಮನೂರು ರಸ್ತೆ ಮೂಲಕ ಓಡಿ ಹೋಗಿ ಹೈವೇಯಲ್ಲಿ ಮತ್ತೊಮ್ಮೆ, ಹೊಟ್ಟೆಗೆ ಚಾಕುವಿನಿಂದ ಇರಿದುಕೊಂಡು, ನಂತರ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ್ದಾರೆ. ಮತ್ತೆ ಸ್ಥಳೀಯರಿಂದ ಆತನನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಲಾಗಿದೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ | Assault Case : ಬಾಸುಂಡೆ ಬರುವಂತೆ ಪೊಲೀಸರಿಗೆ ಬಾರಿಸಿ ಪರಾರಿಯಾದರು ಅಕ್ಕಿ ಕಳ್ಳರು!
ಪತಿಗೆ ಬ್ಯಾಂಕ್‌ನಿಂದ ನೋಟಿಸ್; ಹೆದರಿ ಟಾಯ್ಲೆಟ್‌ನಲ್ಲಿ ಪತ್ನಿ ಆತ್ಮಹತ್ಯೆ
ಮೈಸೂರು: ಪತಿಗೆ ಬ್ಯಾಂಕ್ ನೋಟಿಸ್ (Bank Notice) ಕೊಟ್ಟಿದ್ದಕ್ಕೆ ಹೆದರಿ ಪತ್ನಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ದಾರುಣ ಘಟನೆ ಮೈಸೂರಿನ (Mysuru News) ಸಾಲಿಗ್ರಾಮ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ರಂಗಮ್ಮ (70) ಮೃತ ದುರ್ದೈವಿ.
ಪತಿ ಮಾಡಿದ ಸಾಲಕ್ಕೆ ಬ್ಯಾಂಕ್‌ನವರು ನೋಟಿಸ್ ಕಳುಹಿಸಿದ್ದರು. ಈ ನೋಟಿಸ್‌ಗೆ ಹೆದರಿದ ಪತ್ನಿ ರಂಗಮ್ಮ, ಮನೆಯ ಹಿಂಭಾಗದ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪತಿ ಯಣ್ಣೇಗೌಡ 6 ವರ್ಷಗಳ ಹಿಂದೆ ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಜಮೀನು, ಹೊಗೆಸೊಪ್ಪಿನ ಬ್ಯಾರನ್ ಆಧಾರದ ಮೇಲೆ ಸಾಲವನ್ನು ಪಡೆದಿದ್ದರು. ಅಸಲು, ಬಡ್ಡಿಯಿಂದ 8.50 ಲಕ್ಷ ರೂ. ಕಟ್ಟುವಂತೆ ಬ್ಯಾಂಕ್‌ನವರು ನೋಟಿಸ್ ನೀಡಿದ್ದರು.
ಇದನ್ನೂ ಓದಿ: Road Accident : ಟೆಂಪೋಗೆ ಸ್ಕೂಟರ್ ಡಿಕ್ಕಿ; ತಾಯಿ ಕಣ್ಣೇದರು ಒದ್ದಾಡಿ ಜೀವ ಬಿಟ್ಟ ಮಗ
ಬ್ಯಾಂಕ್ ನೋಟಿಸ್‌ಗೆ ಕಂಗಲಾಗಿ ಭಯಗೊಂಡ ರಂಗಮ್ಮ, ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. ಕುಟುಂಬಸ್ಥರು ಶೌಚಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ರಂಗಮ್ಮ ಪುತ್ರ ಶೆಟ್ಟಿಗೌಡ ಸಾಲಿಗ್ರಾಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.