ದಾವಣಗೆರೆ: ಹೊನ್ನಾಳಿ ತಾಲೂಕಿನ ಕಡದಕಟ್ಟೆ ಬಳಿ ನಡೆದ ಅರ್ಚಕನ ಹಂತಕರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅರ್ಚಕ ಕುಮಾರಸ್ವಾಮಿಯನ್ನು ಬಾಡಿಗೆ ಹಂತಕ ಮೂಲಕ ಹತ್ಯೆ ಮಾಡಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಅರ್ಚಕ ಕುಮಾರಸ್ವಾಮಿಯನ್ನು ಹೊಲದಲ್ಲಿ ಸೋಮವಾರ ಹತ್ಯೆ ಮಾಡಲಾಗಿತ್ತು. ಆದರೆ ಯಾವ ಕಾರಣಕ್ಕೆ ಹತ್ಯೆ ನಡೆ ಕೊಲೆ ಆಗಿತ್ತು. ಪೂಜಾರಿ ಮರ್ಡರ್ ಕೇಸ್ ಅನ್ನು ಹೊನ್ನಾಳಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ರಿಯಲ್ ಎಸ್ಟೇಟ್ ಯವಹಾರವೇ ಅರ್ಚಕನ ಹತ್ಯೆಗೆಕಾರಣ ಎಂದು ತಿಳಿದುಬಂದಿದೆ. ಹತ್ಯೆಯಲ್ಲಿ ಭಾಗಿಯಾದ ಮೂವರನ್ನು ಇದೀಘ ಬಂಧಿಸಲಾಗಿದೆ.
ಇದನ್ನೂ ಓದಿ: ಅರ್ಚಕನ ಹತ್ಯೆಗೈದು ಪರಾರಿಯಾದ ದುಷ್ಕರ್ಮಿಗಳು
ಕೊಲೆಯಾದ ಕುಮಾರಸ್ವಾಮಿ ಜೊತೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಮೋಹನ್ ಹಾಗೂ ದಿನೇಶ್ ಎಂಭುವವರು ಈ ವ್ಯವಹಾರಕ್ಕೆ ಸಂಬಂಧಿಸಿ ಕುಮಾರಸ್ವಾಮಿಯಿಂದ ₹20 ಲಕ್ಷ ಹಣ ಪಡೆದಿದ್ದರು. ಕೆಲ ಸಮಯದ ನಂತರ ಈ ಹಣವನ್ನು ಕುಮಾರಸ್ವಾಮಿ ವಾಪಸ್ ಕೊಡುವಂತೆ ಕೇಳಿದ್ದೇ ತಪ್ಪಾಗಿಹೋಯಿತು. ಹಣ ವಾಪಸ್ ನೀಡುವ ಬದಲಿಗೆ ಕುಮಾರಸ್ವಾಮಿಯ ಹೆಣವನ್ನೇ ಬೀಳಿಸುವ ನಿರ್ಧಾರ ಮಾಡಿದ್ದಾರೆ.
ತಾವೇ ಹತ್ಯೆ ಮಾಡಿದರೆ ಸಿಕ್ಕಿಕೊಳ್ಳಬಹುದು ಎಂಬ ಕಾರಣಕ್ಕೆ ಮೂವರಿಗೆ ಸುಪಾರಿ ನೀಡಿದ್ದಾರೆ. ಈ ಮೂವರೂ ಸೇರಿಕೊಂಡು ಕುಮಾರಸ್ವಾಮಿಯನ್ನು ಜಮೀನಿನಲ್ಲೆ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದರು.
ಮೂರು ಜನ ಬಾಡಿಗೆ ಹಂತಕರು ಸೇರಿ ಸುಪಾರಿ ನೀಡಿದ ಇಬ್ಬರನ್ನೂ ದಾವಣಗೆರೆ ಪೊಲೀರು ಬಂಧಿಸಿದ್ದಾರೆ. ಸುಪಾರಿ ನೀಡಿದ ಹೊನ್ನಾಳಿ ನಿವಾಸಿ ಮೋಹನ್, ಹಾಸನದ ದಿನೇಶ್, ಸುಪಾರಿ ಪಡೆದ ಹೊನ್ನಾಳಿ ತಾಲೂಕಿನ ಹಿಂಡಸಘಟ್ಟ ಗ್ರಾಮದ ಕಾರ್ತಿಕ್, ಪ್ರಾಣೇಶ್ ಹಾಗೂ ಸುನೀಲ್ ನಾಯ್ಕ ಎಂಬವರನ್ನು ಬಂಧಿಸಲಾಗಿದೆ ಎಂದು ದಾವಣಗೆರೆ ಎಸ್‌ಪಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ವೃದ್ಧನ ಕೈ ಕಟ್ಟಿ ಹತ್ಯೆ: ಎಂಟು ತಿಂಗಳಿಂದ ಜತೆಗಿದ್ದವನೇ ಮೂಟೆ ಮೂಟೆ ಹೊತ್ತೊಯ್ದ